Karnataka Election: ಸಿಎಂ ಹುದ್ದೆಗೇರುವ ಶುಭ ಜಾತಕಫಲ ಯಾರಿಗೆ? ಖ್ಯಾತ ಜ್ಯೋತಿಷಿ ಹೇಳಿದ್ದು ಹೀಗೆ..
ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೇನು ಮೂರು ದಿನ ಮಾತ್ರ ಉಳಿದಿದೆ. ಮೂರೂ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ತೊಡಗಿವೆ. ಮೇ ಆರರಂದು ಬಿಜೆಪಿಯಿಂದ ಮೋದಿ, ಅಮಿತ್ ಶಾ, ನಡ್ಡಾ ಮುಂತಾದವರು ಪ್ರಚಾರದಲ್ಲಿ ಇರಲಿದ್ದಾರೆ. ಇನ್ನೊಂದು ಕಡೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಕೂಡಾ ಕಿತ್ತೂರು ಕರ್ನಾಟಕದ ಭಾಗದಲ್ಲಿ ಸಮಾವೇಶ ನಡೆಸಲಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹನೂರು, ಹುಣಸೂರು ಮತ್ತು ಬೆಂಗಳೂರಿನ ಕೆಲವು ಭಾಗದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಮತದಾರರ ಓಲೈಕೆ ಒಂದು ಕಡೆಯಾದರೆ, ಮುಂಬರುವ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭವಿಷ್ಯವನ್ನೂ ಜ್ಯೋತಿಷಿಗಳು ನುಡಿಯುತ್ತಿದ್ದಾರೆ.

'ಬರೆದಿಟ್ಟುಕೊಳ್ಳಿ, ಮೇ ಹದಿನೆಂಟರಂದು ಮುಖ್ಯಮಂತ್ರಿಯಾಗಿ ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ' ಎನ್ನುವ ಖಚಿತ ವಿಶ್ವಾಸದ ಮಾತನ್ನು ಕುಮಾರಸ್ವಾಮಿ ಆಡುತ್ತಿದ್ದಾರೆ. ಇನ್ನೊಂದು ಕಡೆ, ಅವರ ತಂದೆ ದೇವೇಗೌಡ್ರು ಕೂಡಾ ನನ್ನ ಮಗನೇ ಮುಂದಿನ ಸಿಎಂ ಎಂದು ಹೇಳುತ್ತಿದ್ದಾರೆ. ಕೆಲವು ದಿನಗಳ ಕೆಳಗೆ, ರಾಷ್ಟ್ರೀಯ ಪಕ್ಷದ ದೂತರು ನಮ್ಮ ಬಳಿ ಬಂದಿದ್ದರು ಎಂದು ಗೌಡ್ರು ಹೇಳಿದ್ದರು.
ಖ್ಯಾತ ಜ್ಯೋಷಿಯಾದ ಡಾ. ದ್ವಾರಾಕನಾಥ್ ಗುರೂಜಿಯವರು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ಪ್ರಸಕ್ತ ಹೊತ್ತಿನಲ್ಲಿ ಅತ್ಯಂತ ಉತ್ತಮ ಜಾತಕ ಎನ್ನುವುದಿದ್ದರೆ ಅದು ಕುಮಾರಸ್ವಾಮಿಯವರದ್ದು. ಆದ್ರಾ ನಕ್ಷತ್ರ, ಮಿಥುನ ರಾಶಿ, ಈ ರಾಶಿಗೆ ಏಕಾದಶದಲ್ಲಿ ಗುರುವಿದ್ದಾನೆ. ಹಾಗಾಗಿ, ಅವರ ಜಾತಕ ಬಹಳ ಉತ್ತಮವಾಗಿದೆ ಎಂದು ಗುರೂಜಿಗಳು ಹೇಳಿದ್ದಾರೆ.

ಕುಮಾರಸ್ವಾಮಿ ತಾಳ್ಮೆಯಿಂದ ಇರಬೇಕು
ದಿಗ್ವಿಜಯ ವಾಹಿನಿಯ ಜೊತೆಗೆ ಮಾತನಾಡುತ್ತಿದ್ದ ಗುರೂಜಿ, ಈಗಿನ ಅವರ ರಾಶಿಫಲ ಕುಮಾರಸ್ವಾಮಿಯವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ರಾಹು ಉತ್ತಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಅವರು ತಾಳ್ಮೆಯಿಂದ ಇರಬೇಕು. ಬೇಕಾಬಿಟ್ಟಿ ನಿರ್ಧಾರ ಅಥವಾ ಹೇಳಿಕೆಯನ್ನು ನೀಡಬಾರದು ಎನ್ನುವ ಸಲಹೆಯನ್ನು ಗುರೂಜಿ ನೀಡಿದ್ದಾರೆ.
ಗುರುರಾಹು ಸೂಕ್ತ ಸ್ಥಾನದಲ್ಲಿ ಇಲ್ಲ
ಗುರುರಾಹು ಸೂಕ್ತ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಅವರ ಕುಟುಂಬದಲ್ಲಿ ದೊಡ್ಡ ಗಂದಲವಿರಲಿದೆ ಎಂದು ಹಾಸನ ಟಿಕೆಟ್ ವಿಚಾರವನ್ನು ಪರೋಕ್ಷವಾಗಿ ದ್ವಾರಕಾನಾಥ್ ಗುರೂಜಿ ಉಲ್ಲೇಖಿಸಿದ್ದಾರೆ. ಮೂರು ಪಕ್ಷಗಳಲ್ಲಿನ ಪ್ರಮುಖ ನಾಯಕರ ಜಾತಕವನ್ನು ಅವಲೋಕಿಸುವುದಾದರೆ ಕುಮಾರಸ್ವಾಮಿಯವರ ಜಾತಕ ಎಲ್ಲರಿಗಿಂತ ಚೆನ್ನಾಗಿದೆ ಎಂದು ಗುರೂಜಿ ಹೇಳಿದ್ದಾರೆ.

ಶೃಂಗೇರಿ ಶಾರದಾ ಪೀಠ
ಶೃಂಗೇರಿ ಶಾರದಾ ಪೀಠದಲ್ಲಿ ಹೋಮವನ್ನು ಡಿ.ಕೆ.ಶಿವಕುಮಾರ್ ನಡೆಸಿದರು, ಇತ್ತೀಚಿನ ದಿನಗಳಲ್ಲಿ ಅವರು ನನ್ನ ಸಂಪರ್ಕದಲ್ಲಿ ಇಲ್ಲ. ನಿಖಿಲ್ ಕುಮಾರಸ್ವಾಮಿಯವರು ಲೋಕಸಭೆಯಲ್ಲಿ ಕಾರಣಗಳು ಇವೆ. ನಿಖಿಲ್ ಅವರದ್ದು ಉತ್ತರಾಷಾಢ ನಕ್ಷತ್ರ, ಆ ವೇಳೆ ಅವರ ಸಮಯ ಸರಿಯಿರಲಿಲ್ಲ. ಸ್ಪರ್ಧಿಸುವುದು ಬೇಡ ಎನ್ನುವ ಸಲಹೆಯನ್ನು ಅಂದು ನೀಡಿದ್ದೆ ಎಂದು ಗುರೂಜಿ ಹೇಳಿದ್ದಾರೆ.
ಮಹಿಳೆಯ ಮುಂದೆ ಕಣಕ್ಕಿಳಿಯುವುದು ಬೇಡ ಎಂದು ಹೇಳಿದ್ದೆ
ಮಹಿಳೆಯ ಮುಂದೆ ಕಣಕ್ಕಿಳಿಯುವುದು ಬೇಡ ಎಂದು ಹೇಳಿದ್ದೆ, ಆದರೆ ಅಷ್ಟೊತ್ತಿಗೆ ಸ್ಪರ್ಧಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. ಮುಖ್ಯಮಂತ್ರಿಗಳ ಮಗ ಸೋಲುತ್ತಾರೆ ಎಂದು ನಾನು ಟಿವಿಯ ಮುಂದೆ ಹೇಳಲು ಸಾಧ್ಯವಾಗುವುದಿಲ್ಲ. ಉತ್ತರಾಷಾಢ ನಕ್ಷತ್ರದಲ್ಲಿ ಶನಿ ಮುಂದೆ ದಾಟಿದ್ದಾನೆ, ಆದರೆ ಅವರ ಪ್ರಭಾವ ಇನ್ನೂ ಕಮ್ಮಿಯಾಗಿಲ್ಲ. ಆದರೆ, ಬೇರೆ ನಕ್ಷತ್ರಕ್ಕೆ ಹೋಗುವ ಮುನ್ನ ಒಳ್ಳೆಯದನ್ನು ಮಾಡಿ ಶನಿ ಹೋಗುತ್ತಾನೆ ಎಂದು ಪರೋಕ್ಷವಾಗಿ ರಾಮನಗರ ಚುನಾವಣೆಯಲ್ಲೂ ಗೆಲ್ಲಲು ಪ್ರಯಾಸ ಪಡಬೇಕಾದೀತು ಎನ್ನುವ ಮುನ್ಸೂಚನೆಯನ್ನು ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ.
ರೇವಣ್ಣ ಮತ್ತು ಅವರ ಪತ್ನಿ ಅಪಾರವಾಗಿ ದೈವಭಕ್ತರು
ರೇವಣ್ಣ ಮತ್ತು ಅವರ ಪತ್ನಿ ಅಪಾರವಾಗಿ ದೈವಭಕ್ತರಾಗಿವುದರಿಂದ ಅವರಿಗೆ ಏನೂ ತೊಂದರೆಯಾಗುವುದಿಲ್ಲ. ಅವರಿಗೆ ಒಳ್ಳೆಯದೇ ಆಗುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ.ದ್ವಾರಕಾನಾಥ್ ಗುರೂಜಿ ಖಾಸಗಿ ವಾಹಿನಿಯ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿಯವರೂ ಹೋಮ ಹವನವನ್ನು ನಡೆಸಿದ್ದರು.












Click it and Unblock the Notifications