ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಕ್ಕಾಗಿ ಆಹ್ವಾನ
ಬೆಂಗಳೂರು, ಏಪ್ರಿಲ್ 1 : ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು 2016-17ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗಳಿಗೆ ಅರ್ಜಿಗಳನ್ನು/ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ.
ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ (ಸರ್ಕಾರಿ/ಸರ್ಕಾರೇತರ ಸಂಸ್ಥೆಗಳು/ಕಂಪನಿಗಳು/ಟ್ರಸ್ಟ್ ಗಳು) ತಲಾ ಒಂದು ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಪ್ರಮಾಣಪತ್ರವನ್ನು ನೀಡಲಾಗುವುದು.

ಅರ್ಜಿ/ನಾಮನಿರ್ದೇಶನ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನವಾಗಿದೆ. ಭರ್ತಿಮಾಡಿದ ಅರ್ಜಿಗಳನ್ನು ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕೊಠಡಿ ಸಂಖ್ಯೆ 704, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, 4ನೇ ಹಂತ, ಬೆಂಗಳೂರು - 560 001 ಇವರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ
ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಭವನ, ನಂ 49, ಚರ್ಚ್ ಸ್ಟ್ರೀಟ್, ಬೆಂಗಳೂರು - 560 001, ಮಹಾ ನಿರ್ದೇಶಕರು ಇವರನ್ನು ಸಂಪರ್ಕಿಸಬಹುದು.
ಇಲ್ಲಿ ಕೂಡ ವಿಚಾರಣೆ ಮಾಡಬಹುದು
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ' ಹಸಿರು ಭವನ', ದೊರೆಸಾನಿಪಾಳ್ಯ ಫಾರೆಸ್ಟ್ ಕ್ಯಾಂಪಸ್ ವಿನಾಯಕನಗರ ಸರ್ಕಲ್, ಜೆ.ಪಿ. ನಗರ, 5ನೇ ಫೇಸ್, ಬೆಂಗಳೂರು - 560 078, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ನೆಲಮಹಡಿ, ವನವಿಕಾಸ 18ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು - 560 003, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಕಚೇರಿಗಳಲ್ಲಿ ಸಂಪರ್ಕಿಸಬಹುದು.
ಈ ಕೆಳಕಂಡ ವೆಬ್‍ಸೈಟ್‍ಗಳಲ್ಲಿ www.parisara.kar.nic.in, www.kspcb.gov.in, www.empri.kar.nic.in, www.kbb.kar.nic.in, www/karunadu/gov/in/Ida ಸಹ ನೋಡಬಹುದು.












Click it and Unblock the Notifications