First Time Winner: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್ ಕಲಿಗಳು ಇವರೇ ನೋಡಿ!
ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ನಿರೀಕ್ಷೆಯಂತೆ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಈ ಬಾರೀ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ವರ್ಕೌಟ್ ಆಗಿದೆ.
ಹೌದು, ಆಡಳಿರೂಢ ಬಿಜೆಪಿ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆಯನ್ನ ಕಾಂಗ್ರೆಸ್ ನಾಯಕರು ಅಸ್ತ್ರವನ್ನಾಗಿ ಪರಿಗಣಿಸಿ, ಪ್ರತಿಯೊಂದು ಕ್ಷೇತ್ರದ ಮಾಹಿತಿಯನ್ನ ಕಲೆ ಹಾಕಿ ಹಲವು ಭಾಗದಲ್ಲಿ ಪ್ರಬಲ ನಾಯಕರಿರುವ ಬಿಜೆಪಿ ನಾಯಕರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಹಲವು ಹೊಸ ನಾಯಕರನ್ನ ಚುನಾವಣಾ ಕಣಕ್ಕಿಳಿಸಿತ್ತು.

ಆಡಳಿತ ವಿರೋಧಿ ಅಲೆ, ಕ್ಷೇತ್ರದಲ್ಲಿ ಆಗದ ಅಭಿವೃದ್ದಿಯಿಂದಾಗಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದವು. ಆದರೆ ಬಿಜೆಪಿಯಲ್ಲಿ ಹೆಚ್ಚಿನ ಹೊಸ ಅಭ್ಯರ್ಥಿಗಳು ಸೋಲು ಅನುಭವಿಸಿದರೆ, ಕಾಂಗ್ರೆಸ್ ಹೈಕಮಾಂಡ್ 42 ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದು, ಈ ಪೈಕಿ 35 ಮಂದಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು ಯಾರು?:
ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್
ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್
ಕುಡಚಿ: ಮಹೇಂದ್ರ ಕೆ.ತಮ್ಮಣ್ಣನವರ್
ಬೆಳಗಾವಿ ಉತ್ತರ: ಆಸಿಫ್ ಸೇಟ್
ಕಿತ್ತೂರು: ಬಾಬಾಸಾಹೇಬ ಪಾಟೀಲ
ಸೌಂದತ್ತಿ ಯಲ್ಲಮ್ಮ: ವಿಶ್ವಸ್ ವಸಂತವೈದ್ಯ
ಬಾದಾಮಿ: ಭೀಮಸೇನ್ ಬಿ ಚಿಮ್ಮಣ್ಣಕಟ್ಟಿ
ನಾಗಥಾನ್: ವಿಠ್ಠಲ ಕಟಕದೊಂಡ
ಸಿಂದಗಿ: ಅಶೋಕ್ ಎಂ. ಮನಗೂಳಿ
ಗುಲ್ಬರ್ಗ ದಕ್ಷಿಣ: ಅಲ್ಲಮಪ್ರಭು ಪಾಟೀಲ್
ಶಿರಸಿ: ಭೀಮಣ್ಣ ನಾಯ್ಕ
ರಾಣೆಬೆನ್ನೂರು: ಪ್ರಕಾಶ್ ಕೋಳಿವಾಡ
ಬಳ್ಳಾರಿ ನಗರ: ನಾರ ಭಾರತ ರೆಡ್ಡಿ
ಕೂಡ್ಲಿಗಿ :ಡಾ.ಶ್ರೀನಿವಾಸ್ ಎನ್.ಟಿ
ಚಿತ್ರದುರ್ಗ: ಕೆಸಿ ವೀರೇಂದ್ರ
ಜಗಳೂರು : ಬಿ ದೇವೇಂದ್ರಪ್ಪ
ಮಾಯಕೊಂಡ: ಕೆ.ಎಸ್. ಬಸವರಾಜು
ಚನ್ನಗರಿ: ಬಸವರಾಜು ವಿ ಶಿವಗಂಗಾ
ಮುಡಿಗೆರೆ : ನಯನಾ
ಚಿಕ್ಕಮಗಳೂರು: ಹೆಚ್.ಡಿ. ತಮ್ಮಯ್ಯ
ಕಡೂರು: ಆನಂದ್ ಕೆ ಎಸ್
ಪಾವಗಡ:ಎಚ್.ವಿ. ವೆಂಕಟೇಶ್
ಪುಲಕೇಶಿನಗರ: ಎ.ಸಿ.ಶ್ರೀನಿವಾಸ್
ದೇವನಹಳ್ಳಿ: ಕೆಎಚ್ ಮುನಿಯಪ್ಪ
ನೆಲಮಂಗಲ: ಶ್ರೀನಿವಾಸ ಎನ್
ರಾಮನಗರ: ಇಕ್ಬಾಲ್ ಹುಸೇನ್
ಮದ್ದೂರು: ಕೆ.ಎಂ. ಉದಯ
ಮಂಡ್ಯ: ಪ್ರವಿಕುಮಾರ್
ಪುತ್ತೂರು: ಅಶೋಕ್ ಕುಮಾರ್ ರೈ
ಕೊಡಗು ಮಡಿಕೇರಿ: ಡಾ ಮಂತರ್ ಗೌಡ
ವಿರಾಯಪೇಟೆ: ಎ.ಎಸ್. ಪೊನ್ನಣ್ಣ
ಕೃಷ್ಣರಾಜನಗರ: ಡಿವಿ ಶಂಕರ್
ನಂಜನಗೂಡು: ದರ್ಶನ್ ದ್ರುವನಾರಾಯಣ
ಚಾಮರಾಜ: ಕೆ.ಹರೀಶ್ ಗೌಡ
ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಕಾಂಗ್ರೆಸ್ ಬೆಂಬಲಿ ರೈತ ನಾಯಕ)












Click it and Unblock the Notifications