ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 31: ಕರ್ನಾಟಕದ ಜಿಲ್ಲಾ ಸುದ್ದಿಗಳ ಮೇಲೆ ಒಂದು ನೋಟ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ರಾಮನಗರ ಸುದ್ದಿ
ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ- ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಮಂಗಳವಾರದಂದು ಮಾಗಡಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರಲ್ಲದೆ, ಈಗಾಗಲೇ ಆಗಿರುವ ಕೆಲಸಗಳನ್ನೂ ವೀಕ್ಷಣೆ ಮಾಡಿದರು.

ರಾಮನಗರ ಜಿಲ್ಲೆ ಮಾಗಡಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿರುವ ನೂತನ ಆಮ್ಲಜನಕ ಉತ್ಪಾದನಾ ಘಟಕವನ್ನು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಲೋಕಾರ್ಪಣೆ ಮಾಡಿದರು. ಆಸ್ಪತ್ರೆಯಲ್ಲಿ ಹೊಸದಾಗಿ ಅಳವಡಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, "ರಾಜ್ಯದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ನೆರವಿನೊಂದಿಗೆ ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಅಳವಡಿಸಲಾಗಿದ್ದು, ಇಲ್ಲಿ ಪ್ರತಿ ನಿಮಿಷಕ್ಕೆ 580 ಲೀಟರ್ ಆಮ್ಲಜನಕ ಉತ್ಪಾದನೆಯಾಗುತ್ತದೆ. ಇನ್ನು ಮುಂದೆ ಈ ಆಸ್ಪತ್ರೆಗೆ ಆಮ್ಲಜನಕದ ಕೊರತೆ ಆಗುವುದಿಲ್ಲ.'' ಎಂದು ಸಚಿವರು ಹೇಳಿದರು.

Karnataka District News Roundup (31st August 2021): Todays District News on politics, climate, infrastructure

ಜಾಲತಾಣಗಳ ಬಿಟ್ಟು ಪುಸ್ತಕ ಓದೋಣ
ರಾಮಾಯಣವನ್ನು ಪ್ರೀತಿಯಿಂದ ಓದಬೇಕು ಎಂಬ ನಿಟ್ಟಿನಲ್ಲಿ ರಚನೆಯಾದ ಲೇಖಕ ಡಾ.ಡಿ.ಸಿ. ರಾಮಚಂದ್ರರವರ ಲೇಖನಿಯಲ್ಲಿ ಮೂಡಿಬಂದ ಮೂರನೇ ಕೃತಿಯಾದ "ಸಂಪ್ರೀತಿ ರಾಮಾಯಣ' ಪುಸ್ತಕವನ್ನು ಉನ್ನತ ಶಿಕ್ಷಣ, ಐಟಿ- ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಇಂದು ಲೋಕಾರ್ಪಣೆಗೊಳಿಸಿದರು.

ಮಾಗಡಿಯ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಕಚೇರಿಯ ಸಂಪ್ರೀತಿ ಪ್ರಕಾಶನದ ವತಿಯಿಂದ ನಡೆದ ಸರಳ ಕಾಯಕ್ರಮದಲ್ಲಿ ಪುಸ್ತಕವನ್ನು ಅನಾವರಣಗೊಳಿಸಿ ಆಶಯ ವ್ಯಕ್ತಪಡಿಸಿದ ಸಚಿವರು, ""ಜಾಲತಾಣಗಳು ಅಬ್ಬರ ಮಾಡುತ್ತಿರುವ ಯುಗದಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಿ ಮತ್ತು ನಮ್ಮ ಸಂಸ್ಕೃತಿ ಸಾರುವ ಪುಸ್ತಕಗಳನ್ನು ಬರೆಯಲು ಪ್ರೋತ್ಸಾಹ ನೀಡುವ ಕೆಲಸ ಮಾಡೋಣ, ಜತೆಗೆ ಓದುಗ ವಲಯವನ್ನು ಸೃಷ್ಟಿಸೋಣ,'' ಎಂದರು.

Karnataka District News Roundup (31st August 2021): Todays District News on politics, climate, infrastructure

ವಿಜಯನಗರ ಸುದ್ದಿ
ವಿಜಯನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರ ಶಿವಪುರ ಗ್ರಾಮದ ಬಳಿ ಕುರಿ ಹಿಂಡಿನ ಮೇಲೆ ಲಾರಿ ಹರಿದ ಪರಿಣಾಮ 35ಕ್ಕೂ ಹೆಚ್ಚು ಕರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಬಳಿ ಮಂಗಳವಾರ ಕುರಿಗಳ ಹಿಂಡು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವೇಗವಾಗಿ ಬಂದು, ದಿಢೀರನೆ ಕುರಿ ಹಿಂಡುಗಳ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಈ ಕುರಿತು ಕೂಡ್ಲಿಗಿಯ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೋವುಗಳಿಗೆ ಮೇವು ತಿನ್ನಿಸಿದ ಸಚಿವ ಪ್ರಭು ಚವ್ಹಾಣ್
ವಿಜಯನಗರ ತಾಲೂಕಿನ ಮಲಪನಗುಡಿ ಗ್ರಾಮದ ಬಳಿಯ ಮಹಾವೀರ ಜೈನ್ ಗೋ ಶಾಲೆಗೆ ಸಚಿವ ಪ್ರಭು ಚವ್ಹಾಣ್ ಮಂಗಳವಾರ ಬೆಳಗ್ಗೆ ತೆರಳಿ ಗೋವುಗಳಿಗೆ ಮೇವು ತಿನ್ನಿಸಿದರು.

ಗೋ ಶಾಲೆಗೆ ತೆರಳಿ ಮಹಾವೀರ ಜೈನ ಟ್ರಸ್ಟ್ ಸದಸ್ಯರಿಂದ ಮಾಹಿತಿ ಪಡೆದ ಅವರು, ಗೋವುಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಸರಕಾರ ಕೂಡ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಕ್ರಮ ಸಾಗಾಣೆ ಮಾಡುವ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಬಕ್ರೀದ್ ಸಂಬಂಧ ಹೊಸಪೇಟೆಯಲ್ಲಿ ಅಕ್ರಮ ಒಂಟೆ ಸಾಗಾಟ ಮಾಡಲಾಗುತ್ತಿತ್ತು. ಅವುಗಳನ್ನು ಸಹ ಸಂರಕ್ಷಣೆ ಮಾಡಲಾಗಿದೆ. ಅಕ್ರಮ ಗೋ ಸಾಗಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಕುರಿತು ನಾನು ಎಲ್ಲಾ ಡಿಸಿ, ಎಸ್ಪಿಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.

ಚಿಕ್ಕಮಗಳೂರು ಸುದ್ದಿ
ಕ್ಷುಲಕ ಕಾರಣಕ್ಕೆ ಯುವಕರ ಗುಂಪೊಂದು ಪರಿಸರವಾದಿ ಡಿ.ವಿ. ಗಿರೀಶ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಜೀಪನ್ನು ಅಡ್ಡಗಟ್ಟಿ ಥಳಿಸಿರುವ ಘಟನೆ ಸೋಮವಾರ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.ವಿ. ಗಿರೀಶ್ ಮತ್ತು ಸ್ನೇಹಿತರು ಜೀಪ್‍ನಲ್ಲಿ ಆಗಸ್ಟ್ 30 ರಂದು ಕೆಮ್ಮಣ್ಣಗುಂಡಿ ಸಮೀಪದ ಕ್ರಿಸ್ಟೋಫರ್ ಕಟ್ಟೆಹೊಳೆ ಎಸ್ಟೇಟ್‌ಗೆ ಹೋಗಿ ಸಂಜೆ 5 ಗಂಟೆ ಸಮಯದಲ್ಲಿ ವಾಪಸ್ ಬರುವಾಗ ಸಂತವೇರಿ 2ನೇ ತಿರುವಿನ ರಸ್ತೆ ಬದಿಯಲ್ಲಿ 8 ಜನ ಯುವಕರ ಗುಂಪು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು.

ಜೀಪ್ ಯುವಕರ ಗುಂಪಿನ ಸಮೀಪಕ್ಕೆ ಬರುತ್ತಿದ್ದಂತೆ ಜೀಪ್‍ನಲ್ಲಿದ್ದ ಸ್ನೇಹಿತನ ಮಗಳಿಗೆ ಚುಡಾಯಿಸಿದ್ದು, ಇದರಿಂದ ಕುಪಿತರಾದ ಡಿ.ವಿ. ಗಿರೀಶ್ ಮತ್ತು ಅವರ ಸ್ನೇಹಿತರು ಯುವಕರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಮಾತನಾಡಿದ್ದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ. ಯುವಕರ ತಂಡ ಪಾನಮತ್ತರಾಗಿದ್ದ ಕಾರಣ ವಿಚಾರವನ್ನು ಅಲ್ಲಿಗೆ ಕೊನೆಗೊಳಿಸಿ ಜೀಪ್‍ನಲ್ಲಿ ಪ್ರಯಾಣವನ್ನು ಮುಂದುವರೆಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಯುವಕರ ಗುಂಪು ಜೀಪನ್ನು ಹಿಂಬಾಲಿಸಿಕೊಂಡು ಬಂದು ಕಂಬಿಹಳ್ಳಿ ಬಳಿ ಜೀಪ್ ಅಡ್ಡಗಟ್ಟಿ ಡಿ.ವಿ. ಗಿರೀಶ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಜೀಪ್‍ನಲ್ಲಿದ್ದ ಸ್ನೇಹಿತನ ಮಗಳ ಕೈಹಿಡಿದು ಎಳೆದಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಚಿತ್ರದುರ್ಗ ಸುದ್ದಿ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಆಗಸ್ಟ್ 17 ರಂದು ರಾತ್ರಿ ನಡೆದ ಬಟ್ಟೆ ಅಂಗಡಿ ಮಾಲೀಕನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಮೂಲ್ ಸಿಂಗ್ (34) ಹತ್ಯೆ ಮಾಡಲಾಗಿತ್ತು. ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಹತ್ಯೆಯ ಆರೋಪಿಗಳನ್ನು ಬಂಧಿಸಿದ್ದಾರೆ.

ಹಿರಿಯೂರು ನಗರದಲ್ಲಿ ಹಂದಿಗಳ ಕಾರ್ಯಾಚರಣೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಹಂದಿ ಮತ್ತು ನಾಯಿಗಳ ಹಾವಳಿ ಎಂಬ ಶಿರ್ಷಿಕೆ ಅಡಿಯಲ್ಲಿ ಒನ್ಇಂಡಿಯಾ ನ್ಯೂಸ್ ವರದಿ ಭಿತ್ತರಿಸಿತ್ತು.

Recommended Video

ಅಫ್ಘಾನ್ ಬಿಕ್ಕಟ್ಟು ಭಾರತಕ್ಕೆ ಭದ್ರತೆಯ ಪ್ರಶ್ನೆ ಎದುರಾಗಿದೆ! | Oneindia Kannada

ಹಿರಿಯೂರು ನಗರದ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ವಾಹನ ಸವಾರರಿಗೆ ಹಂದಿಗಳ ಓಡಾಟದಿಂದ ತುಂಬಾ ತೊಂದರೆಯಾಗುತ್ತಿತ್ತು, ಜೊತೆಗೆ ಹಂದಿಗಳಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಹಂದಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಮಾಜಿ ನಗರಸಭೆ ಸದಸ್ಯ ಜಿ. ಪ್ರೇಮ್ ಕುಮಾರ್ ಕೂಡ ಒತ್ತಾಯಿಸಿದ್ದರು.

English summary
Karnataka district news Roundup (31st August 2021) - Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X