Karnataka Assembly Elections 2023: ಅಂತಿಮವಾಗಿ ಕಣದಲ್ಲಿರುವ ಆಮ್ ಆದ್ಮಿ ಅಭ್ಯರ್ಥಿಗಳು
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ಯಾರಿದ್ದಾರೆ ಎನ್ನುವುದು ನಿಕ್ಕಿಯಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಇದ್ದ ಗಡುವು ನಿನ್ನೆಗೆ (ಏಪ್ರಿಲ್ 24) ಮುಕ್ತಾಯಗೊಂಡಿದೆ. ಕಣದಲ್ಲಿದ್ದ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ಕೆಲವೊಂದು ಕಡೆ ಪ್ರಮುಖ ಪಕ್ಷಗಳು ವಿಫಲವಾಗಿವೆ.
ದೆಹಲಿ ಮತ್ತು ಪಂಜಾಬ್ ನಲ್ಲಿ ರಾಜ್ಯಭಾರ ಮಾಡುತ್ತಿರುವ ಆಮ್ ಆದ್ಮಿ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ. 153ಸ್ಥಾನಗಳಲ್ಲಿ ಆಪ್ ತಮ್ಮ ಭವಿಷ್ಯವನ್ನು ಒರೆಗೆ ಹಚ್ಚಲು ಮುಂದಾಗಿದೆ. ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಪಂಜಾಬ್ ಮುಖ್ಯಮಂತ್ರಿ ಕೂಡಾ ಒಂದು ರೌಂಡ್ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 32ಕ್ಷೇತ್ರಗಳ ಪೈಕಿ ಮೂವತ್ತು ಕ್ಷೇತ್ರಗಳಿಗೆ ಆಪ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷಗಳು ಸ್ಪರ್ಧೆಯಲ್ಲಿದ್ದಾರೆ.
ಆಮ್ ಆದ್ಮಿ ಪಕ್ಷವು ತನ್ನ ನಲವತ್ತು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಹರ್ಭಜನ್ ಸಿಂಗ್, ಇಮ್ರಾನ್ ಹುಸೇನ್, ಸೆಸೆಲ್ಲಿ ರೊಡ್ರಿಗಸ್, ಪೃಥ್ವಿ ರೆಡ್ಡಿ ಸೇರಿದಂತೆ 40 ಮುಖಂಡರು ರಾಜ್ಯದಲ್ಲಿ ಆಪ್ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಮೇ ಹತ್ತರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ. ಈಗ ಪ್ರಕಟವಾಗಿರುವ ಕೆಲವೊಂದು ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಒಂದೋ ಅತಂತ್ರ ಇಲ್ಲವೇ ಕಾಂಗ್ರೆಸ್ಸಿಗೆ ಮೆಜಾರಿಟಿ ಬರುತ್ತದೆ ಎಂದು ಹೇಳುತ್ತಿವೆ.
ಟೆನ್ನಿಸ್ ಕೃಷ್ಣ, ಪುಟ್ಟಣ್ಣ ಮಂಜುನಾಥ್, ಶಶಿಧರ್ ಆರಾಧ್ಯ, ಶಾಂತಲಾ ದಾಮ್ಲೆ, ಮೋಹನ್ ದಾಸರಿ, ಕೆ.ಮಥಾಯ್, ಬ್ರಿಜೇಶ್ ಕಾಳಪ್ಪ, ಡಾ.ರಮೇಶ್ ಬೆಲ್ಲಂಕೊಂಡ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆದ ನಂತರ ಕಣದಲ್ಲಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಆಪ್ | |
| 1 | ನಿಪ್ಪಾಣಿ | ರಾಜೇಶ ಅಣ್ಣಾಸಾಹೇಬ ಬಸವಣ್ಣ | |
| 2 | ಚಿಕ್ಕೋಡಿ-ಸದಲಗಾ | ಶ್ರೀಕಾಂತ್ ಪಾಟೀಲ್ | |
| 3 | ಅಥಣಿ | ಸಂಪತ್ ಕುಮಾರ ಶೆಟ್ಟಿ | |
| 4 | ಕಾಗವಾಡ | ಗುರಪ್ಪ ಎಂ ಮಗದುಮ್ | |
| 8 | ಅರಭಾವಿ | ಕೊಟ್ಟಲಗಿ | |
| 11 | ಬೆಳಗಾವಿ ಉತ್ತರ | ರಾಜಕುಮಾರ ಟೋಪಣ್ಣವರ | |
| 15 | ಕಿತ್ತೂರು | ಆನಂದ್ ಹಂಪಣ್ಣವರ್ | |
| 16 | ಬೈಲಹೊಂಗಲ | ಬಿ. ಎಂ. ಚಿಕ್ಕನಗೌಡರ | |
| 17 | ಸವದತ್ತಿ ಯಲ್ಲಮ್ಮ | ಬಾಪುಗೌಡ ಪಾಟೀಲ | |
| 18 | ರಾಮದುರ್ಗ | ಮಲ್ಲಿಕಜಾನ್ ನದಾಫ | |
| 20 | ತೇರದಾಳ | ಅರ್ಜುನ ಹಲಗಿಗೌಡರ | |
| 22 | ಬೀಳಗಿ | ಮುತ್ತಪ್ಪ ಕುಮಾರ್ | |
| 23 | ಬಾದಾಮಿ | ಶಿವರಾಯಪ್ಪ ಜೋಗಿನ | |
| 24 | ಬಾಗಲಕೋಟೆ | ರಮೇಶ ಬದ್ನೂರ | |
| 27 | ದೇವರ ಹಿಪ್ಪರಗಿ | ಬಸವರಾಜ ಹಿಂಗಳಗಿ | |
| 29 | ಬಬಲೇಶ್ವರ | ಸ್ಪರ್ಧಿಸುತ್ತಿಲ್ಲ | |
| 30 | ವಿಜಯಪುರ ನಗರ | ಹಾಶಿಂಪೀರ್ ವಾಲಿಕರ್ | |
| 31 | ನಾಗಠಾಣ (SC) | ಗುರು ಚೌಹಾಣ್ | |
| 32 | ಇಂಡಿ | ಗೋಪಾಲ ಆರ್ ಪಾಟೀಲ | |
| 33 | ಸಿಂಧಗಿ | ಮುರುಗೆಪ್ಪ ಗೌಡ | |
| 35 | ಜೇವರ್ಗಿ | ವಿಶ್ವನಾಥ್ ರೆಡ್ಡಿ | |
| 38 | ಯಾದಗಿರಿ | ಅಝಾರುದ್ಧೀನ್ ರಾಣ | |
| 40 | ಚಿತ್ತಾಪುರ (SC) | ಜಗದೀಶ್ ಸಾಗರ್ | |
| 41 | ಸೇಡಂ | ಶಂಕರ ಬಂಡಿ | |
| 43 | ಕಲಬುರಗಿ ಗ್ರಾಮೀಣ (SC) | ಡಾ. ರಾಘವೇಂದ್ರ ಚಿಂಚನಸೂರ | |
| 44 | ಕಲಬುರಗಿ ದಕ್ಷಿಣ | ಸಿದ್ದರಾಮ ಅಪ್ಪಾರಾವ ಪಾಟೀಲ | |
| 45 | ಕಲಬುರಗಿ ಉತ್ತರ | ಸಯ್ಯದ್ ಸಜ್ಜಾದ್ ಅಲಿ | |
| 46 | ಆಳಂದ | ಶಿವಕುಮಾರ್ ಖೇಡ್ | |
| 47 | ಬಸವಕಲ್ಯಾಣ | ದೀಪಕ ಮಲಗಾರ | |
| 48 | ಹುಮ್ನಾಬಾದ್ | ಬ್ಯಾಂಕ್ ರೆಡ್ಡಿ | |
| 49 | ಬೀದರ್ ದಕ್ಷಿಣ | ನಸೀಮುದ್ದಿನ್ ಪಟೇಲ | |
| 50 | ಬೀದರ್ | ಗುಲಾಂ ಆಲಿ | |
| 51 | ಭಾಲ್ಕಿ | ತುಕಾರಾಮ ನಾರಾಯಣರಾವ್ ಹಜಾರೆ | |
| 52 | ಔರಾದ್ (SC) | ಬಾಬುರಾವ ಅಡ್ಕೆ | |
| 53 | ರಾಯಚೂರು ಗ್ರಾ. (ST) | ಡಾ. ಸುಭಾಶಚಂದ್ರ ಸಾಂಭಾಜಿ | |
| 54 | ರಾಯಚೂರು | ಡಿ. ವೀರೇಶ ಕುಮಾರ ಯಾದವ | |
| 55 | ಮಾನ್ವಿ (ST) | ರಾಜಾ ಶಾಮಸುಂದರ ನಾಯಕ | |
| 57 | ಲಿಂಗಸುಗೂರು (SC) | ಶಿವಪುತ್ರ ಗಾಣದಾಳ | |
| 58 | ಸಿಂಧನೂರು | ಸಂಗ್ರಾಮ ನಾರಾಯಣ ಕಿಲ್ಲೇದ | |
| 60 | ಕುಷ್ಟಗಿ | ಕನಕಪ್ಪ ಮಳಗಾವಿ | |
| 61 | ಕನಕಗಿರಿ (SC) | ಅನೀಲ್ ಕುಮಾರ್ ಆರ್ ಬೇಗಾರ್ | |
| 62 | ಗಂಗಾವತಿ | ಶರಣಪ್ಪ ಸಜ್ಜಿಹೊಲ | |
| 63 | ಯಲಬುರ್ಗಾ | ಹನುಮಂತಪ್ಪ ಕುರಿ | |
| 64 | ಕೊಪ್ಪಳ | ಎಂ.ಕೆ.ಸಾಹೇಬ್ ನಾಗೇಶನಹಳ್ಳಿ | |
| 65 | ಶಿರಹಟ್ಟಿ (SC) | ಮಲ್ಲಿಕಾರ್ಜುನ್ ದೊಡ್ಡಮನಿ | |
| 66 | ಗದಗ | ಫೀರ್‌ಸಾಬ್ ಶೇಖ್ ದೊಡ್ಡಮನಿ | |
| 67 | ರೋಣ | ಆನೇಕಲ್ ದೊಡ್ಡಯ್ಯ | |
| 68 | ನರಗುಂದ | ರಾಮಪ್ಪ ದ್ಯಾಮಪ್ಪ ಹೊನ್ನವರ | |
| 70 | ಕುಂದಗೋಳ | ನಿರಂಜನಯ್ಯ ಮಂಕತಿಮಠ | |
| 72 | ಹುಬ್ಬಳ್ಳಿ - ಧಾರವಾಡ ಪೂರ್ವ (SC) | ಬಸವರಾಜ ಎಸ್ ತೇರದಾಳ | |
| 73 | ಹುಬ್ಬಳ್ಳಿ - ಧಾರವಾಡ ಕೇಂದ್ರ | ವಿಕಾಸ ಸೊಪ್ಪಿನ | |
| 74 | ಹುಬ್ಬಳ್ಳಿ - ಧಾರವಾಡ ಪಶ್ಚಿಮ | ಅರವಿಂದ.ಎಂ | |
| 75 | ಕಲಘಟಗಿ | ಮಂಜುನಾಥ ಜಕ್ಕಣ್ಣವರ | |
| 77 | ಕಾರವಾರ | ಆಶೀಷ್ ಪ್ರಭಾಕರ್ ಗೋಂಕಾರ್ | |
| 78 | ಕುಮಟಾ | ರೂಪಾ ನಾಯಕ್ | |
| 79 | ಭಟ್ಕಳ | ನಸೀಮ್ ಅಹಮ್ಮದ್ ಖಾನ್ | |
| 80 | ಶಿರಸಿ | ಹಿತೇಂದ್ರ ನಾಯಕ | |
| 82 | ಹಾನಗಲ್ | ಸಾಯಿಕುಮಾರ್ | |
| 85 | ಬ್ಯಾಡಗಿ | ಎಂ. ಎನ್. ನಾಯಕ | |
| 86 | ಹಿರೇಕೆರೂರು | ರಾಜಶೇಖರ ದೂಡಿಹಳ್ಳಿ | |
| 87 | ರಾಣೆಬೆನ್ನೂರು | ಹನುಮಂತಪ್ಪ ಕಬ್ಬಾರ | |
| 88 | ಹಡಗಲಿ (SC) | ಶ್ರೀಧರ್ ನಾಯಕ | |
| 89 | ಹಗರಿಬೊಮ್ಮನಹಳ್ಳಿ (SC) | ಡಾ.ಹನುಮಂತಪ್ಪ | |
| 90 | ವಿಜಯನಗರ | ಡಿ. ಶಂಕರದಾಸ | |
| 92 | ಸಿರಗುಪ್ಪ (ST) | ಲೋಕೇಶ್ ನಾಯಕ | |
| 94 | ಬಳ್ಳಾರಿ ನಗರ | ಎರಿಸ್ವಾಮಿ | |
| 96 | ಕೂಡ್ಲಿಗಿ (ST) | ಶ್ರೀನಿವಾಸ ಎನ್ | |
| 98 | ಚಳ್ಳಕೆರೆ (ST) | ಪಾಪಣ್ಣ | |
| 99 | ಚಿತ್ರದುರ್ಗ | ಜಗದೀಶ್ ಬಿ.ಇ | |
| 100 | ಹಿರಿಯೂರು | ಕೆ.ಟಿ.ತಿಪ್ಪೇಸ್ವಾಮಿ | |
| 102 | ಹೊಳಲ್ಕೆರೆ (SC) | ಮಹಾಂತೇಶ | |
| 103 | ಜಗಳೂರು (ST) | ಗೋವಿಂದರಾಜು | |
| 104 | ಹರಪ್ಪನಹಳ್ಳಿ | ನಾಗರಾಜ ಎಚ್ | |
| 105 | ಹರಿಹರ | ಗಣೇಶಪ್ಪ ದುರ್ಗದ್ | |
| 106 | ದಾವಣಗೆರೆ ಉತ್ತರ | ಶ್ರೀಧರ ಪಾಟೀಲ | |
| 112 | ಭದ್ರಾವತಿ | ಆನಂದ | |
| 113 | ಶಿವಮೊಗ್ಗ | ನೇತ್ರಾವತಿ. ಟಿ | |
| 114 | ತೀರ್ಥಹಳ್ಳಿ | ಶಿವಕುಮಾರ್ | |
| 115 | ಶಿಕಾರಿಪುರ | ಚಂದ್ರಕಾಂತ ರೇವಣ್ಣಕರ | |
| 116 | ಸೊರಬ | ಚಂದ್ರಶೇಖರ್ | |
| 117 | ಸಾಗರ | ಕೆ.ದಿವಾಕರ | |
| 120 | ಉಡುಪಿ | ಪ್ರಭಾಕರ್ ಪೂಜಾರಿ | |
| 122 | ಕಾರ್ಕಳ | ಡೇನಿಯಲ್ | |
| 123 | ಶೃಂಗೇರಿ | ರಾಜನ್ ಗೌಡ ಎಚ್.ಎಸ್ | |
| 125 | ಚಿಕ್ಕಮಗಳೂರು | ಈರೇಗೌಡ | |
| 127 | ಕಡೂರು | ರಾಜೇಶ್ವರಿ ಬಿ.ಎಚ್ | |
| 128 | ಚಿಕ್ಕನಾಯಕನಹಳ್ಳಿ | ನಿಂಗರಾಜು.ಸಿ | |
| 130 | ತುರುವೇಕೆರೆ | ಟೆನ್ನಿಸ್ ಕೃಷ್ಣ | |
| 131 | ಕುಣಿಗಲ್ | ಜಯರಾಮಯ್ಯ | |
| 132 | ತುಮಕೂರು ನಗರ | ಮೊಹಮ್ಮದ್ ಗೌಸ್ | |
| 133 | ತುಮಕೂರು ಗ್ರಾಮೀಣ | ದಿನೇಶ್ ಕುಮಾರ್ | |
| 135 | ಗುಬ್ಬಿ | ಪ್ರಭುಸ್ವಾಮಿ | |
| 136 | ಶಿರಾ | ಶಶಿ ಕುಮಾರ್ | |
| 137 | ಪಾವಗಡ (SC) | ರಾಮಾಂಜನಪ್ಪ.ಎನ್ | |
| 138 | ಮಧುಗಿರಿ | ಸಯ್ಯದ್ ಮುಝಾಮಿಲ್ ಪಾಷಾ | |
| 139 | ಗೌರಿಬಿದನೂರು | ಸಯ್ಯದ್ ನಾಸೀರ್ ಆಲಿ | |
| 140 | ಬಾಗೇಪಲ್ಲಿ | ಮಧು ಸೀತಪ್ಪ | |
| 141 | ಚಿಕ್ಕಬಳ್ಳಾಪುರ | ನಂದಿ ಭಾಷಾ | |
| 143 | ಚಿಂತಾಮಣಿ | ಸಿ.ಭೈರಡ್ಡಿ | |
| 144 | ಶ್ರೀನಿವಾಸಪುರ | ಡಾ.ವೈ.ವಿ.ವೆಂಕಟಚಲ | |
| 145 | ಮುಳಬಾಗಿಲು (SC) | ಎನ್.ವಿಜಯ್ ಕುಮಾರ್ | |
| 146 | ಕೆಜಿಎಫ್ (SC) | ಆರ್. ಗಗನ ಸುಕನ್ಯಾ | |
| 148 | ಕೋಲಾರ | ಸುಹೀಲ್ ದಿಲ್ ನವಾಜ್ | |
| 149 | ಮಾಲೂರು | ರವಿಶಂಕರ್.ಎಂ | |
| 150 | ಯಲಹಂಕ | ಪುಟ್ಟಣ್ಣ ಮಂಜುನಾಥ್ | |
| 151 | ಕೆ.ಆರ್.ಪುರ | ಡಾ.ಕೇಶವ್ ಕುಮಾರ್ | |
| 152 | ಬ್ಯಾಟರಾಯನಪುರ | ಉಮೇಶ್ ಬಾಬು | |
| 153 | ಯಶವಂತಪುರ | ಶಶಿಧರ್ ಸಿ ಆರಾಧ್ಯ | |
| 154 | ರಾಜರಾಜೇಶ್ವರಿನಗರ | ಅನಂತ್ ಸುಭಾಷ್ ಚಂದ್ರ | |
| 155 | ದಾಸರಹಳ್ಳಿ | ಕೀರ್ತನ್ ಕುಮಾರ್ | |
| 156 | ಮಹಾಲಕ್ಷ್ಮೀ ಲೇಔಟ್ | ಶಾಂತಲಾ ದಾಮ್ಲೆ | |
| 157 | ಮಲ್ಲೇಶ್ವರಂ | ಸುಮನ್ ಪ್ರಶಾಂತ್ | |
| 158 | ಹೆಬ್ಬಾಳ | ಮಂಜುನಾಥ ನಾಯ್ಡು | |
| 159 | ಪುಲಕೇಶಿನಗರ (SC) | ಸುರೇಶ್ ರಾಥೋಡ್ | |
| 160 | ಸರ್ವಜ್ಞನಗರ | ಮೊಹಮ್ಮದ್ ಇಬ್ರಾಹಿಂ | |
| 161 | ಸಿ.ವಿ. ರಾಮನ್ ನಗರ (SC) | ಮೋಹನ ದಾಸರಿ | |
| 162 | ಶಿವಾಜಿನಗರ | ಪ್ರಕಾಶ್ ನೆಡುಂಗಡಿ | |
| 163 | ಶಾಂತಿನಗರ | ಕೆ.ಮಥಾಯ್ | |
| 164 | ಗಾಂಧಿನಗರ | ಗೋಪಿನಾಥ್ | |
| 165 | ರಾಜಾಜಿನಗರ | ಬಿ.ಟಿ.ನಂಗಣ್ಣ | |
| 166 | ಗೋವಿಂದರಾಜ ನಗರ | ಅಂಜನ ಗೌಡ | |
| 167 | ವಿಜಯನಗರ | ಡಾ.ರಮೇಶ್ ಬೆಲ್ಲಂಕೊಂಡ | |
| 169 | ಚಿಕ್ಕಪೇಟೆ | ಬ್ರಿಜೇಶ್ ಕಾಳಪ್ಪ | |
| 170 | ಬಸವನಗುಡಿ | ಸತ್ಯಲಕ್ಷ್ಮಿ ರಾವ್ | |
| 171 | ಪದ್ಮನಾಭನಗರ | ಅಜಯ್ ಗೌಡ | |
| 172 | ಬಿಟಿಎಂ ಲೇಔಟ್ | ಶ್ರೀನಿವಾಸ ರೆಡ್ಡಿ | |
| 173 | ಜಯನಗರ | ಮಹಾಲಕ್ಷ್ಮೀ | |
| 174 | ಮಹಾದೇವಪುರ (ST) | ನಟರಾಜ್ ಸಿ.ಆರ್ | |
| 175 | ಬೊಮ್ಮನಹಳ್ಳಿ | ಸೀತಾರಾಂ ಗುಂಡಪ್ಪ | |
| 176 | ಬೆಂಗಳೂರು ದಕ್ಷಿಣ | ಅಶೋಕ್ ಮೃತ್ಯುಂಜಯ | |
| 177 | ಆನೇಕಲ್ (SC) | ಮುನೇಶ್ ಎಂ | |
| 179 | ದೇವನಹಳ್ಳಿ (SC) | ಶಿವಪ್ಪ ಬಿ.ಕೆ | |
| 180 | ದೊಡ್ಡಬಳ್ಳಾಪುರ | ಪುರುಷೋತ್ತಮ | |
| 181 | ನೆಲಮಂಗಲ (SC) | ಗಂಗಭೈಲಪ್ಪ ಬಿ.ಎಂ | |
| 182 | ಮಾಗಡಿ | ರವಿಕಿರಣ್ ಎಂ.ಎನ್ | |
| 183 | ರಾಮನಗರ | ನಂಜಪ್ಪ ಕಾಳೇಗೌಡ | |
| 184 | ಕನಕಪುರ | ಪುಟ್ಟರಾಜು ಗೌಡ | |
| 185 | ಚನ್ನಪಟ್ಟಣ | ಶರತ್ ಚಂದ್ರ | |
| 186 | ಮಳವಳ್ಳಿ (SC) | ಬಿ.ಸಿ.ಮಹದೇವಸ್ವಾಮಿ | |
| 187 | ಮದ್ದೂರು | ಆನಂದ್ | |
| 188 | ಮೇಲುಕೋಟೆ | ಅಶೋಕ್ ಎಚ್.ಆರ್ | |
| 189 | ಮಂಡ್ಯ | ಬೊಮ್ಮಯ್ಯ | |
| 190 | ಶ್ರೀರಂಗಪಟ್ಟಣ | ಸಿ.ಎಸ್.ವೆಂಕಟೇಶ್ | |
| 196 | ಹಾಸನ | ಅಗಿಲೆ ಯೊಗೀಶ್ | |
| 197 | ಹೊಳೆನರಸೀಪುರ | ಶಿವಸ್ವಾಮಿ | |
| 198 | ಅರಕಲಗೂಡು | ಜವರೇಗೌಡ | |
| 201 | ಮೂಡಬಿದ್ರೆ | ವಿಜಯನಾಥ ವಿಠಲ ಶೆಟ್ಟಿ | |
| 204 | ಮಂಗಳೂರು | ಸಂತೋಷ್ ಕಾಮತ್ | |
| 207 | ಸುಳ್ಯ (SC) | ಸುಮನ | |
| 210 | ಪಿರಿಯಾಪಟ್ಟಣ | ರಾಜಶೇಖರ ದೊಡ್ಡಣ್ಣ | |
| 217 | ಚಾಮರಾಜ | ಮಾಳವಿಕ ಗುಬ್ಬಿವಾಣಿ | |
| 218 | ನರಸಿಂಹರಾಜ | ಧರ್ಮಶ್ರೀ | |
| 220 | ಟಿ.ನರಸೀಪುರ | ಸಿದ್ದರಾಜು | |
| 221 | ಹನೂರು | ಹರೀಶ್ |












Click it and Unblock the Notifications