ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಕೆಲ ಕ್ರಮಗಳು ಇಲ್ಲಿವೆ

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 27 : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಅಲ್ಲಿ ಪಟಾಕಿ ಸ್ಪೋಟಗೊಂಡು ಅಷ್ಟು ಜನ ಸಾವನ್ನೊಪ್ಪಿದರು. ಇಲ್ಲಿ ಪಟಾಕಿ ಹಚ್ಚಲು ಹೋಗಿ ಕಣ್ಣು ಕಳೆದುಕೊಂಡರು. ಹೀಗೆ ಪಟಾಕಿಯಿಂದಾಗುವ ಅನಾಹುತಗಳನ್ನು ತಡೆಯಲು ಸಾರ್ವಜನಿಕರಿಗೆ ಕೆಲ ಉಪಯುಕ್ತ ಮಾಹಿತಿಗಳನ್ನು ನೀಡಲು ರಾಜ್ಯ ಅಗ್ನಿ ಶಾಮಕ ದಳ ಮುಂದಾಗಿದೆ.

ಈ ಬಾರಿಯ ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ಸೇವಾ ಇಲಾಖೆಯು ದೀಪಾವಳಿ ಆಚರಿಸುವ ಸಾರ್ವಜನಿಕರಿಗೆ ಕೆಲ ಕ್ರಮಗಳನ್ನು ಸೂಚಿಸಿದೆ. ಸುರಕ್ಷಿತ ಕ್ರಮಗಳು ಯಾವುವು ಎಂಬುವುದನ್ನು ತಿಳಿಯಲು ಮುಂದೆ ಓದಿ...

karnataka fire department suggestion for Deepavali festival

* ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲಿ ಪಟಾಕಿ ತಿಳಿಸತಕ್ಕದ್ದು.
* ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುಕ್ಷಿತ, ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಹಚ್ಚಬಾರದು.
* ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕ್ಕೊಳ್ಳುವಂತ ಬಟ್ಟೆಗಳನ್ನು ಧರಿಸತಕ್ಕದ್ದು, ದೊಗಲೆ ಬಟ್ಟೆ ಧರಿಸಬಾರದು.
* ಸುರ-ಸುರ ಬತ್ತಿ ಇತ್ಯಾದಿ ಪಟಾಕಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು.
* ಪಟಾಕಿ ಹಚ್ಚುವಾಗ ಅದರ ಮೇಲೆ ಬಾಗಬಾರದು. ಆದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು.
* ಯಾವುದೇ ಪಾತ್ರೆಗಳಲ್ಲಿ ಒಳಗೆ ಪಟಾಕಿಗಳನ್ನು ಇಟ್ಟು ಹಚ್ಚಬಾರದು.
* ಪಟಾಕಿಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಬಾರದು.
* ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು. ಹಾಗೂ ಪಟಾಕಿ ಪೊಟ್ಟಣಗಳನ್ನು ತೆರೆಯಬಾರದು.
* ಹಚ್ಚಲಾಗಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪನಃ ಪರೀಕ್ಷಿಸಲು ಪ್ರಯತ್ನಿಸಬಾರದು.
* ರಾಕೆಟ್ ಪಟಾಕಿಗಳನ್ನು ಬಳಸುವುದನ್ನು ಪೂರ್ಣವಾಗಿ ತಪ್ಪಿಸುವುದು ತಪ್ಪಿಸುವುದು ಉತ್ತಮ.
* ಪಟಾಕಿ ಹಚ್ಚುವಾಗ ಪಕ್ಕದಲ್ಲಿ ನೀರು ಇಟ್ಟುಕೊಳ್ಳುವುದು ಸುರಕ್ಷಿತ. ಅಕಸ್ಮಿಕವಾಗಿ ಸುಟ್ಟ ಗಾಯಗಳಾದರೆ ಕೂಡಲೇ ತಣ್ಣಿರನ್ನು ಸುರಿಯತಕ್ಕದ್ದು.

* ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು, ಖಾಯಿಲೆ ಇರುವವರು ಹಾಗೂ ಪ್ರಾಣಿಗಳನ್ನು ಗಮನಿಸಿ, ಅವರಿಗೆ ಆಗುವ ತೊಂದರೆಗಳನ್ನು ತಪ್ಪಿಸಿ. ಸಾಧ್ಯವಾದಷ್ಟು ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿಗಳನ್ನು ಹಚ್ಚುವುದನ್ನು ತಪ್ಪಿಸಿ.

ಈ ರೀತಿ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುವುದರ ಜತೆಗೆ ಸುರಕ್ಷತೆ ಕ್ರಮಗಳನ್ನು ನೀಡುತ್ತಿರುವ ಈ ಇಲಾಖೆಗೆ ನಮ್ಮ ನಿಮ್ಮೆಲ್ಲರ ಪರವಾಗಿ ಒಂದು ಸೆಲ್ಯೂಟ್....ಈ ಇಲಾಖೆ ತಿಳಿಸಿರುವ ಸುರಕ್ಷತೆ ಕ್ರಮಗಳನ್ನು ಎಲ್ಲರೂ ಪಾಲಿಸಿ ಆಗುವ ಅನಾಹುತಗಳನ್ನು ದೂರವಿಡೋಣ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka state fire and Emergency Service Department suggested safety measures to ensure an accident free deepavali festival-2016
Please Wait while comments are loading...