PM Modi: ಪ್ರಧಾನಿ ಮೋದಿ ರಾಜ್ಯ ಭೇಟಿಯಿಂದಾಗುವ ಲಾಭವೇನು?
ಬೆಂಗಳೂರು ಏಪ್ರಿಲ್ 27: ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಕೊನೆಯ ಹಂತದ ಪ್ರಚಾರದಲ್ಲಿ ಅಲೆಯನ್ನು ಸಂಪೂರ್ಣವಾಗಿ ತಮ್ಮ ಪರವಾಗಿ ತಿರುಗಿಸುವ ನಿರೀಕ್ಷೆಯಲ್ಲಿವೆ.
ಕಾಂಗ್ರೆಸ್ ಗೆಲ್ಲುವ ಭರವಸೆಯಲ್ಲಿದ್ದರೆ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಆಧರಿಸಿದೆ, ಈಗಾಗಲೇ ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದೆ. ಸರಳ ಬಹುಮತಕ್ಕಾಗಿ ಪಕ್ಷಗಳು 113 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಬಿಜೆಪಿ ತನ್ನ ಮೇಲಿರುವ ಆಪರೇಷನ್ ಸರ್ಕಾರ ಎಂಬ ಹಣೆ ಪಟ್ಟಿಯನ್ನು ತೊಡೆದು ಹಾಕಲು ಪ್ರಯತ್ನಸುತ್ತಿದೆ.

ದಕ್ಷಿಣದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ಏಕೈಕ ರಾಜ್ಯವನ್ನು ಉಳಿಸಿಕೊಳ್ಳಬೇಕಾದರೆ, ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯಲು ಮೋದಿಯವರ ವರ್ಚಸ್ಸು, ಉಪಸ್ಥಿತಿ, ಜನಪ್ರಿಯತೆ ಮತ್ತು ಮನವೊಲಿಸುವ ಕೌಶಲ್ಯಗಳು ಬೇಕಾಗುತ್ತವೆ ಎಂದು ಸೋಫಾಲೊಜಿಸ್ಟ್ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.
ಅದಕ್ಕಾಗಿಯೇ ಮೋದಿಯವರ ಕೊನೆಯ ಹಂತದ ಪ್ರಚಾರವು ಬಿಜೆಪಿಗೆ ಮಹತ್ವದ್ದಾಗಿದೆ ಎಂದು ಶಾಸ್ತ್ರಿ ಹೇಳಿದರು. ಹೀಗಾಗಿ ಬಿಜೆಪಿ ರಾಜ್ಯ ಚುನಾವಣೆಗಳನ್ನು ಗೆಲ್ಲಲು ಪ್ರಧಾನಿಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮೋದಿ ಅವರು ಆರು ದಿನಗಳಲ್ಲಿ ಸುಮಾರು 15 ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಇದು ಬಿಜೆಪಿ ಪ್ರಚಾರಕ್ಕೆ ಮಹತ್ವದ ತಿರುವನ್ನು ನೀಡಲಿದೆ.
ರಾಜ್ಯದಲ್ಲಿ ಮೋದಿ ಪ್ರಚಾರ
ಏಪ್ರಿಲ್ 28 ಮತ್ತು 29 ಮತ್ತು ಮೇ 3, 4, 6 ಮತ್ತು 7 ರಂದು ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. 12 ರಿಂದ 15 ರವರೆಗೆ ್ಯಾಲಿಗಳು, ಸಾರ್ವಜನಿಕ ಸಭೆಗಳು, ರೋಡ್ ಶೋಗಳನ್ನು ನಡೆಸಲಿದ್ದಾರೆ. ಈ ಬಾರಿ 'ಡಬಲ್-ಎಂಜಿನ್' ಸರ್ಕಾರ ರಚನೆ ಮಾಡಲು ಬಿಜೆಪಿ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಿದೆ.
ಬೆಳಗಾವಿಯಿಂದ ಮೋದಿ ಪ್ರಚಾರ ಆರಂಭಿಸಲಿದ್ದಾರೆ.. ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯ ಚಿಕ್ಕೋಡಿ, ಕಿತ್ತೂರು ಮತ್ತು ಕುಡಚಿ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಉತ್ತರ ಕನ್ನಡಕ್ಕೂ ಭೇಟಿ ನೀಡಲಿರುವ ಮೋದಿ ಅವರೊಂದಿಗೆ ಸುಮಾರು ಒಂದು ವಾರದ ನಂತರ ಕೋವಿಡ್‌ನಿಂದ ಚೇತರಿಸಿಕೊಂಡಿರುವ ರಾಜನಾಥ್ ಸಿಂಗ್ ಕೂಡ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಆಗಮನದಿಂದ ಬಿಜೆಪಿಯತ್ತ ಜನರ ಒಲವು ತೋರುವ ವಾತಾವರಣ ನಿರ್ಮಾಣವಾಗಿರುವುದರಿಂದ ಮೋದಿ ಕಾರ್ಯಕ್ರಮದ ಬಗ್ಗೆ ಬಿಜೆಪಿ ಉತ್ಸುಕವಾಗಿದೆ.
ಪ್ರಧಾನಿ ಮೋದಿ ರಾಜ್ಯ ಭೇಟಿಯಿಂದಾಗುವ ಲಾಭವೇನು?
ಆದಾಗ್ಯೂ, ಮೋದಿ ಆಗಮನದಿಂದ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು. ಮೋದಿಯವರು ತಮ್ಮ ಮತಗಳನ್ನು 1-2% ರಷ್ಟು ಕಡಿಮೆ ಮಾಡುತ್ತಾರೆ. ಇದರಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. 2018 ರಲ್ಲಿ, ಮೋದಿ ಅವರು ಕೊನೆಯ ಹಂತದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದರು, ಆದರೆ ಅವರು ಬಿಜೆಪಿಯ ಭವಿಷ್ಯವನ್ನು ಗಮನಾರ್ಹವಾಗಿ ಸುಧಾರಿಸಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ.
ಜನವರಿಯಿಂದ ಎಂಟು ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಬಾರಿ ಮೋದಿ ಪ್ರಚಾರ ರಾಜ್ಯ ಬಿಜೆಪಿಗೆ ಅದೆಷ್ಟು ಲಾಭ ತಂದು ಕೊಡಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications