• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ: ಐತಿಹಾಸಿಕ ಪ್ರತಿಭಟನೆಗೆ ಕರವೇ ಸನ್ನದ್ಧ

|
Google Oneindia Kannada News

ಬೆಂಗಳೂರು, ಜೂನ್ 02: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂಕಷ್ಟದ ಸಮಯದಲ್ಲಿ "ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ" ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಜ್ಜುಗೊಂಡಿದೆ.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ 10ರ ಗುರುವಾರ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಸರಿಯಾಗಿ ಒಂದೇ ದಿನ, ಒಂದೇ ಸಮಯಕ್ಕೆ ಒಂದು ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಉಚಿತವಾಗಿ ಕೊರೊನಾವೈರಸ್ ಲಸಿಕೆ ವಿತರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕರವೇ ಪ್ರಕಟಣೆ ಹೊರಡಿಸಿದೆ.

ಆಕ್ಸಿಜನ್, ಲಸಿಕೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ: ಕರವೇ ಟೀಕೆಆಕ್ಸಿಜನ್, ಲಸಿಕೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ: ಕರವೇ ಟೀಕೆ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಜೂಮ್ ಸಭೆಯಲ್ಲಿ ಲಸಿಕೆ ವಿತರಣೆ ಕುರಿತು ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಲಾಯಿತು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಜನ್ಮದಿನವೂ ಆಗಿರುವ ಜೂ.10ರಂದು ಲಕ್ಷಾಂತರ ಕರವೇ ಕಾರ್ಯಕರ್ತರು 'ಪ್ರತಿಭಟನಾ ದಿನ'ವನ್ನಾಗಿ ಆಚರಿಸಿ, ರಾಜ್ಯದ ಸಮಸ್ತ ಜನತೆಯ ಹಕ್ಕೊತ್ತಾಯವನ್ನು ಮಂಡಿಸಲಿದ್ದಾರೆ.

ಸಪ್ಟೆಂಬರ್ ತಿಂಗಳಾಂತ್ಯದ ವೇಳೆಗೆ ರಾಜ್ಯದ ಎಲ್ಲರಿಗೂ ಲಸಿಕೆ

ಸಪ್ಟೆಂಬರ್ ತಿಂಗಳಾಂತ್ಯದ ವೇಳೆಗೆ ರಾಜ್ಯದ ಎಲ್ಲರಿಗೂ ಲಸಿಕೆ

ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆಯನ್ನು ಉಚಿತವಾಗಿ ವಿತರಿಸಬೇಕು. ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಲಸಿಕೆ ನೀಡಬೇಕು. ಚುನಾವಣಾ ಬೂತ್, ಪೊಲಿಯೋ ವ್ಯಾಕ್ಸಿನ್ ಬೂತ್ ರೀತಿಯಲ್ಲೇ ನಾಗರಿಕರಿಗೆ ಹತ್ತಿರವಾಗುವಷ್ಟು ವ್ಯಾಪ್ತಿಯಲ್ಲಿ ಲಸಿಕೆ ಬೂತ್ ತೆರೆಯಬೇಕು. ಜನರನ್ನು ಕಾಯಿಸದೆ, ಸತಾಯಿಸದೆ ಲಸಿಕೆಗಳನ್ನು ನೀಡಬೇಕು. 2020ರ ಮಾರ್ಚ್‌ ತಿಂಗಳಲ್ಲಿ ಕೊವಿಡ್-19 ಭಾರತಕ್ಕೆ ಕಾಲಿಟ್ಟ‌ ನಂತರ‌ ಸಾಮಾನ್ಯ ಜನರ ಬದುಕು ನರಕವಾಗಿದೆ. ಕೊವಿಡ್ ನಿಂದಾಗಿ ಅಪಾರ ಪ್ರಮಾಣದ ಸಾವು‌ ನೋವಾಗಿದೆ. ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರ ಜೊತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೇರುತ್ತಿರುವ ಲಾಕ್ ಡೌನ್ ಸೇರಿದಂತೆ ಇತ್ಯಾದಿ ಕ್ರಮಗಳಿಂದಾಗಿ ಬಡತನ, ನಿರುದ್ಯೋಗ ಹೆಚ್ಚುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಹೇಳಿದೆ.

ಭಾರತದಲ್ಲಿ ತಮ್ಮ ಜವಾಬ್ದಾರಿ ಮರೆತ ಸರ್ಕಾರ

ಭಾರತದಲ್ಲಿ ತಮ್ಮ ಜವಾಬ್ದಾರಿ ಮರೆತ ಸರ್ಕಾರ

ಕಳೆದ ವರ್ಷದಿಂದಲೂ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆ ಜವಾಬ್ದಾರಿಗಳನ್ನು ಹೊರಿಸುತ್ತಿವೆ. ಜನರ ಜೀವ ರಕ್ಷಣೆಗೆ ಯಾವುದೇ ರೀತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪಶ್ಚಿಮದ ದೇಶಗಳು ಕಳೆದ ವರ್ಷ ಜೂನ್ ತಿಂಗಳಿನಿಂದಲೇ ಕೊವಿಡ್ ಲಸಿಕೆಗಾಗಿ ಸಕಲ ಪ್ರಯತ್ನಗಳನ್ನು ನಡೆಸಿ,‌ ಶೇ.50-60ರಷ್ಟು ಮಂದಿಗೆ ಲಸಿಕೆ ನೀಡಿದ್ದಕ್ಕಾಗಿ ಎರಡನೇ ಅಲೆ ಹೊಡೆತದಿಂದ ಬಚಾವ್ ಆಗಿವೆ. ಆದರೆ ನಮ್ಮಲ್ಲಿ ಒಕ್ಕೂಟ ಸರ್ಕಾರದ ಬೇಜವಾಬ್ದಾರಿ ನೀತಿಗಳಿಂದಾಗಿ ದೇಶದ ಶೇ.5ರಷ್ಟು ನಾಗರಿಕರಿಗೂ ಎರಡು ಡೋಸ್ ಲಸಿಕೆ ನೀಡಲಾಗಿಲ್ಲ. ಬದಲಿಗೆ ಭಾರತೀಯರ ಜೀವ ಕಾಪಾಡಬೇಕಿದ್ದ ಆರೂವರೆ ಕೋಟಿ‌ ಡೋಸ್ ಲಸಿಕೆಯನ್ನು‌ ವಿದೇಶಗಳಿಗೆ‌ ಕಳುಹಿಸಲಾಯಿತು ಎಂದು ಕರವೇ ಆಪಾದಿಸಿದೆ.

ಹೋರಾಟದ ಹೊರತು ಬೇರೆ ದಾರಿ ಉಳಿದಿಲ್ಲ

ಹೋರಾಟದ ಹೊರತು ಬೇರೆ ದಾರಿ ಉಳಿದಿಲ್ಲ

ಕೇಂದ್ರ ಸರ್ಕಾರವು 2021ರ ಡಿಸೆಂಬರ್ ವೇಳೆಗೆ 200 ಕೋಟಿ ಡೋಸ್ ಕೊರೊರೊನಾವೈರಸ್ ಲಸಿಕೆ ವಿತರಿಸುವುದಾಗಿ ಹೇಳಿಕೊಂಡಿದೆ. ಪ್ರಸ್ತುತ ವ್ಯವಸ್ಥೆಯನ್ನು ಗಮನಿಸುತ್ತಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಕೊವಿಡ್-19 ಲಸಿಕೆ ಹಂಚಿಕೆ ಮತ್ತು ತಾರತಮ್ಯ ನೀತಿ ಬಗ್ಗೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯವೇ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇಂಥ ಸಂದರ್ಭದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುವುದರ ಹೊರತಾಗಿ ಬೇರೆ ದಾರಿ ಕಾಣುತ್ತಿಲ್ಲ. ಏಕೆಂದರೆ ಸಪ್ಟೆಂಬರ್, ಅಕ್ಟೋಬರ್ ವೇಳೆಗೆ ಕೊರೊನಾವೈರಸ್ ಮೂರನೇ ಅಲೆಯು ಅಪ್ಪಳಿಸಿದೆ ಎಂದು ತಜ್ಞರು, ವಿಜ್ಞಾನಿಗಳು ಈಗಾಗಲೇ ಅಂದಾಜು ಮಾಡಿದ್ದಾರೆ. ಅಷ್ಟರೊಳಗೆ ಲಸಿಕೆ ಪಡೆಯದವರ ಜೀವಗಳು ಅಪಾಯಕ್ಕೆ ಸಿಲುಕಲಿದ್ದು, ನಾವು ಅದಕ್ಕೆ ಅವಕಾಶ ನೀಡಬಾರದು ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ಪ್ರತಿಯೊಂದು ಡೋಸ್ ಲಸಿಕೆಯನ್ನು ಸರ್ಕಾರವೇ ನೀಡಲಿ

ಪ್ರತಿಯೊಂದು ಡೋಸ್ ಲಸಿಕೆಯನ್ನು ಸರ್ಕಾರವೇ ನೀಡಲಿ

ಕೊರೊನಾವೈರಸ್ ಲಸಿಕೆಯನ್ನು ಎಲ್ಲಿಂದ ತರುತ್ತಾರೋ ತರಲಿ, ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಸೆಪ್ಟೆಂಬರ್ ತಿಂಗಳೊಳಗೆ ಉಚಿತವಾಗಿ ಎರಡೂ ಡೋಸ್ ಲಸಿಕೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆಯ ಲಸಿಕೆ ದಂಧೆಯನ್ನು ನಿಲ್ಲಿಸಬೇಕು. ಪ್ರತಿಯೊಂದು ಡೋಸ್ ಲಸಿಕೆಯನ್ನು ಸರ್ಕಾರವೇ ನೀಡಬೇಕು. ಇದು ಸಾಧ್ಯವಿಲ್ಲ ಎನ್ನುವುದಾದರೆ, ಈ ಸರ್ಕಾರಗಳು ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

Recommended Video

  Cyber Crime ಮುಖಾಂತರ ಕಳೆದು ಹೋಗಿರೊ ಹಣ ವಾಪುಸ್ ಪಡೆಯಿರಿ | Oneindia Kannada
  ಐತಿಹಾಸಿಕ ಹೋರಾಟಕ್ಕೆ ಕರವೇ ಸಿದ್ಧಪಡಿಸಿರುವ ಸ್ವರೂಪ

  ಐತಿಹಾಸಿಕ ಹೋರಾಟಕ್ಕೆ ಕರವೇ ಸಿದ್ಧಪಡಿಸಿರುವ ಸ್ವರೂಪ

  ಕರ್ನಾಟಕದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಈ ಪ್ರತಿಭಟನೆಯನ್ನು ಬೆಂಬಲಿಸುವ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾನ್ಯ ಜನರು ತಾವು ಇರುವ ಸ್ಥಳಗಳಲ್ಲೇ ತಮ್ಮ ತಮ್ಮ ಮನೆಗಳಿಂದ ಹೊರಬಂದು, ಪ್ರಚಾರ ಫಲಕಗಳನ್ನು (ಪ್ಲಕಾರ್ಡ್) ಹಿಡಿದು ಪ್ರತಿಭಟಿಸುತ್ತಾರೆ. ಈ ವೇಳೆ ಮಾಸ್ಕ್ ಧರಿಸಲಾಗುವುದು, ದೈಹಿಕ ಅಂತರ ಕಾಪಾಡಲಾಗುವುದು ಸೇರಿದಂತೆ ಕೊವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಒಂದು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳ ಫೊಟೋ, ವಿಡಿಯೋಗಳನ್ನು ಗೂಗಲ್ ಡ್ರೈವ್ ಲಿಂಕ್ ಮೂಲಕ ಸರ್ಕಾರಕ್ಕೆ, ಮಾಧ್ಯಮಗಳಿಗೆ ತಲುಪಿಸಲಾಗುವುದು.

  English summary
  Karnataka Defense Forum to stage statewide 1000 protest against Govt on June 10 to demand give free covid-19 vaccine or leave power. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X