ಚುನಾವಣಾ ಹೊತ್ತಲಿ ಮತ್ತೆ ಮುನ್ನೆಲೆಗೆ ಬಂದ ಸಿಎಂ ಕೂಗು; ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು: ಬಸವರಾಜ ರಾಯರೆಡ್ಡಿ
ಕೊಪ್ಪಳ,ಏಪ್ರಿಲ್7: ಈ ಬಾರಿ ಚುನಾವಣೇಯಲ್ಲಿ ಬಹುಮತ ಪಡೆದ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದೆ. ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರು ಎಂಬಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಈಗಾಗಲೇ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಮುಂದಿನ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಜಟಾಪಟಿ ಏರ್ಪಡಿದ್ದು, ಈಗಾಗಲೇ ಈ ಇಬ್ಬರು ನಾಯಕರ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ದು, ಇದೀಗ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ 166 ಅಭ್ಯರ್ಥಿಗಳನ್ನ ಬಿಡುಗಡೆ ಮಾಡಿದ್ದು, ಮತ್ತೆ ಸಿಎಂ ಚರ್ಚೆ ಮುನ್ನೆಲೆ ಬಂದಿದೆ.

ಈ ಕುರಿತು ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು. ಅವರ ಬಿಟ್ಟು ಬೇರೆ ಯಾರು ಮುಖ್ಯಮಂತ್ರಿ ಆಗುವಂಥವರು ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.
ಯಲಬುರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ರಾಯರಡ್ಡಿ ಸಿದ್ದರಾಮಯ್ಯ ಕಾನೂನು ಗೊತ್ತಿದ್ದವರು ಅಂಥವರು ಮುಖ್ಯಮಂತ್ರಿಯಾಗಬೇಕೆಂದು ಹೇಳಿದರು.
ಸಿದ್ದರಾಮಯ್ಯ ನಂತರ ವಿಧಾನಸಭೆಯಲ್ಲಿ ಸಮರ್ಥವಾಗಿ ಮಾತನಾಡುವವರು ಇಲ್ಲ. ಕಾನೂನು ಗೊತ್ತಿಲ್ಲದವರೊಂದಿಗೆ ನಾನು ವಿಧಾನಸಭೆಯಲ್ಲಿ ಕೂಡಬೇಕು ಎಂಬ ಆತಂಕವಿದೆ. ಬಿಜೆಪಿ ರಾಜಕಾರಣವನ್ನು ಹಾಳು ಮಾಡಿದೆ ಎಂದು ಟೀಕಿಸಿದರು.

ರಾಜ್ಯ ಸರಕಾರ ಒಳಮೀಸಲಾತಿ, 2ಡಿ ಮೀಸಲಾತಿ ಶಿಫಾರಸ್ಸು ಮಾಡಿದೆ.ಇದು ಜಾರಿಯಾಗುವುದು ಅನುಮಾನ. ಕೇಂದ್ರ ಸರಕಾರ ಒಪ್ಪಿಕೊಳ್ಳಬೇಕು ಹಾಗು 16 ರಾಜ್ಯಗಳು ಸಹ ಒಪ್ಪಿಕೊಳ್ಳಬೇಕು. ಆಂಧ್ರದಲ್ಲಿ ಒಳಮೀಸಲಾತಿಗೆ ಶಿಫಾರಸ್ಸು ಮಾಡಿ 8 ವರ್ಷವಾಗಿದೆ ಅಲ್ಲಿ ಜಾರಿಯಾಗಿಲ್ಲ.ಮುಸ್ಲಿಂರಿಗೂ ಮೀಸಲಾತಿ ಕಡಿತ ಮಾಡಿದೆ. ಅದನ್ನು ಸಹ ನ್ಯಾಯಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಕಾನೂನು ಗೊತ್ತಿಲ್ಲ ಒಳಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ. 2ಡಿ ಮೀಸಲಾತಿಯಿಂದ ಲಿಂಗಾಯತ್ ಅಂಥ ಬದಲಾವಣೆಯಾಗುವುದಿಲ್ಲ ಎಂದರು.
ಸಚಿವ ಹಾಲಪ್ಪ ಆಚಾರರಿಗೆ ಬಿಜೆಪಿ ಟಿಕೆಟ್ ಸಿಗುವುದು ಡೌಟು. ಹೀಗೆಂದು ಬಿಜೆಪಿ ಕೆಲವು ಸ್ನೇಹಿತರು ನನಗೆ ಹೇಳಿದ್ದಾರೆ. ಯಲಬುರ್ಗಾ ಕ್ಷೇತ್ರಕ್ಕೆ ಹೊರಗಿನಿಂದ ಅಭ್ಯರ್ಥಿ ಹಾಕುವ ಸಾಧ್ಯತೆ ಇದೆ. ಎಪ್ರಿಲ್ 15 ರವರೆಗೂ ಯಲಬುರ್ಗಾ ಘೋಷಣೆ ಸಾಧ್ಯತೆ ಕಡಿಮೆ. ಹಾಲಪ್ಪ ಆಚಾರ ತಮ್ಮ ಕುಟುಂಬದವರಿಗೆ ಅಧಿಕಾರ ನೀಡಿದ್ದಾರೆ, ಅಲ್ಲದೆ ಡಿಸಿಸಿ ಬ್ಯಾಂಕಿಗೆ ಅಳಿಯನನ್ನು ನಿರ್ದೇಶಕರನ್ನಾಗಿ ಮಾಡಿದ್ದಾರೆ ಎಂದರು.
ಹಾಲಪ್ಪ ಆಚಾರ ಯಲಬುರ್ಗಾಕ್ಕೆ ನೀರು ತಂದಿದ್ದು ಎಂದು ಹೇಳುತ್ತಿದ್ದಾರೆ. ಯಲಬುರ್ಗಾ ಎಷ್ಟು ಪ್ರಮಾಣ ನೀರು ಅಲಾಕೇಷನ್ ಆಗಿದೆ ಎಂದು ಹೇಳಲಿ. ಕಾನೂನು ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ನಾನು ಎಲ್ಎಲ್ ಬಿ ಓದಿ ವಕೀಲನಾಗಿದ್ದೇವೇ. ರಾಜಕಾರಣಗಳು ಕಾನೂನು ತಿಳಿದುಕೊಳ್ಳಬೇಕು ಎಂದರು. ಹಾಲಪ್ಪ ಆಚಾರ ಸೀರೆ, ಕುಬಸ ಹಂಚಿದ್ದಾರೆ. ಈ ಸೀರೆಯನ್ನು ಮಹಿಳೆಯರು ಉಟ್ಟುಕೊಳ್ಳುತ್ತಿಲ್ಲ. ಅವುಗಳನ್ನು ಹಪ್ಪಳ ಸಂಡಿಗೆ ಒಣಗಿಸಲು ಹಾಕುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಹಲವು ಶಾಸಕರಿಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ಬೇಕು ಎಂದ ಆಸೆಯನ್ನ ಹೊಂದಿದ್ದು, ಈ ಹಿಂದೆ ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅನೇಕ ಭಾಗ್ಯಗಳನ್ನು ಕೊಟ್ಟಿದ್ದಾರೆ. ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಹಿಂದಿನ ಎಲ್ಲಾ ಅಭಿವೃದ್ಧಿ ಕೆಲಸಗಳು ಮರಳಿ ಬರಲು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಾಸಕ ಬೈರತಿ ಸುರೇಶ್ ಹೇಳಿದ್ದಾರೆ.












Click it and Unblock the Notifications