ಚುನಾವಣಾ ಉಸ್ತುವಾರಿ ಸಮಿತಿ ರಚನೆ ಮಾಡಿದ ಬಿಜೆಪಿ

ಬೆಂಗಳೂರು, ಮಾರ್ಚ್ 26 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಉಸ್ತುವಾರಿ ಸಮಿತಿಯನ್ನು ರಚನೆ ಮಾಡಿದೆ. ಸಂಸದ ಪಿ.ಸಿ.ಮೋಹನ್ ಸಮಿತಿಯ ಸಂಚಾಲಕರಾಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಮಿತಿ ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯ ಮಟ್ಟದ ನಾಯಕರು ಮತ್ತು ಪದಾಧಿಕಾರಿಗಳು ತಮ್ಮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಕ್ರಿಯರಾಗಲಿದ್ದಾರೆ. ಹಿರಿಯ ನಾಯಕರು ರಾಜ್ಯವ್ಯಾಪ್ತಿ ಪ್ರವಾಸ ಕೈಗೊಳ್ಳುತ್ತಾರೆ.

Karnataka elections 2018 : BJP forms in-charge committees

ಆದ್ದರಿಂದ, ವಿವಿಧ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವುದು ಅವರಿಗೆ ಕಷ್ಟವಾಗಲಿದೆ. ಅದಕ್ಕಾಗಿಯೇ ಹೊಸ ಉಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಗಿದೆ. ರಾಜ್ಯದ ಹಲವು ಸಂಸದರು ಈ ಸಮಿತಿಗೆ ಸಂಚಾಲಕರಾಗಿದ್ದಾರೆ.

ಉಸ್ತುವಾರಿ ಸಮಿತಿಗೆ : ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಪಕ್ಷದ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸುಬ್ಬನರಸಿಂಹ ಅವರು ಸಮಿತಿಯ ಸಂಚಾಲಕರಾಗಿದ್ದಾರೆ.

* ಹಣಕಾಸು ಸಮಿತಿ : ಲೆಹರ್ ಸಿಂಗ್, ಸುಬ್ಬನರಸಿಂಹ
* ರಾಷ್ಟ್ರ ನಾಯಕರ ಕಾರ್ಯಕ್ರಮ : ಹಿರೇಂದ್ರ ಶಾ
* ಮಾಧ್ಯಮ : ಅಶ್ವಥನಾರಾಯಣ, ಎ.ಎಚ್.ಆನಂದ್, ಎಸ್.ಪ್ರಕಾಶ್, ಶಾಂತಾರಾಂ
* ಸಾಮಾಜಿಕ ಜಾಲತಾಣ : ಬಾಲಾಜಿ ಶ್ರೀನಿವಾಸ್
* ಪ್ರಚಾರ ಸಾಹಿತ್ಯ : ಬೇಳೂರು ಸುದರ್ಶನ
* ಧಾರ್ಮಿಕ ಮುಖಂಡರ ಸಂಪರ್ಕ : ಶಿವಯೋಗಿ ಸ್ವಾಮಿ, ಶಂಕರ ಬಿದರಿ, ಅಬ್ಧುಲ್ ಅಜೀಜ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+