ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ 135 ಸೀಟು ನೀಡಿದ್ದ ಬಿಬಿಸಿ ಸಮೀಕ್ಷೆ ಶುದ್ಧ ಸುಳ್ಳು!

|
Google Oneindia Kannada News

Recommended Video

Karnataka Elections 2018 : ಸಮೀಕ್ಷೆ ಶುದ್ಧ ಸುಳ್ಳು, ಬಿ ಬಿ ಸಿ ಸ್ಪಷ್ಟನೆ | Oneindia Kannada

ಬೆಂಗಳೂರು, ಮೇ 08: ಕಳೆದ ಒಂದು ದಿನದಿಂದ whatsapp, ಫೇಸ್ ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದ ಬಿಬಿಸಿ ಸಮೀಕ್ಷೆ ಸುದ್ದಿ ಶುದ್ಧ ಸುಳ್ಳು!

ಹಾಗಂತ ಸ್ವತಃ ಬಿಬಿಸಿ ಇಂಡಿಯಾ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಈ ಸರ್ವೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅದು ಹೇಳಿದೆ.

Tv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂTv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂ

ಈ ಸರ್ವೆಯ ಪ್ರಕಾರ ಮೇ 15 ರಂದು ಹೊರಬೀಳಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ(ಮತದಾನ ಮೇ 12) ದಲ್ಲಿ ಬಿಜೆಪಿ 135 ಸೀಟು ಪಡೆಯುತ್ತದೆ ಎನ್ನಲಾಗಿತ್ತು. ಜೆಡಿಎಸ್ 45 ಸೀಟು ಪಡೆದರೆ, ಕಾಂಗ್ರೆಸ್ ಕೇವಲ 35 ಸ್ಥಾನ ಮತ್ತು ಇತರರು 19 ಸ್ಥಾನ ಪಡೆಯುತ್ತಾರೆಂದು ಈ ಸರ್ವೆಯಲ್ಲಿ ಹಾಕಲಾಗಿತ್ತು. ಆದರೆ ಈ ಸಮೀಕ್ಷೆಯೇ ಸುಳ್ಳು ಎಂದು ಬಿಬಿಸಿ ಹೇಳಿರುವುದು, ಈ ಸುದ್ದಿ ಕೇಳಿ ಬಿಜೆಪಿಗೆ ಬಹುಮತ ಸಿಗುತ್ತದೆ ಎಂದುಕೊಂಡವರಿಗೆಲ್ಲ ಭ್ರಮನಿರಸನವಾದಂತಾಗಿದೆ.

ಬಿಬಿಸಿ ಲೋಗೋದೊಂದಿಗೆ ಹರಿದಾಡುತ್ತಿದ್ದ ನ್ಯೂಸ್

ಬಿಬಿಸಿಯ ಅಧಿಕೃತ ಲೋಗೋ ಬಳಸಿದ್ದ ಈ ಸುದ್ದಿಯನ್ನು ಸಾಕಷ್ಟು ಜನ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದರು. 'ಜನತಾ ಕಿ ಬಾತ್' ಹೆಸರಿನಲ್ಲಿ ಸುಮಾರು 10.20 ಲಕ್ಷ ಜನರ ಬಳಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 2013 ರ ಚುನಾವಣೆಗಿಂತ 95 ಸ್ಥಾನ ಹೆಚ್ಚು ಗಳಿಸಿ, ಬಹುಮತ ಪಡೆಯಲಿದೆ. ಸ್ಪಷ್ಟ ಬಹುಮತ ಪಡೆಯುವ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಂತಾದವರು ಚುನಾವಣೆಗೂ ಮುನ್ನ ನಡೆಸಿದ ಪ್ರಚಾರಗಳು ಬಿಜೆಪಿಗೆ 125-135 ಸ್ಥಾನ ಗಳಿಸಿಕೊಡಲಿವೆ ಎಂದು ಈ ಸಂದೇಶದಲ್ಲಿ ಹೇಳಲಾಗಿತ್ತು!

ಜೆಡಿಎಸ್-ಪಕ್ಷೇತರ ಕಮಾಲ್

ಜೆಡಿಎಸ್ ಪಕ್ಷ ಸುಮಾರು 45 ಸ್ಥಾನ ಗಳಿಸಿದರೆ ಪಕ್ಷೇತರ ಅಭ್ಯರ್ಥಿಗಳಲ್ಲಿ ಬರೋಬ್ಬರಿ 19 ಜನ ಗೆಲ್ಲಲಿದ್ದಾರೆ ಎಂದು ಈ ಸರ್ವೆ ಹೇಳಿತ್ತು. ಆದರೆ ಈ 19 ಜನ ಯಾರಿರಬಹುದು ಎಂಬ ಕುರಿತು ಯಾವುದೇ ಮಾಹಿತಿ ಇರಲಿಲ್ಲ! ಆದರೆ ಈ ಸಂದೇಶದ ಜಾಡು ಹಿಡಿದು ಹೊರಟಾಗಿ ಜನತಾ ಕಿ ಬಾತ್ ಎಮಬ ಯಾವುದೇ ಸಂಸ್ಥೆಯೂ ಇಂಥ ಸಮೀಕ್ಷೆ ಮಾಡಿಲ್ಲ ಎಂಬುದು ದೃಢವಾಯಿತು. ಈ ಸಮೀಕ್ಷೆಯ ಯಾವ ಮಾಹಿತಿಗೂ ಸ್ಪಷ್ಟ ಪುರಾವೆಗಳಿಲ್ಲ.+

ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?

ಕಾಂಗ್ರೆಸ್ ಹೀನಾಯ ಸ್ಥಿತಿ!

ಈ ಸಮೀಕ್ಷೆಯ ಸುದ್ದಿಯಲ್ಲಿ ಕಾಂಗ್ರೆಸ್ಸಿಗೆ ಕೇವಲ 3 ಸ್ಥಾನ ನೀಡಲಾಗಿತ್ತು! ಕಳೆದ ಬಾರಿ ಆಡಳಿತ ವಿರೋಧಿ ಅಲೆಯಗಿದ್ದರೂ ಬಿಜೆಪಿ 40 ಸ್ಥಾನ ಗಳಿಸಲು ಶಕ್ಯವಾಗಿತ್ತು. ಆದರೆ ಅಂಥ ಯಾವುದೇ ವಿರೋಧ, ಅಸಮಾಧಾನವಿಲ್ಲದೆಯೂ ಕಾಂಗ್ರೆಸ್ ಈ ಬಾರಿ ಕೇವಲ 35 ಸ್ಥಾನ ಗೆಲ್ಲುತ್ತದೆಂಬುದು ತೀರಾ ಅತಿಶಯೋಕ್ತಿ ಎನ್ನಿಸಿತ್ತು. ಈ ಸುದ್ದಿ ಫೇಕ್ ಎಂಬುದು ತಿಳಿಯುತ್ತಿದ್ದಂತೆಯೇ ಬಿಜೆಪಿ ಅಭಬಿಮಾನಿಗಳ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್ಸಿಗರು, 'ಕುಣಿಯಲು ಬಾರದವನು ನೆಲ ಡೊಂಕು ಎಂದನಂತೆ' ಎಂದು ಅಣಕಿಸುತ್ತಿದ್ದಾರೆ.

ಹತಾಶೆಯಲ್ಲಿದೆಯೇ ಬಿಜೆಪಿ?

ಈಗ ಬಿಬಿಸಿ ಹೆಸರಿನಲ್ಲಿ whatsapp ನಲ್ಲಿ ಸುಳ್ಳು ಸಮೀಕ್ಷೆಯನ್ನು ಹಂಚಲಾಗುತ್ತಿದೆ. ಯಾವಾಗ ವಾಸ್ತವದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ತಿಳಿಯಿತೋ ಬಿಜೆಪಿ ತನ್ನ ಬೆಂಬಲಿಗರನ್ನು ಉತ್ತೇಜಿಸಲು ಈ ಸುಳ್ಳು ಸುದ್ದಿಗಳ ಮೊರೆಹೋಗಿದೆ. ಇದು ಬಿಜೆಪಿಯ ಹತಾಶೆಯ ಸಂಕೇತವೇ ಎಂದು ಪ್ರಶ್ನಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

English summary
Karnataka assembly elections 2018: BBC India tweets, "A fake survey on Karnataka polls has been circulating on Whats App and claims to be from BBC News. We'd like to make absolutely clear that it's a fake and does not come from the BBC. The BBC does not commission pre-election surveys in India."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X