Karnataka Election ADR Report 2023: ಶೂನ್ಯ ಆಸ್ತಿ ಹೊಂದಿದ 14 ಮಂದಿ ಚುನಾವಣಾ ಕಣದಲ್ಲಿದ್ದಾರೆ, ಯಾರವರು?
ಬೆಂಗಳೂರು, ಮೇ 05: ಚುನಾವಣೆ ಹೊತ್ತಿನಲ್ಲಿ ಸ್ಫರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಕೋಟಿ ಕೋಟಿ ರೂಪಾಯಿ ಆಸ್ತಿ ಹೊಂದಿದವರು ಯಾರು?, ಕಳೆದ ಬಾರಿಗಿಂತ ಈ ಭಾರಿ ಎಷ್ಟು ಆಸ್ತಿ ಹೆಚ್ಚಿಸಿಕೊಂಡಿದ್ಯಾರು ಎಂಬೆಲ್ಲ ವಿಚಾರಗಳು ಚರ್ಚೆಗೆ ಬರುತ್ತವೆ. ಆದರೆ 2023ರ ಚುನಾವಣೆಯಲ್ಲಿ ಆಸ್ತಿ ಹೊಂದಿಲ್ಲದ (ಶೂನ್ಯ) ಅಭ್ಯರ್ಥಿಗಳ ಹೆಸರುಗಳು ಸಹ ಸದ್ದು ಮಾಡುತ್ತಿವೆ.
ಪ್ರಸ್ತಕ 2023ರ ಚುನಾವಣೆಯಲ್ಲಿ ಒಟ್ಟು 14 ಅಭ್ಯರ್ಥಿಗಳು ಶೂನ್ಯ ಆಸ್ತಿ ಹೊಂದಿದ್ದಾರೆ ಎಂಬ ಅಂಶ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ (ADR Report 2023) ತಿಳಿಸಿದೆ. ಇದರಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಯಾರ ಹೆಸರುಗಳು ಇಲ್ಲ. ಭಾರತೀಯ ಹೊಸ ಕಾಂಗ್ರೆಸ್ ಪಕ್ಷ, ಉತ್ತರ ಪ್ರಜಾಕೀಯ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ)ಯ ಮೂರು ಮಂದಿ ಬಿಟ್ಟರೆ ಬಹುತೇಕ ಎಲ್ಲ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳೇ ಶೂನ್ಯ ಆಸ್ತಿ ಹೊಂದಿದವರಾಗಿದ್ದಾರೆ.
(Source: ADR Press Release dated 3rd May, 2023)

ಕರ್ನಾಟಕ ಚುನಾವಣಾ ಎಡಿಆರ್ ವರದಿ 2023ರ ಪ್ರಕಾರ ರಾಜ್ಯದಲ್ಲಿ ಈ ಬಾರಿ ಆಸ್ತಿಯೇ ಇಲ್ಲದೇ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯಾರು, ಅವರದ್ದು ಯಾವ ಕ್ಷೇತ್ರ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಶೂನ್ಯ ಆಸ್ತಿ ಹೊಂದಿದ ಅಭ್ಯರ್ಥಿಗಳ ವಿವರ
* ಬಿಜಾಪುರ ಜಿಲ್ಲೆಯ ನಾಗಟಾಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣಾ ಜಿ ಕಟಕದೊಂಡ.
* ಕಲಬುರಗಿ ಜಿಲ್ಲೆಯ ಗುಲ್ಬರ್ಗಾ ಗ್ರಾಮಾಂತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದತ್ತಾತ್ರೇಯ ಕೆ.ಕಮಲಾಪುರ.
* ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಂತೋಷ್ ಕುಮಾರ್.
* ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾರ ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕಲಾಲ್ ಟಾಕಪ್ಪ ಯಂದೆ ಯಲ್ಲಪ್ಪ.
* ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಓ.ರಂಗಸ್ವಾಮಿ.
* ತುಮಕೂರು ಜಿಲ್ಲೆಯ ತುಮಕೂರು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ಆರ್.ಎ.
* ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಶಿವಣ್ಣ.
* ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಗರಾಜಪ್ಪ.

* ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿ.ಕಲಾವತಿ.
* ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಕೆ.ಆರ್.
* ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ರಮೇಶ್ ಬೂದು ಸುಳ್ಯ,
* ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭಾಗ್ಯಾ.ಎನ್.
* ಬಿಬಿಎಂಪಿ ಕೇಂದ್ರ ವ್ಯಾಪ್ತಿಯ ಶಿವಾಜಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಮೀಲ್ ಅಹ್ಮದ್
* ಬಿಬಿಎಂಪಿ ಉತ್ತರ ವ್ಯಾಪ್ತಿಯ ಹೆಬ್ಬಾಳ ಕ್ಷೇತ್ರದ ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದ ಪಕ್ಷೇತರ ಅಭ್ಯರ್ಥಿ ಅಂಜನ್ ಕುಮಾರ್ ಗೌಡ್.ಎಸ್.












Click it and Unblock the Notifications