Karnataka election result 2023: ಈ ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ, ಜೆಡಿಎಸ್, ವಿವರ ಇಲ್ಲಿದೆ
ಕರ್ನಾಟಕ, ಮೇ, 14: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು, ಈಗಾಗಲೇ ಅಭ್ಯರ್ಥಿಗಳ ಭವಿಷ್ಯವು ನಿರ್ಧಾರವಾಗಿದೆ. ಅಲ್ಲದೆ ಕಾಂಗ್ರೆಸ್ ಒಂದು ಜಿಲ್ಲೆಯಲ್ಲಿ ಮಾತ್ರ ಕ್ಲೀನ್ ಸ್ವೀಪ್ ಆಗಿದೆ. ಬಿಜೆಪಿಯು 9 ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆದಿಲ್ಲ. ಹಾಗೂ ಜೆಡಿಎಸ್ ಪಕ್ಷವು ಕೂಡ 19 ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸದೆ ಕ್ಲೀನ್ ಸ್ವೀಪ್ ಆಗಿದೆ. ಹಾಗಾದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಜಿಲ್ಲೆಗಳಲ್ಲಿ ಸ್ಥಾನಗಳನ್ನು ಕಳೆದುಕೊಂಡಿವೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಈ ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ
1. ಬಳ್ಳಾರಿ
2. ಯಾದಗಿರಿ
3. ಚಿಕ್ಕಮಗಳೂರು
4. ಚಿಕ್ಕಬಳ್ಳಾಪುರ
5. ಕೊಡಗು
6. ರಾಮನಗರ
7. ಮಂಡ್ಯ
8. ಚಾಮರಾಜನಗರ
9. ಕೋಲಾರ

ಈ ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯದ ಜೆಡಿಎಸ್
1. ಬೆಳಗಾವಿ
2. ಬೀದರ್
3. ಉತ್ತರ ಕನ್ನಡ
4. ಹಾವೇರಿ
5. ಬಾಗಲಕೋಟೆ
6. ಕೊಪ್ಪಳ
7. ಗದಗ
8. ಬಳ್ಳಾರಿ
9. ಕಲಬುರಗಿ
10. ಕೊಡಗು
11. ಧಾರವಾಡ
12. ಚಿತ್ರದುರ್ಗ
13. ತುಮಕೂರು
14. ಬೆಂಗಳೂರು ಗ್ರಾಮಂತರ
15. ಬೆಂಗಳೂರು ನಗರ
16. ಉಡುಪಿ
17. ಚಿಕ್ಕಮಗಳೂರು
18. ದಾವಣಗೆರೆ
19. ದಕ್ಷಿಣ ಕನ್ನಡ
ಕಾಫಿನಾಡಿನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಆಡಳಿತಾರೂಢ ಬಿಜೆಪಿಯು ಭಾರೀ ಹಿನ್ನೆಡೆ ಅನುಭವಿಸಿದೆ. ಹಿಂದುತ್ವ ಪ್ರತಿಪಾದಕ ಹಾಗೂ ಬಿಜೆಪಿ ಮಾಜಿ ಸಿ.ಟಿ. ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಇಷ್ಟೇ ಅಲ್ಲದೇ ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.
ಬಿಜೆಪಿ ಭದ್ರ ಕೋಟೆಯನ್ನು ನುಚ್ಚು ನೂರು ಮಾಡುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಜಿಲ್ಲೆಯ ಐದಕ್ಕೆ ಐದು ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಒಲಿದಿವೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಚ್ ಡಿ ತಮ್ಮಯ್ಯ, ಮೂಡಿಗೆರೆ ಕ್ಷೇತ್ರದಲ್ಲಿ ನಯನ ಮೋಟಮ್ಮ, ಶೃಂಗೇರಿ ಟಿ ಡಿ ರಾಜೇಗೌಡ, ತರೀಕೆರೆ ಜಿ ಎಚ್ ಶ್ರೀನಿವಾಸ್ ಹಾಗೂ ಕಡೂರು ಕೆ ಎಸ್ ಆನಂದ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೇ ಬಿಜೆಪಿ ವಾಷ್ ಔಟ್ ಆದಂತಾಗಿದೆ.
ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದ ಸಿಟಿ ರವಿ ಅವರು ಪ್ರಬಲ ಹಿಂದುತ್ವವಾದಿಗಳು. ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು. ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರಕ್ಕೆ ಹತ್ತಿರದವರೂ ಹೌದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸಿಟಿ ರವಿ ಭಾರೀ ಅಂತರದ ಸೋಲು ಕಂಡಿದ್ದಾರೆ. ಅವರ ಆಪ್ತರಾಗಿದ್ದ ಕಾಂಗ್ರೆಸ್‌ನ ತಿಮ್ಮಯ್ಯ ಅವರಿಂದಲೇ ಪರಾಭವಗೊಂಡಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ
ಎಚ್.ಡಿ. ತಮ್ಮಯ್ಯ ಕಾಂಗ್ರೆಸ್ : 85054
ಸಿ.ಟಿ.ರವಿ ಬಿಜೆಪಿ : 79128
ಜೆಡಿಎಸ್ : 1763
ಕಡೂರು ವಿಧಾನಸಭಾ ಕ್ಷೇತ್ರ
ಕೆ.ಎಸ್. ಆನಂದ್ : ಕಾಂಗ್ರೆಸ್ - 7,54,76
ಬೆಳ್ಳಿ ಪ್ರಕಾಶ್ : ಬಿಜೆಪಿ - 63,469
ವೈವಿಎಸ್ ದತ್ತ : ಜೆಡಿಎಸ್ - 26837
ತರೀಕೆರೆ ವಿಧಾನಸಭಾ ಕ್ಷೇತ್ರ
ಶ್ರೀನಿವಾಸ್ : ಕಾಂಗ್ರೆಸ್- 63,086
ಡಿ.ಎಸ್.ಸುರೇಶ್ : ಬಿಜೆಪಿ-50,955
ಗೋಪಿಕೃಷ್ಣ : ಪಕ್ಷೇತರ- 35,468
ಶೃಂಗೇರಿ ವಿಧಾನಸಭಾ ಕ್ಷೇತ್ರ
ಟಿ.ಡಿ.ರಾಜೇಗೌಡ : ಕಾಂಗ್ರೆಸ್ - 59,171
ಡಿ.ಎನ್.ಜೀವರಾಜ್ : ಬಿಜೆಪಿ - 58,970
ಸುಧಾಕರ ಶೆಟ್ಟಿ : ಜೆಡಿಎಸ್ - 19,417
ಮೂಡಿಗೆರೆ ವಿಧಾನಸಭಾ ಕ್ಷೇತ್ರ
ನಯನಮೋಟಮ್ಮ : ಕಾಂಗ್ರೆಸ್ - 50,843
ದೀಪಕ್ ದೊಡ್ಡಯ್ಯ : ಬಿಜೆಪಿ - 50,121
ಎಂ.ಪಿ.ಕುಮಾರಸ್ವಾಮಿ : ಜೆಡಿಎಸ್ - 26,038












Click it and Unblock the Notifications