ಗ್ರಾ.ಪಂ ಪಿಡಿಒ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 06 : ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ವೇಳಾ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

815 ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ), 809 ಗ್ರಾಮ ಪಂಚಾಯತಿ ಕಾರ್ಯದರ್ಶಿ ಒಟ್ಟು 1624 ಹುದ್ದೆಗಳಿಗೆ 29 ಜನವರಿ 2017 ಭಾನುವಾರದಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಸ್ಪರ್ಧೆ ನಡೆಸಲಿದೆ. 1624 ಹುದ್ದೆಗಳಿಗೆ ಸುಮಾರು 362899 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. [ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ, ಪಿಡಿಒ ನೇಮಕಾತಿ ವಿವರ]

Karnataka Examinations Authority has announced PDO and Secretary Grade-1 Posts examinations

ಮೊದಲ ಪತ್ರಿಕೆ : 29 ಜನವರಿ 2017 ರಂದು ಬೆಳಿಗ್ಗೆ 10.30 ರಿಂದ 12.30ರ ವರೆಗೆ ಮೊದಲ ಪತ್ರಿಕೆ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಎರಡನೇ ಪ್ರತಿಕೆ : ಮದ್ಯಾಹ್ನ 2.30 ರಿಂದ ಸಂಜೆ 4.30 ರ ವರೆಗೆ "ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಜ್ಞಾನ- ಕರ್ನಾಟಕ ಗ್ರಾಮ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಹಾಗೂ ನಿಯಮಗಳು ಮತ್ತು ತಿದ್ದುಪಡಿಗಳು" ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ httpr//kea.kar,nic.in ಗೆ ಭೇಟಿ ನೀಡಲು ಕೋರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Examinations Authority has announced the timetable for Panchayath Development Officer and Grama Panchayath Secretary Grade-1 posts examinations, Exams on 29 January 2017.
Please Wait while comments are loading...