ರ‍್ಯಾಲಿಗಳಿಗೆ ಬರೋ ಜನರಿಗೆ ಡಿಮ್ಯಾಂಡೋ ಡಿಮ್ಯಾಂಡ್!‌ ಪ್ರಚಾರಕ್ಕೆ ಬರೋ ಮಂದಿಗೆ ಯಾವ ಪಕ್ಷ ಎಷ್ಟು ಕೊಡುತ್ತೆ ಗೊತ್ತಾ?

ಬೆಂಗಳೂರು,ಏಪ್ರಿಲ್29:‌ ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿ ರಾಜಕೀಯ ದಿಗ್ಗಜರು ಭರ್ಜರಿ ಪ್ರಚಾರವನ್ನ ನಡೆಸುತ್ತಿದ್ದಾರೆ. ಇನ್ನೂ ಚುನಾವಣೆ ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಕೆಲ ದಿನಗಳು ಮಾತ್ರ. ಈ ಬಿರುಬಿಸಿಲ ಜತೆಗೆ ಪ್ರಚಾರದ ಕಾವು ಸಹ ಹೆಚ್ಚಾಗಿದೆ.

ಪ್ರತಿ ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ಹಲವು ಪಕ್ಷದ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳು ನೂರಾರು ಜನರೊಂದಿಗೆ ಪ್ರಚಾರವನ್ನ ನಡೆಸುತ್ತಿದ್ದಾರೆ. ಇತ್ತ ಚುನಾವಣಾ ಪ್ರಚಾರದಲ್ಲಿರುವ ಅಭ್ಯರ್ಥಿಗಳಿಗೆ ತಮ್ಮ ಶಕ್ತಿ ಪ್ರದರ್ಶನ ಹಾಗೂ ಜನ ಬಲವನ್ನ ತೋರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಸಮಾವೇಶ ಹಾಗೂ ರ‍್ಯಾಲಿಗಳಿಗೆ ಬರೋ ಜನರಿಗೆ ಡಿಮ್ಯಾಂಡೋ ಡಿಮ್ಯಾಂಡ್ ಸೃಷ್ಟಿಯಾಗಿದೆ.

Karnataka Election: How Much The Political Parties Pays to Rally Attendees

ಹೌದು, ಪ್ರಚಾರಕ್ಕೆ ತೆರಳುವ ಅಭ್ಯರ್ಥಿ ಜನಬಲ ಪ್ರದರ್ಶಿಸುವುದು ಅತಿ ಮುಖ್ಯ. ಅಭ್ಯರ್ಥಿ ಹಿಂದಿರುವ ಜನರ ನೋಡಿ ಅವರ ಬಲಾಬಲ ಲೆಕ್ಕ ಹಾಕುತ್ತಾರೆ. ಹೀಗಾಗಿ ಭವಿಷ್ಯದ ಜನನಾಯಕ ಮತಯಾಚನೆ ವೇಳೆ ತನ್ನ ಜನಬಲ ತೋರಿಸಲೇಬೇಕು. ಹೀಗಾಗಿ ಕಳೆದ 15 ದಿನಗಳಿಂದ ಪ್ರಚಾರ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೆ ಜನ ಬಲ ಅನಿವಾರ್ಯವಾಗಿದೆ. ಇತ್ತ ಜನರಿಗೆ ಸರಿಯಾದ ಉದ್ಯೋಗ ಇಲ್ಲ. ದಿನಕ್ಕೆ 500 ರಿಂದ 1000 ಬರುತ್ತೆ ಅಂದ್ರೆ ಯಾವ ಮಂದಿ ತಾನೇ ಸುಮ್ಮನೆ ಇರ್ತಾರೆ ಹೇಳಿ. ಹೀಗಾಗಿ ಪ್ರಚಾರಕ್ಕೆ ಯಾವ ಪಕ್ಷ ಹಣ ಹೆಚ್ಚಾಗಿ ಕೊಡುತ್ತೋ ಆ ಪಕ್ಷ ಜನರು ಜೈಕಾರ ಹಾಕುತ್ತಿದ್ದಾರೆ.

ಕಳೆದ 15 ದಿನಗಳಿಂದ ರಾಜ್ಯಾದ್ಯಾಂತ ರಾಜಕೀಯ ಪಕ್ಷಗಳು ಪ್ರಚಾರವನ್ನ ನಡೆಸುತ್ತಿದ್ದು, ಬಹಿರಂಗ ಪ್ರಚಾರ ಕೆಲವೇ ಕೆಲವು 0ದಿನ ಉಳಿದಿರುವ ಕಾರಣ ಪ್ರಚಾರಕ್ಕೆ ಜನರನ್ನ ಸೇರಿಸುವ ಹೊಣೆಯನ್ನ ನಂಬಿಕಸ್ಥ ಮುಖಂಡನಿಗೆ ಹಣ ನೀಡಿ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿ ಜನರನ್ನ ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಸೂಚನೆ ನೀಡಿರುತ್ತಾರೆ. ಅಭ್ಯರ್ಥಿ ಹಿಂದೆ ಬರುವ ಜನರನ್ನು ಹೊಂದಿಸುವ ಹೊಣೆ ಹೊತ್ತವರು ಹೈರಾಣಾಗಿ ಹೋಗಿದ್ದಾರೆ.

Karnataka Election: How Much The Political Parties Pays to Rally Attendees

ಈಗಾಗಲೇ ಗ್ರಾಮೀಣಾ ಭಾಗದಲ್ಲಿ ದಿನಕ್ಕೆ 300 ರಿಂದ 500 ರೂಪಾಯಿಗಳನ್ನ ನೀಡುತ್ತಿದ್ದು, ಜೊತೆಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನ ಮಾಡಬೇಕಾಗಿದೆ. ಇನ್ನೂ ದೊಡ್ಡ ಮಟ್ಟದಲ್ಲಿ ನಾಯಕರ ಸಮಾವೇಶಗಳಿದ್ದಾಗ ರಾಜಕೀಯ ಪಕ್ಷಗಳಿಗೆ ತಮ್ಮ ಜನ ಬಲವನ್ನ ಸೇರಿಸುವುದು ಅನಿವಾರ್ಯವಾಗಿದ್ದು, 500, 1000, ಹಾಗೂ ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನ ಕೊಟ್ಟು ಜನರನ್ನ ಸಮಾವೇಶಸಗಳಲ್ಲಿ ಸೇರಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಹಳ್ಳಿ ಭಾಗದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು 300 ರಿಂದ 500 ರೂಪಾಯಿ ಜೊತೆಗೆ ತಿಂಡಿ, ಊಟ ನೀಡಲಾಗುತ್ತಿದೆ. ಅಲ್ಲದೇ ದೊಡ್ಡ ನಾಯಕರ ಸಮಾವೇಶದಲ್ಲಿ 500 ರೂಪಾಯಿಗಿಂತ ಹೆಚ್ಚಿನ ಹಣವನ್ನ ನೀಡಲಾಗುತ್ತಿದೆ ಎಂದು ಪ್ರಚಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್‌ ನಲ್ಲೂ 300 ,500, 600 ರೂಪಾಯಿ ವರೆಗೂ ಹಣವನ್ನ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Karnataka Election: How Much The Political Parties Pays to Rally Attendees

ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್‌ ಅಭ್ಯರ್ಥಿಗಳು 200, 300 ಹಾಗೂ 400 ರೂಪಾಯಿ ಜೊತೆಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿರುತ್ತದೆ ಎಂದು ತಿಳಿದುಬಂದಿದೆ. ಇತ್ತ ಕೆಲ ದಿದನಗಳು ಮಾತ್ರ ಬಹಿರಂಗ ಪ್ರಚಾರ ಇರುವುದರಿಂದ ಹೊರಗಿನ ಜನ ಹೆಚ್ಚು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಮುಖಂಡರೊಬ್ಬರು ಹೇಳುವಂತೆ ಪ್ರಸ್ತುತ ಒಬ್ಬರಿಗೆ ದಿನಕ್ಕೆ 300 ರೂ. ಜತೆ ತಿಂಡಿ, ಊಟ ನೀಡಲಾಗುತ್ತಿದೆ. ಆದರೆ ಜನ 500 ರೂ.ಗೆ ಬೇಡಿಕೆ ಇರಿಸುತ್ತಿದ್ದಾರೆ. ಇನ್ನೆರಡು ದಿನ ಕಳೆದರೆ 1000 ರೂ. ಕೇಳಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಪ್ರಚಾರಕ್ಕೆ ಬರುವ ಜನರು ಬಿಸಿಲು ಹೆಚ್ಚಾಗಿರುವುದರಿಂದ ಅರ್ಥದಲ್ಲೇ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಹಣ ಕೊಡುವ ಜೊತೆಗೆ ತಿಂಡಿ, ಊಟ, ನೀರಿನ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲದೇ ಪ್ರಚಾರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಒಂದೇ ರೀತಿ ತಿಂಡಿ ಪಾರ್ಸೆಲ್‌ ತಂದು ಕೊಡುವುದು ಸಾಮಾನ್ಯವಾಗಿದೆ. ಜತೆಗೆ ಕೆಲವರು ಗುಟಕಾ, ಸಿಗರೇಟು ಗಳನ್ನ ಕೊಡಿಸುವ ಬೇಡಿಕೆ ಇಟ್ಟು ಪ್ರಚಾರಕ್ಕೆ ಕರೆತಂದಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+