ಸೋಶಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ ನಕಲಿ ವಿದ್ಯುತ್ ಬಿಲ್: ಗ್ರಾಹಕರಿಗೆ ಬೆಸ್ಕಾಂ ಎಚ್ಚರಿಕೆ

ಬೆಂಗಳೂರು, ಜೂನ್‌ 15: ಮಿತಿಮೀರಿದ ವಿದ್ಯುತ್ ಬಿಲ್‌ಗಳ ಗೊಂದಲದ ನಡುವೆ, ಶೇ 50 ಸುಂಕ ಹೆಚ್ಚಳ ಹೊಂದಿರುವ ಫ್ಯಾಬ್ರಿಕೇಟೆಡ್ ಬಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಮೇ ಮತ್ತು ಜೂನ್ ತಿಂಗಳ ಬಳಕೆ ಮತ್ತು ಬಿಲ್ಲಿಂಗ್ ಅನ್ನು ನಕಲಿ ಬಿಲ್‌ನಲ್ಲಿ ಹೋಲಿಸಲಾಗಿದೆ. ಇದರಲ್ಲಿ ಬೆಸ್ಕಾಂ ಶೇ.50 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಸುಳ್ಳು ಹೇಳಲಾಗಿದೆ. ಇಂತಹ ಬಿಲ್‌ಗಳನ್ನು ನಂಬುವುದರಿಂದ ಗ್ರಾಹಕರು ದೂರವಿರಬೇಕು ಎಂದು ಬೆಸ್ಕಾಂ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

Karnataka: Fake electricity bills are going viral on social media: BESCOM warns consumers

'ನಕಲಿ ಬಿಲ್‌ನಲ್ಲಿ 131 ಯೂನಿಟ್‌ಗಳ ಬಳಕೆ ( ಮೇ 2023 ) ಬಿಲ್ ಮೊತ್ತ 1,162 ರೂ. ಆಗಿದೆ. 2023 ರ ಜೂನ್‌ನಲ್ಲಿ 163 ಯೂನಿಟ್ ಬಳಕೆಗೆ 2,166 ರೂ. ಬಿಲ್ ಮೊತ್ತವನ್ನು ನೀಡಲಾಗಿದೆ ಎಂದು ನಮೂದಿಸಲಾಗಿದೆ. ಬಿಲ್‌ನಲ್ಲಿ ಯಾವುದೇ ಆರ್ ಆರ್ ಸಂಖ್ಯೆ, ಖಾತೆ ಸಂಖ್ಯೆ, ಹೆಸರು ಮತ್ತು ಗ್ರಾಹಕರ ವಿಳಾಸ ಇಲ್ಲ. ಇದು ಅಸಲಿಯಲ್ಲ' ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೆಚ್ಚುವರಿಯಾಗಿ, ಬೆಸ್ಕಾಂ ಮೇ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 55 ಪೈಸೆ ಇಂಧನ ಹೊಂದಾಣಿಕೆ ವೆಚ್ಚವನ್ನು (ಎಫ್‌ಎಸಿ) ವಿಧಿಸಿದೆ ಎಂದು ನಕಲಿ ಬಿಲ್‌ನಲ್ಲಿ ತಿಳಿಸಲಾಗಿದೆ. ಆದರೆ, ಬೆಸ್ಕಾಂ ಗ್ರಾಹಕರಿಂದ ಎಫ್‌ಎಸಿ ಶುಲ್ಕವಾಗಿ ಪ್ರತಿ ಯೂನಿಟ್‌ಗೆ ಕೇವಲ 6 ಪೈಸೆ ಮಾತ್ರ ಸಂಗ್ರಹಿಸಿದೆ ಎಂದು ಬೆಸ್ಕಾಂ ತಿಳಿಸಿದೆ.

ಗ್ರಾಹಕರು ಬಿಲ್‌ನಲ್ಲಿ ಯಾವುದೇ ಅನುಮಾನಗಳಿದ್ದಲ್ಲಿ ಬೆಸ್ಕಾಂ ಉಪವಿಭಾಗದ ಕಚೇರಿಗೆ ತೆರಳಿ ಸ್ಪಷ್ಟನೆ ಪಡೆಯಬಹುದು. ನಾಗರಿಕರು ಇಂತಹ ನಕಲಿ ಬಿಲ್‌ಗಳನ್ನು ನಂಬಬಾರದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ ನಂತರ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+