ಜೂನ್ 15ರಿಂದ ಪ್ರಥಮ ಪಿಯುಸಿ ತರಗತಿಗಳು ಆರಂಭ

ಬೆಂಗಳೂರು, ಮೇ 14 : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ 2015-16ನೇ ಸಾಲಿನ ಪ್ರಥಮ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಜೂನ್ 15ರಿಂದ ಪಿಯುಸಿ ತರಗತಿಗಳು ಆರಂಭವಾಗಲಿವೆ. [SSLC ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಬುಧವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲಾಖೆಯೇ ಪಠ್ಯಪುಸ್ತಕಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಲಾಖೆಯ ವತಿಯಿಂದ ಅಧಿಕೃತವಾಗಿ ಬಿಡುಗಡೆಗೊಂಡಿರುವ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿದೆ.[ಎಸ್ಎಸ್ಎಲ್ಸಿ ಟಾಪರ್ ವಿಶ್ವಜೀತ್ ಹೆಗಡೆ ಸಂದರ್ಶನ]

PUC

ಶೈಕ್ಷಣಿಕ ವೇಳಾಪಟ್ಟಿ

* ಮೇ 18 - ಅರ್ಜಿ ವಿತರಣೆಗೆ ಕೊನೆ ದಿನ
* ಮೇ 23 - ಅರ್ಜಿ ಸಲ್ಲಿಕೆಗೆ ಕೊನೆ ದಿನ
* ಮೇ 27 - ವಿದ್ಯಾರ್ಥಿಗಳ ಪ್ರಥಮ ಪಟ್ಟಿ ಪ್ರಕಟ
* ಮೇ 30 - ಶುಲ್ಕ ಪಾವತಿಗೆ ಕಡೇ ದಿನ
* ಜೂನ್‌ 5 - ಎರಡನೇ ಪಟ್ಟಿ ಪ್ರಕಟ
* ಜೂನ್‌ 9 - ಶುಲ್ಕ ಪಾವತಿಸಲು ಕೊನೆ ದಿನ
* ಜೂನ್‌ 13 - 3ನೇ ಪಟ್ಟಿ ಪ್ರಕಟ
* ಜೂನ್‌ 17 - ಶುಲ್ಕ ಪಾವತಿಸಲು ಕೊನೆಯ ದಿನ
* ಜೂನ್‌ 27 - ದಂಡವಿಲ್ಲದೆ ದಾಖಲಾತಿಗೆ ಕೊನೆಯ ದಿನ
* ಜುಲೈ 8 - ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರು ದಾಖಲಾಗಲು ಕೊನೆಯ ದಿನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+