TV9 C-Voter Pre Poll Survey: ಕಿತ್ತೂರು ಕರ್ನಾಟಕದಲ್ಲಿ 'ಕೈ' ಮುನ್ನಡೆ, 'ಕಮಲ-ತೆನೆ' ಸ್ಥಾನ ತಿಳಿಯಿರಿ
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ರಾಜ್ಯದಲ್ಲಿ ಮುಂದಿನ ತಿಂಗಳ ಮೇ 10ರಂದು ಮತದಾನ ನಡೆಯಲಿದ್ದು, ಕಿತ್ತೂರು ಕರ್ನಾಟಕ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಎಂಬ ನೂತನ ಚುನಾವಣಾ ಪೂರ್ವ ಸಮೀಕ್ಷೆಯೊಂದು ಮಂಗಳವಾರ ಬಿಡುಗಡೆಯಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ದೊರಕಿದೆ.
'ಟಿವಿ9 ಕನ್ನಡ ಸುದ್ದಿ ವಾಹಿನಿ' ನಡೆಸಿದ ಸಿ-ವೋಟರ್ ಚುನಾವಣಾ ಪೂರ್ವ (TV9 C-Voter Opinion Poll Survey) ಸಮೀಕ್ಷೆಯ ಅಂಕಿ ಅಂಶಗಳು ಮಂಗಳವಾರ ಹೊರ ಬಿದ್ದಿದೆ. ಕರ್ನಾಟಕದ ಅದರಲ್ಲೂ ಕಿತ್ತೂರು ಕರ್ನಾಟಕದ ಒಟ್ಟು 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲ ವಿರೋಧ ಪಕ್ಷ ಕಾಂಗ್ರೆಸ್‌ಗೆ 25-29 ಸೀಟು ಧಕ್ಕಲಿದೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯು ಖಚಿತ ಎಂಬ ಭಾವನೆ ಮೂಡಿಸಿದೆ.

ಇನ್ನೂ ಆಡಳಿತಾರೂಢ ಬಿಜೆಪಿಗೆ ಎಷ್ಟು ಸ್ಥಾನ?. ಸ್ಥಳಿಯ ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನ? ಎಂಬ ಮಾಹಿತಿಯು ಬಹಿರಂಗವಾಗಿದೆ. ಈ ಕುರಿತ ಸಮೀಕ್ಷೆಯ ಅಂಶಗಳು ಇಲ್ಲಿವೆ.
ಬಿಜೆಪಿ ಪಕ್ಷವು ಕಿತ್ತೂರು ಕರ್ನಾಟಕದಲ್ಲಿ 21ರಿಂದ 25 ಸೀಟುಗಳನ್ನು ಮಾತ್ರವೇ ಗೆಲ್ಲಲಿದೆ. ಅದರೊಂದಿಗೆ ಜೆಡಿಎಸ್ ಕೇವಲ ಒಂದು ಸ್ಥಾನಕ್ಕೆ ಹಾಗೂ ಇನ್ನಿತರ ಪಕ್ಷಗಳು ಈ ಭಾಗದಲ್ಲಿ ಒಂದು ಸ್ಥಾನಕ್ಕೆ ಸಿಮೀತವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ನಿತ್ಯ ಜೀವನದಲ್ಲಿ ಯಾವುದೆಲ್ಲವನ್ನು ಬದಲಿಸಬೇಕು ಎಂಬ 12 ವಿಭಾಗಗಳಲ್ಲಿ ಹಲವು ಪ್ರಶ್ನೆಗಳನ್ನು ಟಿವಿ9 ಕನ್ನಡ ಜನರ ಮುಂದಿಟ್ಟಿತ್ತು. ಈ ವೇಳೆ ಮೀಸಲಾತಿ, ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಸರ್ಕಾರಿ ಸೇವೆಗಳು, ಭ್ರಷ್ಟಾಚಾರ ಸೇರಿದಂತೆ ಇನ್ನಿತರ ಅಂಶಗಳ ಮೇಲೆ ಜನರು ಬೆಳಕು ಚೆಲ್ಲಿದ್ದಾರೆ. ಇದರಿಂದ ಯಾವ ಪಕ್ಷದತ್ತ ಮತದಾರರ ಒಲವಿದೆ ಎಂಬುದು ಬಹಿರಂಗವಾಗಿದೆ.
ಲಿಂಗಾಯತ ಮತಗಳು ಈ ಬಾರಿ ಕಾಂಗ್ರೆಸ್‌ಗೆ?
ಎರಡು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬಹುಮತ ಗಳಿಕೆಯ ವಿಶ್ವಾಸ ವ್ಯಕ್ತಪಡಿಸಿದ್ದವು. ಇದರಲ್ಲಿ ಕಾಂಗ್ರೆಸ್‌ಗೆ ತಾನು ಅಂದುಕೊಂಡಂತೆ ಆಗಿದೆ. 50 ಕ್ಷೇತ್ರವುಳ್ಳ ಕಲ್ಯಾಣ ಕರ್ನಾಟಕದಲ್ಲಿ ಮುನ್ನಡೆ ಸಾಧಿಸಿದೆ.
ಬಿಜೆಪಿ-ಕಾಂಗ್ರೆಸ್‌ನ ದೆಹಲಿ ನಾಯಕರು ರಾಜ್ಯದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಇದರ ನಡುವೆ ಹೊರ ಬಿದ್ದ ಈ ಸಮೀಕ್ಷೆ ಕೆಲವು ನಾಯಕರ ನಿದ್ದೆಗೆಡಿಸಿದೆ. ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತರೇ ನೀರ್ಣಾಯಕ ಎಂದು ಹೇಳಲಾಗುತ್ತಿದೆ.

ಎರಡು ಪಕ್ಷದಿಂದ ಲಿಂಗಾಯತ ದಾಳ
ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಲಿಂಗಾಯತ ದಾಳ ಬೀಸಿವೆ. ಲಿಂಗಾಯತರೇ ಹೆಚ್ಚಿರುವ ಕರ್ನಾಟಕ ರಾಜ್ಯದ ಬೃಹತ್ ಜಿಲ್ಲೆಯಲ್ಲಿ ಒಂದಾಗಿರುವ ಬೆಳಗಾವಿ ಜಿಲ್ಲೆಯೊಂದರಲ್ಲೇ 18 ವಿಧಾನಸಭಾ ಕ್ಷೇತ್ರಗಳು ಇವೆ. ಈ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದಲ್ಲಿ ಗದಗ, ಬಾಗಲೋಟೆ, ಉತ್ತರ ಕನ್ನಡ, ಧಾರವಾಡ, ವಿಜಯಪುರ ಹಾಗೂ ಹಾವೇರಿ ಒಳಗೊಂಡು ಒಟ್ಟು ಏಳು ಜಿಲ್ಲೆಗಳಿವೆ. ಆ ಜಿಲ್ಲೆಗಳಲ್ಲಿನ ಒಟ್ಟು 50 ವಿಧಾನಸಭಾ ಕ್ಷೇತ್ರಗಳಿ ಬಹುತೇಕ ಪಾಲು ಕಾಂಗ್ರೆಸ್‌ನದ್ದಾಗಿದೆ.
ಕಿತ್ತೂರು ಕರ್ನಾಟಕ ಕಾಂಗ್ರೆಸ್ ಕೈವಶ
ಇಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ಲಿಂಗಾಯತ ಮತಗಳು ಅಧಿಕವಾಗಿವೆ. ಹೀಗಾಗಿಯೇ ಎಲ್ಲ ರಾಜಕೀಯ ಪಕ್ಷಗಳಿಗೂ ಲಿಂಗಾಯತ ಸಮುದಾಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ. ಹಾವೇರಿ ಭಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಲಿಂಗಾಯತ ಹಲವು ನಾಯಕರ ಪ್ರಾಬಲ್ಯ ಇಲ್ಲಿದೆ. ಹೀಗಿದ್ದರು ಟಿವಿ 9 ನಡೆಸಿದ ಸಮೀಕ್ಷೆಯಲ್ಲಿ ಕಿತ್ತೂರು ಕರ್ನಾಟಕ ಈ ಬಾರಿ ಕಾಂಗ್ರೆಸ್ ವಶವಾಗಲಿದೆ ಎಂದು ತಿಳಿಸಿದೆ.












Click it and Unblock the Notifications