Karnatak Election 2023: ಶಾಸಕರಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದವರ ಪಟ್ಟಿ
ಮೇ 13ರಂದು ಪ್ರಕಟವಾದ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. 223 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ.
ಇನ್ನು 2018ರ ಚುನಾವಣೆಯಲ್ಲಿ 104 ಸ್ಥಾನ ಗೆದ್ದಿದ್ದ ಬಿಜೆಪಿ ಪಕ್ಷವನ್ನು ರಾಜ್ಯದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಈ ಬಾರಿ ಬಿಜೆಪಿ 66 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಪ್ರಮುಖ 12 ಸಚಿವರು ಸೇರಿದಂತೆ 59 ಬಿಜೆಪಿ ಶಾಸಕರು ಸೋಲು ಕಂಡಿದ್ದಾರೆ.

ಈ ಬಾರಿಯೂ ಅತಂತ್ರ ವಿಧಾನಸಭೆಯ ಸೃಷ್ಟಿಯಾದರೆ ತಾನೇ ಮುಖ್ಯಮಂತ್ರಿ ಎಂಬ ಆಸೆಯಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಕೇವಲ 19 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಇದೇ ವೇಳೆ ಗಂಗಾವತಿ, ಮೇಲುಕೋಟೆ, ಗೌರಿಬಿದನೂರು ಮತ್ತು ಹರಪನಹಳ್ಳಿ ಕ್ಷೇತ್ರಗಳಲ್ಲಿ 4 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಗೆದ್ದು ವಿಧಾನಸೌಧ ಪ್ರವೇಶಿಸಿದವರ ಪಟ್ಟಿಯೂ ದೊಡ್ಡದಿದೆ. 58 ಜನ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನ 32 ಜನ, ಬಿಜೆಪಿಯ 22 ಜನ, ಜೆಡಿಎಸ್‌ನ 8 ಜನ ಮತ್ತು 4 ಪಕ್ಷೇತರರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಇದೇ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಆರ್. ಧ್ರುವನಾರಾಯಣ ಪುತ್ರ ದರ್ಶನ್ ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿದ್ದರೆ, ಮೋಟಮ್ಮ ಪುತ್ರಿ ನಯನಾ ಮೋಟಮ್ಮ ಮೂಡಿಗೆರೆ ಕ್ಷೇತ್ರದಿಂದ ಶಾಸಕಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸಚಿವರಾಗಿದ್ದ ಕೆ. ಸುಧಾಕರ್ ಸೋಲಿಸು ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ.
ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಶಾಸಕರು
| ಶಾಸಕರ ಹೆಸರು | ಕ್ಷೇತ್ರ |
| ಕೆಎಸ್ ಬಸವಂತಪ್ಪ | ಮಾಯಕೊಂಡ (ಎಸ್‌ಸಿ ಮೀಸಲು) |
| ಬಸವರಾಜು ಶಿವಗಂಗಾ | ಚನ್ನಗಿರಿ |
| ಬಿ. ದೇವೇಂದ್ರ | ಜಗಳೂರು (ಎಸ್‌ಟಿ ಮೀಸಲು) |
| ಕೆ.ಸಿ. ವೀರೇಂದ್ರ | ಚಿತ್ರದುರ್ಗ |
| ಅಲ್ಲಮಪ್ರಭು | ಕಲಬುರಗಿ ದಕ್ಷಿಣ |
| ಎಚ್.ವಿ. ವೆಂಕಟೇಶ್ | ಪಾವಗಡ (ಎಸ್‌ಸಿ ಮೀಸಲು) |
| ಎಚ್.ಎ. ಇಕ್ಬಾಲ್ ಹುಸೇನ್ | ರಾಮನಗರ |
| ಕೆ.ಎಚ್. ಮುನಿಯಪ್ಪ | ದೇವನಹಳ್ಳಿ |
| ಎನ್. ಶ್ರೀನಿವಾಸಯ್ಯ | ನೆಲಮಂಗಲ (ಎಸ್‌ಸಿ ಮೀಸಲು) |
| ಎ.ಸಿ. ಶ್ರೀನಿವಾಸ | ಪುಲಕೇಶಿನಗರ (ಎಸ್‌ಸಿ ಮೀಸಲು) |
| ದರ್ಶನ್ ಧ್ರುವನಾರಾಯಣ | ನಂಜನಗೂಡು |
| ಡಿ. ರವಿಶಂಕರ್ | ಕೆ.ಆರ್. ನಗರ |
| ಕೆ. ಹರೀಶ್ ಗೌಡ | ಚಾಮರಾಜ |
| ಎಚ್.ಎಂ. ಗಣೇಶ್ ಪ್ರಸಾದ್ | ಗುಂಡ್ಲುಪೇಟೆ |
| ಡಾ. ಮಂಥರ್ ಗೌಡ | ಮಡಿಕೇರಿ |
| ಎ.ಎಸ್. ಪೊನ್ನಣ್ಣ | ವಿರಾಜಪೇಟೆ |
| ಗಣಿಗ ರವಿಕುಮಾರ್ | ಮಂಡ್ಯ |
| ಕದಲೂರು ಉದಯ್ | ಮದ್ದೂರು |
| ಎನ್.ಟಿ. ಶ್ರೀನಿವಾಸ್ | ಕೂಡ್ಲಿಗಿ |
| ಭೀಮಸೇನ ಚಿಮ್ಮನಕಟ್ಟಿ | ಬಾದಾಮಿ |
| ಅಶೋಕ ಮನಗೂಳಿ | ಸಿಂದಗಿ |
| ಭೀಮಣ್ಣ ನಾಯ್ಕ | ಶಿರಸಿ |
| ಮಹೇಶ್ ತಮ್ಮಣ್ಣನವರ | ಕುಡಚಿ |
| ವಿಶ್ವಾಸ ವೈದ್ಯ | ಸವದತ್ತಿ-ಯಲ್ಲಮ್ಮ |
| ಬಾಬಾಸಾಹೇಬ್ ಪಾಟೀಲ್ | ಚೆನ್ನಮ್ಮನ ಕಿತ್ತೂರು |
| ಆಸೀಫ್ ಸೇಠ್ | ಬೆಳಗಾವಿ ಉತ್ತರ |
| ನಾ.ರಾ. ಭರತ್ ರೆಡ್ಡಿ | ಬಳ್ಳಾರಿ ನಗರ |
| ಅಶೋಕ್ ಕುಮಾರ್ ರೈ | ಪುತ್ತೂರು |
| ನಯನಾ ಮೋಟಮ್ಮ | ಮೂಡಿಗೆರೆ |
| ಎಚ್. ಡಿ. ತಮ್ಮಯ್ಯ | ಚಿಕ್ಕಮಗಳೂರು |
| ಕೆ.ಎಸ್. ಆನಂದ್ | ಕಡೂರು |
| ಪ್ರದೀಪ್ ಈಶ್ವರ್ | ಚಿಕ್ಕಬಳ್ಳಾಪುರ |
| ಪ್ರಕಾಶ್ ಕೋಳಿವಾಡ | ರಾಣೇಬೆನ್ನೂರ |
ಮೊದಲ ಬಾರಿಗೆ ಆಯ್ಕೆಯಾದ ಬಿಜೆಪಿ ಶಾಸಕರು
| ಶಾಸಕರ ಹೆಸರು | ಕ್ಷೇತ್ರ |
| ಎಸ್.ಎನ್. ಚನ್ನಬಸಪ್ಪ | ಶಿವಮೊಗ್ಗ ನಗರ |
| ಬಿ.ವೈ. ವಿಜಯೇಂದ್ರ | ಶಿಕಾರಿಪುರ |
| ಶೈಲೇಂದ್ರ ಬೆಲ್ದಾಳೆ | ಬೀದರ್ ದಕ್ಷಿಣ |
| ಸಿದ್ದು ಪಾಟೀಲ್ | ಹುಮನಾಬಾದ್ |
| ಧೀರಜ್ ಮುನಿರಾಜು | ದೊಡ್ಡಬಳ್ಳಾಪುರ |
| ಸಿ.ಕೆ. ರಾಮಮೂರ್ತಿ | ಜಯನಗರ |
| ಮಂಜುಳಾ ಲಿಂಬಾವಳಿ | ಮಹಾದೇವಪುರ |
| ಟಿ.ಎಸ್. ಶ್ರೀವತ್ಸ | ಕೃಷ್ಣರಾಜ |
| ಎಚ್.ಕೆ. ಸುರೇಶ್ | ಬೇಲೂರು |
| ಸಿಮೆಂಟ್ ಮಂಜುನಾಥ್ | ಸಕಲೇಶಪುರ |
| ಕೃಷ್ಣ ನಾಯಕ | ಹೂವಿನಹಡಗಲಿ |
| ಜಗದೀಶ್ ಗುಡಗುಂಟಿ | ಜಮಖಂಡಿ |
| ಮಹೇಶ್ ಟೆಂಗಿನಕಾಯಿ | ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ |
| ವಿಠಲ ಹಲಗೇಕರ್ | ಖಾನಾಪುರ |
| ನಿಖಿಲ್ ಕತ್ತಿ | ಹುಕ್ಕೇರಿ |
| ಎಂ.ಆರ್. ಪಾಟೀಲ್ | ಕುಂದಗೋಳ |
| ಡಾ. ಚಂದ್ರು ಲಮಾಣಿ | ಶಿರಹಟ್ಟಿ |
| ಯಶ್‌ಪಾಲ್ ಸುವರ್ಣ | ಉಡುಪಿ |
| ಕಿರಣ್ ಕುಮಾರ್ ಕೊಡ್ಗಿ | ಕುಂದಾಪುರ |
| ಗುರುರಾಜ ಗಂಟಿಹೊಳೆ | ಬೈಂದೂರು |
| ಭಾಗೀರಥಿ ಮುರುಳ್ಯ | ಸುಳ್ಯ (ಎಸ್‌ಸಿ ಮೀಸಲು) |
| ಗುರ್ಮೆ ಶುರೇಶ್ ಶೆಟ್ಟಿ | ಕಾಪು |
ಮೊದಲ ಬಾರಿಗೆ ಆಯ್ಕೆಯಾದ ಜೆಡಿಎಸ್ ಶಾಸಕರು
| ಶಾಸಕರ ಹೆಸರು | ಕ್ಷೇತ್ರ |
| ಜಿ. ಕರಿಯಮ್ಮ | ದೇವದುರ್ಗ |
| ಶರಣಗೌಡ ಕುಂದಕೂರು | ಗುರುಮಿಠಕಲ್ |
| ಸಮೃದ್ಧಿ ಮಂಜುನಾಥ್ | ಮುಳುಬಾಗಿಲು |
| ಬಿ.ಎನ್. ರವಿಕುಮಾರ್ | ಶಿಡ್ಲಘಟ್ಟ |
| ಜಿ.ಡಿ. ಹರೀಶ್ ಗೌಡ | ಹುಣಸೂರು |
| ಎಂ.ಆರ್. ಮಂಜುನಾಥ್ | ಹನೂರು |
| ಸ್ವರೂಪ್ ಪ್ರಕಾಶ್ | ಹಾಸನ |
| ಎಚ್.ಟಿ. ಮಂಜು | ಕೆ.ಆರ್. ಪೇಟೆ |
ಮೊದಲ ಬಾರಿಗೆ ಆಯ್ಕೆಯಾದ ಪಕ್ಷೇತರ ಶಾಸಕರು
| ಶಾಸಕರ ಹೆಸರು | ಕ್ಷೇತ್ರ |
| ಗಾಲಿ ಜನಾರ್ದನ ರೆಡ್ಡಿ | ಗಂಗಾವತಿ |
| ಕೆ.ಎಚ್. ಪುಟ್ಟಸ್ವಾಮಿಗೌಡ | ಗೌರಿಬಿದನೂರು |
| ಎಂ.ಪಿ. ಲತಾ ಮಲ್ಲಿಕಾರ್ಜುನ | ಹರಪನಹಳ್ಳಿ |
| ದರ್ಶನ್ ಪುಟ್ಟಣ್ಣಯ್ಯ | ಮೇಲುಕೋಟೆ |












Click it and Unblock the Notifications