ಕರ್ನಾಟಕ ಚುನಾವಣೆ : ಬಿಜೆಪಿ ಜಾಹೀರಾತಿಗೆ ಆಯೋಗದ ತಡೆ!
ಬೆಂಗಳೂರು, ಏಪ್ರಿಲ್ 27 : ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ನೀಡಿದ್ದ ಜಾಹೀರಾತಿಗೆ ಚುನಾವಣಾ ಆಯೋಗ ತಡೆ ನೀಡಿದೆ. ಜಾಹೀರಾತಿನಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿತ್ತು.
ಸುದ್ದಿ ವಾಹಿನಿಗಳಿಗೆ ಬಿಜೆಪಿ ನೀಡಿರುವ ಜಾಹೀರಾತನ್ನು ತಕ್ಷಣ ವಾಪಸ್ ಪಡೆಯಬೇಕು. 24 ಗಂಟೆಯೊಳಗೆ ಅದನ್ನು ಪುನರ್ ಪರಿಶೀಲಿಸಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಸೂಚನೆ ನೀಡಿದೆ.
ಭಾ.ಜ.ಪಾ ದ ಚುನಾವಣಾ ಜಾಹಿರತನ್ನು ನಿಷೇಧಿಸಿದ ಈ @siddaramaiah ಸರ್ಕಾರ ತನಗೆ ಎದುರಾಗಿರುವ ನಿಶ್ಚಿತ ಸೋಲನ್ನು ಒಪ್ಪಕೊಂಡಂತಾಗಿದೆ. ಗುಜರಾತಿನ ಚುನಾವಣೆಯಲ್ಲಿಯೂ ಇದೇ ಮಾರ್ಗ ಅನುಸರಿಸಿ @INCIndiaಗೆ, ಅಲ್ಲಿನ ಜನ ತಕ್ಕ ಪಾಠ ಕಲಿಸಿದ ಹಾಗೆ, ಕರ್ನಾಟಕದ ಜನತೆಯೂ ಕೂಡ @INCKarnatakaಗೆ ತಕ್ಕ ಷಾಸ್ತಿ ಮಾಡಲಿದ್ದಾರೆ. pic.twitter.com/k6nXLsGccY
— R Ashoka (@RAshokaBJP) April 27, 2018
ಸುದ್ದಿ ವಾಹಿನಿ, ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿಯೂ ಜಾಹೀರಾತು ಪ್ರಸಾರವಾಗಬಾರದು ಎಂದು ಆಯೋಗ ಹೇಳಿದೆ. ಕಾಂಗ್ರೆಸ್ ಈ ಆದೇಶದ ಪ್ರತಿಯನ್ನು ಟ್ವೀಟ್ ಮಾಡಿದ್ದು, ಪಕ್ಷಕ್ಕೆ ಸಿಕ್ಕ ಗೆಲುವು ಎಂದು ಹೇಳಿದೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, 'ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ನಮ್ಮ ಪರವಾದ ವಾದವನ್ನು ಆಲಿಸಿ ಆಯೋಗ ಜಾಹೀರಾತಿಗೆ ತಡೆ ನೀಡಿದೆ. ಇದು ರಾಜ್ಯ ಬಿಜೆಪಿಗೆ ನಾಚಿಕೆಗೇಡಿನ ಸಂಗತಿಯಲ್ಲವೇ?' ಎಂದು ಪ್ರಶ್ನಿಸಿದರು.
“ನಮ್ಮ ಸರ್ಕಾರ ದೇಶದಲ್ಲೇ ವಿವಿಧ 31 ಕ್ಷೇತ್ರಗಳಲ್ಲಿ ನಂ.1 ಇದೆ,ತನ್ನ ಯೋಜನೆಗಳಿಗಾಗಿ ಕೇಂದ್ರದಿಂದ ಹಲವು ಪ್ರಶಸ್ತಿ ಪಡೆದಿದೆ.ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ್ದರೆ ಇಷ್ಟು ಪ್ರಶಸ್ತಿಗಳು ಹೇಗೆ ಬರುತ್ತಿತ್ತು? ಹಾಗಾಗಿ ಭಾರತೀಯ ಸಂವಿಧಾನದಲ್ಲಿ ಬಿಜೆಪಿ ಪಕ್ಷಕ್ಕೆ ನಂಬಿಕೆಯಿದ್ದರೆ ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು”:@DKShivakumar pic.twitter.com/Y9DkGkmiOp
— Karnataka Congress (@INCKarnataka) April 27, 2018
'ನಮ್ಮ ಸರ್ಕಾರ ದೇಶದಲ್ಲೇ ವಿವಿಧ ಕ್ಷೇತ್ರಗಳಲ್ಲಿ ನಂ.1.ಇದೆ. ತನ್ನ ಯೋಜನೆಗಳಿಗಾಗಿ ಕೇಂದ್ರದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ್ದರೆ ಇಷ್ಟು ಪ್ರಶಸ್ತಿಗಳು ಹೇಗೆ ಬರುತ್ತಿತ್ತು?' ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗದ ಆದೇಶವೇನು?
Based on our complaint, Election Commission has banned Karnataka BJP's Advertisements which were propagating blatantly false information. #SatyamevaJayate pic.twitter.com/eeNytpKOiX
— Karnataka Congress (@INCKarnataka) April 27, 2018












Click it and Unblock the Notifications