ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರಾಹುಲ್ ಗಾಂಧಿ: ಒಂದಷ್ಟು ಮೆಚ್ಚುಗೆ, ಮತ್ತಷ್ಟು ವ್ಯಂಗ್ಯ!

|
Google Oneindia Kannada News

ಮಂಗಳೂರು, ಏಪ್ರಿಲ್ 27: "ಇದು ಕರ್ನಾಟಕದ ಜನರ ಮನ್ ಕಿ ಬಾತ್..." ಎನ್ನುತ್ತಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.

ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ನಿಮಿತ್ತ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಆಗಮಿಸಿರುವ ರಾಹುಲ್ ಗಾಂಧಿ, ಇಂದು(ಏ.27) ಕರಾವಳಿ ಭಾಗದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಎಲ್ಲೇ ಹೋದರೂ ಸಾಮಾಜಿಕ ಜಾಲತಾಣಗಳಲ್ಲಿ 'ರಾಹುಲ್ ಗಾಂಧಿ' ಹ್ಯಾಶ್ ಟ್ಯಾಗ್ ಹುಟ್ಟು ಪಡೆಯುತ್ತದೆ. ಅವರನ್ನು ಹೊಗಳುವ, ತೆಗಳುವ, ಕಾಲೆಳೆಯುವ ಕಾರ್ಯ ನಡೆಯುತ್ತಲೇ ಇರುತ್ತದೆ. ಅದಕ್ಕೆ ಅವರ ಈ ಬಾರಿಯ ಕರ್ನಾಟಕ ಭೇಟಿಯೂ ಹೊರತಾಗಿಲ್ಲ.

Array

ಕನ್ನಡಿಗರಿಗಾಗಿ ಹೋರಾಡುವ ರಾಹುಲ್

ರಾಹುಲ್ ಗಾಂಧಿಯವರಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಕನ್ನಡಿಗರು ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತಾರೆ. ಏಕೆಂದರೆ ಅವರು ಕನ್ನಡಿಗರಿಗಾಗಿ ಹೋರಾಟ ನಡೆಸುತ್ತಾರೆ ಎಂದು ರಾಹುಲ್ ಬಗೆಗಿನ ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ ಪಂಪಿ ರಾಜಪೂತ್.

'ರಾಹುಲ್ ಗಾಂಧಿ ಇಷ್ಟು ಧೈರ್ಯವಂತರೆಂದು ನಂಬಲಾಗುತ್ತಿಲ್ಲ!' 'ರಾಹುಲ್ ಗಾಂಧಿ ಇಷ್ಟು ಧೈರ್ಯವಂತರೆಂದು ನಂಬಲಾಗುತ್ತಿಲ್ಲ!'

ಕಾಂಗ್ರೆಸ್ ಇಷ್ಟವಾಗುವುದೇಕೆ?

ನಾನು ಕಾಂಗ್ರೆಸ್ ಅನ್ನು ಇಷ್ಟಪಡುವುದೇಕೆ ಗೊತ್ತೆ?
ಅವರು ಎಂದಿಗೂ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಯನ್ನು ನಂಬುವುದಿಲ್ಲ, ಸುಪ್ರೀಂ ಕೋರ್ಟ್ ಅನ್ನೂ ನಂಬುವುದಿಲ್ಲ, ಚುನಾವಣಾ ಆಯೋಗ, ಇವಿಎಂ, ಆರ್ ಬಿಐ, ಪ್ರಧಾನಿ, ಜಿಡಿಪಿ ನಂಬರ್, ರಾಷ್ಟ್ರಪತಿ ಯಾರನ್ನೂ ಅವರು ನಂಬುವುದಿಲ್ಲ. ಆದರೆ ಅವರು ನಂಬುವುದು ರಾಹುಲ್ ಗಾಂಧಿಯವರನ್ನು ಮಾತ್ರ! ಎಂದು ಕುಟುಕಿದ್ದಾರೆ ಮಂದಿರ್ ಚವಾನ್.

ರೆಡ್ಡಿ ಸಹೋದರರಿಗೆ ಟಿಕೆಟ್, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ರೆಡ್ಡಿ ಸಹೋದರರಿಗೆ ಟಿಕೆಟ್, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮೋದಿ ವಿರುದ್ಧ ರಾಹುಲ್ ಅಂದ್ರೆ...

ರಾಹುಲ್ ಗಾಂಧಿ ತೂಕದ ವ್ಯಕ್ತಿ ಅಲ್ಲ ಎಂಬುದು ಕಾಂಗ್ರೆಸ್ಸಿಗೆ ಯಾಕೆ ತಿಳಿಯುತ್ತಿಲ್ಲ? ಅವರಿಂದ ತೂಕದ ನಡೆಯನ್ನೇನನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಮೋದಿ ಎದುರು ರಾಹುಲ್ ಗಾಂಧಿಯವರನ್ನು ನಿಲ್ಲಿಸುವುದು ಎಂದರೆ ಖಲಿ(ಕುಸ್ತಿಪಟು) ವಿರುದ್ಧ ರಾಜ್ಪಾಲ್ ಯಾದವ್ ನನ್ನು ನಿಲ್ಲಿಸಿದಂತೆ ಎಂದಿದ್ದಾರೆ ಅವಿನಾಶ್.

5 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ?

ಕಳೆದು ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ರಾಹುಲ್ ಗಾಂಧಿಯವರೇ ಹೇಳಲಿ. ಯಾಕಾಗಿ ಕನ್ನಡಿಗರು ಕಾಂಗ್ರೆಸ್ಸನ್ನು ನಂಬಬೇಕು? ಸಮಾಜವನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದಿರುವುದನ್ನು ಬಿಟ್ಟರೆ ಇನ್ನೇನೂ ಇಲ್ಲ. ಮೋದಿಯವರ ವಿರುದ್ಧ ಮಾತನಾಡುವುದನ್ನು ಬಿಟ್ಟರೆ ರಾಹುಲ್ ಗಾಂಧಿಯವರಿಗೆ ಇನ್ನೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ ಸುರೇಶ್ ಲಾಲ್ ಪ್ರಸಾದ್.

ರಾಹುಲ್ ಗಾಂಧಿ ಕನ್ನಡದಲ್ಲಿ ಮಾತನಾಡಲಿ!

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಹಿಂದಿ ಸೈನ್ ಬೋರ್ಡ್ ಗಳನ್ನು ಕಿತ್ತೆಸೆದಿದೆ. ಆದರೆ ರಾಹುಲ್ ಗಾಂಧಿಯವರು ಮಾತ್ರ ಕರ್ನಾಟಕದಲ್ಲಿ ಹಿಂದಿಯಲ್ಲೇ ಪ್ರಚಾರ, ಭಾಷಣ ಮಾಡುತ್ತಿದ್ದಾರೆ. ಯಾವ ನೆಲದಲ್ಲಿ ಹಿಂದಿಗೆ ಬೆಲೆ ಇಲ್ಲವೋ ಅಲ್ಲಿ ಕನ್ನಡ ಅಥವಾ ಇಂಗ್ಲಿಷಿನಲ್ಲಿ ರಾಹುಲ್ ಗಾಂಧಿ ಮಾತನಾಡಬೇಕಲ್ಲವೇ? ಎಂದು ಕಾಲೆಳೆದಿದ್ದಾರೆ ಜೆ ಕೆ ಮಿಶ್ರಾ.

English summary
Karnataka assembly elections 2018: Congress president Rahul Gandhi is in karnataka for campaign. He launched party's Manifesto today. Here are twitter comments on his Karnataka visit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X