Jan Ki Baat Suvarna News Survey: ಈ ಬಾರಿಯೂ ಅತಂತ್ರ ವಿಧಾನಸಭೆ! ಮತ್ತೆ ದಳಪತಿಯೇ ಕಿಂಗ್ ಮೇಕರ್!?
ಬೆಂಗಳೂರು, ಏಪ್ರಿಲ್14: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. 2023 ರ ರಾಜ್ಯ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಟಿಕೆಟ್ ಘೋಷಣೆಯಿಂದ ಬಂಡಾಯದ ಜ್ವಾಲೆ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಜೋರಾಗಿದೆ.
ಇತ್ತ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಗೆಲ್ಲುವ ತವಕದಲ್ಲಿರುವ ರಾಜಕೀಯ ಪಕ್ಷಗಳು ಹಲವು ಸರ್ವೆಯನ್ನ ನಡೆಸಿದ್ದು, ಸರ್ವೆಯಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಘಾತವಾಗಿದೆ.

ಇನ್ನೂ ಆಡಳಿತರೂಢ ಬಿಜೆಪಿ ಮಿಷನ್ 150 ಟರ್ಗೆಟ್ ಇಟ್ಟುಕೊಂಡಿದರೆ, ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಗೆಲ್ಲುವ ವಿಶ್ವಾಸವನ್ನ ಇಟ್ಟುಕೊಂಡಿದ್ದು, ಇದೀಗ (Jan Ki Baat Suvarna News Survey) ಸುವರ್ಣ ಸಮೀಕ್ಷೆ ಪ್ರಕಟಗೊಂಡಿದ್ದು, ರಾಜ್ಯ ನಾಯಕರಿಗೆ ಈ ಸರ್ವೆಯಿಂದ ಅಘಾತ ಉಂಟು ಮಾಡಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಸುವರ್ಣ ನ್ಯೂಸ್ ಹೇಳಿದೆ. ಇದರಿಂದಾಗಿ ಆಡಳಿತರೂಢ ಬಿಜೆಪಿಗೆ ಆಘಾತವಾಗುವ ಸಾಧ್ಯತೆಯಿದೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಇನ್ನೂ ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯ ಪ್ರಕಾರ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್ 89 ರಿಂದ 97 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಪ್ರಾದೇಶಿಕ ಪಕ್ಷ ಜೆಡಿಎಸ್ 25-29 ಸ್ಥಾನಗಳನ್ನು ಗೆಲ್ಲಲಿದ್ದರೆ, ಇತರೆ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು ಸರ್ವೆ ಮೂಲಕ ತಿಳಿಸಲಾಗಿದೆ.

ಅಲ್ಲದೇ 2018ರ ಚುನಾವಣೆಯಲ್ಲಿ ಜನ್ ಕಿ ಬಾತ್ ಚುನಾವಣಾ ಪೂರ್ವದಲ್ಲಿ ಸಮೀಕ್ಷೆ ನಡೆಸಿದ್ದು, ಬಿಜೆಪಿ 102 ರಿಂದ 108 ಸೀಟ್, ಕಾಂಗ್ರೆಸ್ 72ರಿಂದ74, ಜೆಡಿಎಸ್ 42-44 ಹಾಗೂ ಇತರೆ 2-4 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಪ್ರಕಟಿಸಿತ್ತು. ಅದರಂತೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 81, ಜೆಡಿಎಸ್ 37 ಹಾಗೂ ಇತರೆ 2 ಸೀಟ್‌ಗಳಲ್ಲಿ ಗೆಲುವು ಸಾಧಿಸಿತ್ತು.
ಜನ್ ಕಿ ಬಾತ್ ಸುವರ್ಣ ನ್ಯೂಸ್ ಸಮೀಕ್ಷೆ:
ಬಿಜೆಪಿ: 98 ರಿಂದ 109
ಕಾಂಗ್ರೆಸ್: 89 ರಿಂದ 97
ಜೆಡಿಎಸ್: 25 ರಿಂದ29
ಇತರೆ: 0 ರಿಂದ 1












Click it and Unblock the Notifications