ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಚಿತ್ತ; ಹಿರಿಯ ನಾಯಕರಿಂದ ಸಭೆ

Subscribe to Oneindia Kannada

ಬೆಂಗಳೂರು, ಮೇ 15: ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಗಂಭೀರ ಚಿಂತನೆ ನಡೆಸುತ್ತಿದೆ.

ಬೆಂಗಳೂರಿನಲ್ಲಿ ಈ ಸಂಬಂಧ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಇದೆಲ್ಲಾ ಆರಂಭಿಕ ಟ್ರೆಂಡ್. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ರಚಿಸಲಿದೆ. ಜೆಡಿಎಸ್ ಜೊತೆಗಿನ ಮೈತ್ರಿಯ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದೇವೆ," ಎಂದು ಹೇಳಿದ್ದಾರೆ.

LIVE: ಕರ್ನಾಟಕ ಫಲಿತಾಂಶ: ಬಾದಾಮಿಯಲ್ಲೂ ಸಿದ್ದರಾಮಯ್ಯಗೆ ಹಿನ್ನಡೆ

ಇದಾದ ಬೆನ್ನಿಗೆ ಹೇಳಿಕೆ ನೀಡಿರುವ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ಪಷ್ಟ ಚಿತ್ರಣ 11-11.30ರ ಹೊತ್ತಿಗೆ ತಿಳಿದು ಬರಲಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಸಂಬಂಧ ಗುಲಾಮ್ ನಬಿ ಅಝಾದ್ ಮತ್ತು ಅಶೋಕ್ ಗೆಹ್ಲೋಟ್ ಜೊತೆ ಚರ್ಚೆ ನಡೆಸಲು ತೆರಳುತ್ತಿದ್ದೇನೆ," ಎಂದಿದ್ದಾರೆ.

Karnataka Election Results 2018: Congress leaders discussing on alliance with JDS

ಒಂದೊಮ್ಮೆ ಬಿಜೆಪಿಗೆ ಕೆಲವು ಸ್ಥಾನಗಳು ಕಡಿಮೆಯಾದರೆ ಹೇಗಾದರೂ ಮಾಡಿ ಜೆಡಿಎಸ್ ಜೊತೆಗೆ ಸೇರಿ ಅಧಿಕಾರದ ಗದ್ದುಗೆ ಏರಬೇಕು ಎಂದು ಕಾಂಗ್ರೆಸ್ ಹೊರಟಂತೆ ಕಾಣಿಸುತ್ತಿದೆ.

ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 114 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ 61, ಜೆಡಿಎಸ್ ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ ಕಾಂಗ್ರೆಸಿಗೆ ಮೈತ್ರಿಯ ಸಾಧ್ಯತೆಗಳೂ ಕ್ಷೀಣಿಸುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Election Results 2018 Live Updates in Kannada. Congress leader Mallikarjun Kharge is discussing with Ghulam Nabi Azad and Ashok Gehlot on alliance with JDS.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X