ಕಲಬುರಗಿಯ ಜನತೆ ಕೈ ಬಿಟ್ರು ಕೂಡ ಸೋನಿಯಾ ಗಾಂಧಿ ನನ್ನನ್ನು ಕೈ ಬಿಟ್ಟಿಲ್ಲ: ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ,ಮೇ 6: ಕಲಬುರಗಿಯ ಜನತೆ ಕೈ ಬಿಟ್ರು ಕೂಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನನ್ನನ್ನು ಕೈ ಬಿಟ್ಟಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಈ ಕುರಿತು ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ನನ್ನ ಕೈ ಬಿಡಲಿಲ್ಲ. ಕೇಂದ್ರದಲ್ಲಿ ನನಗೆ ಯುಪಿಎ ಸರ್ಕಾರವಿದ್ದಾಗ ಕಾರ್ಮಿಕ, ರೈಲ್ವೇ ಸೇರಿದಂತೆ ಪ್ರಮುಖ ಖಾತೆಗಳನ್ನು ಕೊಟ್ಟಿದ್ದರು, ಅದೇರೀತಿ ನನ್ನನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ರು ತದನಂತರ ರಾಜ್ಯಸಭೆಗೆ ಕಳುಹಿಸಿ ಅಲ್ಲಿಯೂ ಕೂಡ ವಿರೋಧ ಪಕ್ಷದ ನಾಯಕರಾಗಿ ಮಾಡಿದ್ದಾರೆ, ಇದೀಗ ಇಂದು ನಿಮ್ಮೆಲ್ಲರ ಆಶೀವಾರ್ದದಿಂದ ಇಂದು ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಈ ಸ್ಥಾನದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ.

ಈ ಎಐಸಿಸಿ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಕ್ಕಿಲ್ಲ. ಈ ಸ್ಥಾನದಲ್ಲಿ ಗಾಂಧೀ, ನೆಹರೂ, ಪಟೇಲ್ ಹಾಗೂ ಮೌಲಾನ ಆಝಾಧ್ ಈ ಸ್ಥಾನವನ್ನು ಅಲಂಕರಿಸಿದ್ದರು. ಆ ಸ್ಥಾನ ಇಂದು ಕಲಬುರಗಿ ಜನತೆಯ ಆಶೀವಾರ್ದದಿಂದ ಇಂದು ಈ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷನೆ ಮಾಡಿದ್ದೇವೆ ಇದರೊಂದಿಗೆ ಎಲ್ಲ ಐದು ಘೋಷಣೆಗಳನ್ನು ಜಾರಿಗೆ ತರುವುದು ನನ್ನ ಗ್ಯಾರಂಟಿ ಎಂದು ಭರವಸೆ. 10 ಕೆ.ಜಿ. ಅಕ್ಕಿ, 200 ಯೂನಿಟ್ ವಿದ್ಯುತ್, ಯುವನಿಧಿ ಮೂರು ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಗೆ ಎರಡು ಸಾವಿರ ರೂಪಾಯಿ ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಪಾಸ್ ನೀಡುವುದು ನಮ್ಮ ಕಾಂಗ್ರೆಸ್ಸು ಪಕ್ಷದ ಪ್ರಮುಖ ಐದು ಭರವಸೆ ಮತ್ತು ಗ್ಯಾರಂಟಿ. ನಾವು ನುಡಿದಂತೆ ನಡೆಯುತ್ತೇವೆ. ಈ ಹಿಂದೆಯು ನುಡಿದಂತೆ ನಾವು ನಡೆದಿದ್ದೇವೆ.
ಈ ಬಿಜೆಪಿ ಸರ್ಕಾರ ಜನ ಕಷ್ಟದಲ್ಲಿದ್ದಾಗ ಬಂದಿಲ್ಲ, ಕೋವಿಡ್ ಮಹಾಮಾರಿ ಬಂದಾಗ ಇವರು ನೆರವಿಗೆ ಬಂದಿಲ್ಲ ಅದೇರೀತಿ ಪ್ರವಾಹ ಬಂದಗಲೂ ಈ ಸರ್ಕಾರ ನೆರವಿಗೆ ಬರಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತವೆಂದು ಹೇಳಿದ್ರು, ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತವೆಂದು ಹೇಳಿದ್ರು, 15 ಲಕ್ಷ ನಿಮ್ಮ ಖಾತೆಗೆ ಹಣ ಹಾಕುತ್ತವೆಂದು ಹೇಳಿ ಜನತೆಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಈ ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯನಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ, 45 ಕೋಟಿ ಜನರ ಹತ್ತಿರ ಯಾವುದೇ ಕೆಲಸವಿಲ್ಲ. ನೌಕರಿಯಿಂದ ವಂಚಿತರಾಗಿದ್ದಾರೆ. ಬಡವರು ಸಾಲವನ್ನು ಮರುಪಾವತಿ ಮಾಡದ್ದಿದಲ್ಲಿ ಈ ಸರ್ಕಾರ ಜಪ್ತಿ ಮಾಡುತ್ತೆ. ಆದರೆ ಶ್ರೀಮಂತರು 565000 ಲಕ್ಷ ಕೋಟಿ ಈ ಶ್ರೀಮಂತರು ಬ್ಯಾಂಕಿನಿಂದ ದುಡ್ಡು ಹೊಡೆದಿದ್ದಾರೆ. ನಾವು ಗಾಳಿಯಲ್ಲಿ ಗುಂಡು ಹೊಡೆಯಲ್ಲ, ಇದು ಸತ್ಯ. ನಾವು ಸತ್ಯವನ್ನೇ ಹೇಳ್ತೇವೆ.
375 ಕೋಟಿ ರೂ ದಿನ ಶ್ರಿಮಂತರ ಹಣವನ್ನು ಬ್ಯಾಂಕಿನಿಂದ ಸಾಲಮನ್ನಾ ಮಾಡುತ್ತಿದ್ದಾರೆ. 11 ಲಕ್ಷ ಕೋಟಿ ಕೂಡ ಮಾಫಿ ಮಾಡಿದ್ದಾರೆ. ಜನ ಸಾಮಾನ್ಯರ ದುಡ್ಡು ಬ್ಯಾಂಕಿನಿಂದ ತೆಗೆದು ಇಂದು ಶ್ರೀಮಂತರಿಗೆ ಕೊಡುತ್ತ ಇದ್ದಾರೆ, ಈ ಸರ್ಕಾರ ಜನಸಾಮಾನ್ಯನ ಅಭಿವೃದ್ಧಿಗಾಗಿ ಏನೂ ಕೆಲಸ ಮಾಡಿಲ್ಲ ಕೇವಲ ಶ್ರೀಮಂತರ ಪರ ಇದೆ ಈ ಸರ್ಕಾರ. ನಾನು ಇದನ್ನು ಸಂಸತ್ತಿನಲ್ಲೂ ಹೇಳಿದ್ದೇನೆ, ನನ್ನ ಮತ್ತು ರಾಹುಲ್ ಗಾಂಧೀ ಅವರ ಭಾಷಣವನ್ನು ತೆಗದು ಹಾಕಿದ್ದಾರೆ. ರಾಹುಲ್ ಗಾಂಧೀ ಅವರ ಸಂಸದ ಸ್ಥಾನದ ಸದಸ್ಯತ್ವವನ್ನು ತೆಗೆದು ಹಾಕಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಕೆಲ ಜನ ಅಪ್ರಪಚಾರ ಮಾಡುತ್ತಾ ಇದ್ದಾರೆ. ನನ್ನನ್ನು ಸೋಲಿಸಿದರೂ ಪರವಾಗಿಲ್ಲ, ಎಂ.ವೈ ಪಾಟೀಲರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಎಂದರು. ಒಂದು ವೇಳೆ ಅವರನ್ನು ಸೋಲಿಸಿದ್ದಲ್ಲಿ ನನಗೂ ಮತ್ತು ನನ್ನ ಪಕ್ಷಕ್ಕೂ ಅವಮಾನ. ಇದು ನನ್ನ ಪಕ್ಷದ ಪ್ರಶ್ನೆ. ನನ್ನ ಹೆಸರಿನ ಮೇಲೆ ರಾಜಕೀಯ ಮಾಡಕ್ಕೆ ಹೋಗಬೇಡಿ. ನೂರಕ್ಕೂ ನೂರು ಎಂ.ವೈ ಪಾಟೀಲರನ್ನು ಗೆಲ್ಲಸಿ ಎಂದರು.












Click it and Unblock the Notifications