Karnataka Elections: ನಿಷ್ಠಾವಂತರಿಗೆ ಟಿಕೆಟ್ ಕೊಡಿಸುವ ಕದನದಲ್ಲಿ ಡಿಕೆಶಿಗೆ ಮುನ್ನಡೆ-ಸಿದ್ದರಾಮಯ್ಯಗೆ ಹಿನ್ನಡೆ-Inside Story
ಬೆಂಗಳೂರು, ಏಪ್ರಿಲ್ 10: ಮೇ 10 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ( Karnataka Assembly Elections 2023 ) ನಡೆಯಲಿದೆ. ಕಾಂಗ್ರೆಸ್ ( Congress ) ಪಕ್ಷವು ಇದುವರೆಗೆ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ 58 ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಕೇಂದ್ರ ಚುನಾವಣಾ ಸಮಿತಿ (CEC) ದೆಹಲಿಯಲ್ಲಿ ಸೋಮವಾರ ಸಭೆ ನಡೆಸುತ್ತಿದೆ. ಸಿದ್ದರಾಮಯ್ಯ ( Siddaramaiah ) ಮತ್ತು ಡಿಕೆ ಶಿವಕುಮಾರ್ ( DK Shivakumar ) ನಿಷ್ಠರ ನಡುವೆ ಹಲವಾರು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಿಷ್ಠಾವಂತರಿಗೆ ಟಿಕೆಟ್ ಸಿಗುವಂತೆ ಮಾಡಲು ಉಭಯ ನಾಯಕರು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ, ಕಾಂಗ್ರೆಸ್ ಹಾಲಿ ಶಾಸಕರು ಮತ್ತು ಪಕ್ಷದ ಉನ್ನತ ನಾಯಕರ ಹೆಸರನ್ನು ಘೋಷಿಸಿದೆ. ಇದು ಹೆಚ್ಚು ವಿರೋಧವನ್ನು ಎದುರಿಸಲಿಲ್ಲ. ಆದರೆ, 42 ಅಭ್ಯರ್ಥಿಗಳ ಎರಡನೇ ಪಟ್ಟಿ ಹಲವು ಕ್ಷೇತ್ರಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ಮೊದಲೆರಡು ಪಟ್ಟಿಗಳಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಎಂಟು ನಿಷ್ಠಾವಂತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏತನ್ಮಧ್ಯೆ, ಸಿದ್ದರಾಮಯ್ಯ ಅವರು ತಮ್ಮ ಏಳು ನಿಷ್ಠಾವಂತರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಕಾಂಗ್ರೆಸ್ ಟಿಕೆಟ್ ಪಡೆದಿರುವ ಸಿದ್ದರಾಮಯ್ಯ ನಿಷ್ಠಾವಂತರು
ಅಭ್ಯರ್ಥಿಯ ಹೆಸರು- ಕ್ಷೇತ್ರ
ಸಂತೋಷ ಲಾಡ್ - ಕಲಘಟಗಿ
ಎಚ್ ಆಂಜನೇಯ - ಹೊಳಲ್ಕೆರೆ
ಕಿಮ್ಮನೆ ರತ್ನಾಕರ- ತೀರ್ಥಹಳ್ಳಿ
ಕೃಷ್ಣಮೂರ್ತಿ- ಕೊಳ್ಳೇಗಾಲ
ಅಲ್ಲಮಪ್ರಭು ಪಾಟೀಲ್ - ಕಲಬುರಗಿ ದಕ್ಷಿಣ
ಇಕ್ಬಾಲ್ ಅನ್ಸಾರಿ - ಗಂಗಾವತಿ
ಬಿಆರ್ ಯಾವಗಲ್ - ನರಗುಂದ
ಕಾಂಗ್ರೆಸ್ ಟಿಕೆಟ್ ಪಡೆದಿರುವ ಡಿಕೆ ಶಿವಕುಮಾರ್ ನಿಷ್ಠಾವಂತರು
ಅಭ್ಯರ್ಥಿಯ ಹೆಸರು - ಕ್ಷೇತ್ರ
ಡಿ ಸುಧಾಕರ - ಹಿರಿಯೂರು
ಕೆ.ಸಿ.ವೀರೇಂದ್ರ - ಚಿತ್ರದುರ್ಗ
ದರ್ಶನ್ ಧ್ರುವನಾರಾಯಣ - ನಂಜನಗೂಡು
ಬೇಲೂರು ಗೋಪಾಲಕೃಷ್ಣ - ಸಾಗರ
ಬಸವರಾಜ ಶಿವಗಂಗಾ - ಚನ್ನಗಿರಿ
ಮಹಾಂತೇಶ ಕಡಾಡಿ - ಗೋಕಾಕ
ಆನಂದ್ ಕೆ ಎಸ್ - ಕಡೂರು
ಕೇಶವ ರಾಜಣ್ಣ - ಯಲಹಂಕ

ಎರಡನೇ ಪಟ್ಟಿ ಬಿಡುಗಡೆಯಾದ ನಂತರ, ಹೊಸ ಮುಖಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ನಿರ್ಧರಿಸಿದ್ದರಿಂದ ಕೆಲವು ಪ್ರಮುಖರ ಹೆಸರುಗಳು ಕಾಣಿಸಿಕೊಂಡಿಲ್ಲ.
ಟಿಕೆಟ್ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ನಿಷ್ಠಾವಂತರು ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದು, ಕೆಲವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ರಘು ಆಚಾರ್ ಅವರು ಏಪ್ರಿಲ್ 14 ರಂದು ಜೆಡಿಎಸ್ ಸೇರಲಿದ್ದು, ಏಪ್ರಿಲ್ 17 ರಂದು ಚಿತ್ರದುರ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಶಿವಕುಮಾರ್ ನಿಷ್ಠಾವಂತ ಕೆ ಸಿ ವೀರೇಂದ್ರ ( ವಿರೇಂದ್ರ ಪಪ್ಪಿ ) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಡೂರಿನ ಮತ್ತೊಬ್ಬ ಜೆಡಿಎಸ್ ವೈಎಸ್‌ವಿ ದತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅವರಿಗೆ ಟಿಕೆಟ್ ಕೊಡಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಅವರ ಮತ್ತೊಬ್ಬ ಬೆಂಬಲಿಗ ಆನಂದ್ ಕೆ ಎಸ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಗೋಕಾಕದಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಮಹಾಂತೇಶ ಕಡಾಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 2019 ರಲ್ಲಿ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅಶೋಕ್ ಪೂಜಾರಿ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದರು. ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಪೂಜಾರಿ ನಾಲ್ಕು ಬಾರಿ ರಮೇಶ್ ಜಾರಕಿಹೊಳಿ ವಿರುದ್ಧ ನಿಂತು ಸೋತಿದ್ದಾರೆ. ಸೋಮವಾರ ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಪೂಜಾರಿ ನಿರ್ಧರಿಸಲಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ಆಪ್ತ ಎನ್ನಲಾದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ನಾಗರಾಜ್ ಚಬ್ಬಿ ಕಲಘಟಗಿಯಿಂದ ಟಿಕೆಟ್ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡು ದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ. ಅವರು ಕಲಘಟಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಬೇರೆ ಪಕ್ಷಕ್ಕೆ ಸೇರುವ ಮೂಲಕ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಪಕ್ಷದ ವಿರುದ್ಧ ಬಂಡಾಯವೇಳಲು ಇನ್ನಷ್ಟು ಮುಖಂಡರು ಮುಂದಾಗಿದ್ದಾರೆ.












Click it and Unblock the Notifications