ಕರ್ನಾಟಕ ಚುನಾವಣೆ 2023: ಬಿಜೆಪಿಯ ಲಿಂಗಾಯತ ಬೆಂಬಲದ ನೆಲೆಯ ಮೇಲೆ ಕಾಂಗ್ರೆಸ್ ಕಣ್ಣು
ಬೆಂಗಳೂರು ಏಪ್ರಿಲ್ 10: ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಮಾದರಿಯಲ್ಲಿಯೇ ಮುಂಬೈ- ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇದನ್ನು ಕಿತ್ತೂರು ಕರ್ನಾಟಕ ಎಂದು ಕರೆದಿದ್ದಾರೆ. ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳನ್ನು ಮುಂಬೈ-ಕರ್ನಾಟಕ ಹೊಂದಿದೆ.
ಇದು ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಲ್ಲಿ 50 ಕ್ಷೇತ್ರಗಳನ್ನು ಹೊಂದಿದ್ದು 22% ರಷ್ಟು ಪಾಲನ್ನು ಹೊಂದಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ರಾಜ್ಯವನ್ನು ಆಳುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಭಾಗದವರೇ ಆಗಿರುವುದರಿಂದ, ಆಡಳಿತಾರೂಢ ಬಿಜೆಪಿ ಇಲ್ಲಿಂದ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸರ್ವ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಪಕ್ಷ ಇಲ್ಲಿ ಬಹುಮತವನ್ನು ಹೊಂದಿದೆ. 2008 ಮತ್ತು 2018 ಎರಡರಲ್ಲೂ, ಕಿತ್ತೂರು ಕರ್ನಾಟಕದ ಬೆಂಬಲವು ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಕಾಗಲಿಲ್ಲ ಮತ್ತು ಕೇಸರಿ ಪಕ್ಷವು 'ಆಪರೇಷನ್ ಕಮಲ' ಎಂದು ಕರೆಯುವ ಮೂಲಕ ಇತರ ಪಕ್ಷಗಳಿಂದ ಪಕ್ಷಾಂತರರನ್ನು ಕರೆಸಿಕೊಳ್ಳಬೇಕಾಯಿತು.
ಕಿತ್ತೂರು ಕರ್ನಾಟಕದತ್ತ ಕಾಂಗ್ರೆಸ್ ಚಿತ್ತ
ಲಿಂಗಾಯತ ಸಮುದಾಯ ಈ ಪ್ರದೇಶದಲ್ಲಿ ಹೆಚ್ಚು ಪ್ರಬಲವಾಗಿದೆ. ಈ ಭಾಗದಲ್ಲಿ 7 ಎಸ್‌ಸಿಗಳು, 3 ಎಸ್‌ಟಿಗಳು, 2 ಕುರುಬರು, 4 ಮರಾಠರು ಮತ್ತು ಜೈನ ಮತ್ತು ರಡ್ಡಿ ಸಮುದಾಯದಿಂದ ತಲಾ ಒಬ್ಬರು ಶಾಸಕರಾಗಿದ್ದಾರೆ. 2008 ಮತ್ತು 20018ರಲ್ಲಿ ಬಿಜೆಪಿಯ ಉತ್ತಮ ಸಾಧನೆಯು ಲಿಂಗಾಯತರು ಮತ್ತು ಆರೆಸ್ಸೆಸ್‌ನಲ್ಲಿ ಹರಡಿರುವ ಬೆಂಬಲವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಮುಂಬೈ- ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದೆ.

ಈ ಪ್ರದೇಶ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹೋರಾಟವನ್ನು ನೋಡಲು ಸಿದ್ಧವಾಗಿದೆ. ಲಿಂಗಾಯತರು ಈ ಭಾಗದ ನಿಷ್ಠಾವಂತ ಮತದಾರರಾಗಿ ಪರಿಗಣಿಸಲಾಗುತ್ತದೆ. ಪಕ್ಷದ ಲಿಂಗಾಯತ ಚಿಹ್ನೆ ಎಂದು ಪರಿಗಣಿಸಲ್ಪಟ್ಟ ಯಡಿಯೂರಪ್ಪ ನೇರವಾಗಿ ಕಣದಲ್ಲಿಲ್ಲ. ಆದರೆ ಬೊಮ್ಮಾಯಿ ಅವರಿಗೆ ಲಿಂಗಾಯತರು ಬೆಂಬಲ ನೀಡಲಿದ್ದಾರೆ, ಆ ಮೂಲಕ ಬಿಜೆಪಿ ಪಕ್ಷವನ್ನು ಚುನಾವಣೆ ಜಯಸಲಿದ್ದಾರೆ ಎಂದು ಬಿಜೆಪಿ ಭಾವಿಸುತ್ತದೆ.
ಬಿಜೆಪಿಯ ಲಿಂಗಾಯತ ಬೆಂಬಲದ ನೆಲೆಯ ಮೇಲೆ ಕಾಂಗ್ರೆಸ್ ಕಣ್ಣು
ಕೈಗಾರಿಕೆಗಳ ಕೊರತೆ, ಹದಗೆಟ್ಟ ರಸ್ತೆಗಳು, ಮಲಪ್ರಭಾ ಮತ್ತು ಕೃಷ್ಣಾ ನದಿಗಳಿಂದ ಆಗಾಗ ಉಂಟಾಗುವ ಪ್ರವಾಹ, ಅನುಷ್ಠಾನದಲ್ಲಿ ವಿಫಲತೆ ಮತ್ತು (ಮೇಲ್ ಕೃಷ್ಣಾ ಯೋಜನೆ) ಯುಕೆಎನ್‌ಡಿ ಮತ್ತು 3ನೇ ಹಂತದ ಅನುಷ್ಠಾನದಲ್ಲಿನ ಲೋಪಗಳು ಈ ಪ್ರದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.

ಈ ಭಾಗಕ್ಕೆ ಕುಡಿಯುವ ನೀರು ಪಡೆಯಲು ಉದ್ದೇಶಿಸಿರುವ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಅನುಮತಿಯಿಂದ ರೈತರಲ್ಲಿನ ಅಸಮಾಧಾನಕ್ಕೆ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಜೊತೆಗೆ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ದಲಿತ, ಮುಸ್ಲಿಂ ಮತ್ತು ಒಬಿಸಿ ಮತಗಳು ನಿರ್ಣಾಯಕವಾಗಿರುವುದರಿಂದ ಇದರ ಲಾಭವನ್ನು ಕಾಂಗ್ರೆಸ್ ಪಡೆಯಲು ಪ್ರಯತ್ನಿಸುತ್ತಿದೆ.
"ಆಡಳಿತ ವಿರೋಧಿ ಅಂಶ, ಭ್ರಷ್ಟಾಚಾರ, ಮತ್ತು ರೈತರ ಅಗತ್ಯತೆಗಳನ್ನು ಹಾಗೂ ಸಾಮಾನ್ಯ ಜನರ ಇತರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಬಿಜೆಪಿ ವಿಫಲವಾಗಿದೆ. ಇದು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಬಲ ಸಮುದಾಯಗಳ ಹೆಚ್ಚಿನ ಅಭ್ಯರ್ಥಿಗಳನ್ನು ತಮ್ಮ ಮತಗಳನ್ನು ಸೆಳೆಯಲು ಕಣಕ್ಕಿಳಿಸಲಾಗುವುದು" ಎಂದು ಕೆಪಿಸಿಸಿ ಕಾರ್ಯದರ್ಶಿ ಶಾಕಿರ್ ಸನದಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, 'ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಹಾಗೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ಸಾಧನೆಯಿಂದ ಪಕ್ಷಕ್ಕೆ ಉತ್ತಮ ಸ್ಥಾನ ಗಳಿಸಲು ದೊಡ್ಡ ಉತ್ತೇಜನವಾಗಿದೆ. ಅಲ್ಲದೆ ಲಿಂಗಾಯತರಿಗೆ ಮೀಸಲಾತಿ ಇರುವ ಈ ಪ್ರದೇಶದಲ್ಲಿ 35 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಪಕ್ಷಕ್ಕೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ' ಎಂದರು.
ಆಮ್ ಆದ್ಮಿ ಪಕ್ಷವು ಈ ಬಾರಿ ಕನಿಷ್ಠ 5-6 ಸ್ಥಾನಗಳಲ್ಲಿ ಮತದಾರರನ್ನು ತಲುಪಲು ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರದೇಶದ ಮೇಲೆ ಕೇಂದ್ರೀಕರಿಸಿದೆ.












Click it and Unblock the Notifications