Karnataka Dam Water Level: ರಾಜ್ಯದಲ್ಲಿ ಭರ್ಜರಿ ಮಳೆ; ತುಂಗಭದ್ರಾ ಸೇರಿದಂತೆ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು, ಜುಲೈ 17: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಕರ್ನಾಟಕದಲ್ಲಿ ಮುಂಗಾರು ಮಾರುತಗಳನ್ನು ತಮ್ಮ ಆರ್ಭಟವನ್ನು ತೋರಿಸುತ್ತಿದ್ದು ಹಲವಾರು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜು. 16ರಿಂದ ಆಗಸ್ಟ್ 1ರವರೆಗೆ ರಾಜ್ಯದಲ್ಲಿ ಮತ್ತಷ್ಟು ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್ ಎನ್ ಡಿಎಂಸಿ) ಹೇಳಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ ಕಟ್ಟೆಗಳಿಗೂ ತುಂಬಿ ಹರಿಯುತ್ತಿವೆ. ಕರ್ನಾಟಕದ ಅತಿದೊಡ್ಡ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾದರೆ ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಹಸನಾಗುತ್ತದೆ. ತುಂಗಭದ್ರಾ ಜಲಾಶಯ ಕಾಲು ಭಾಗ ತುಂಬಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 17 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on July 17th
ಕರ್ನಾಟಕದ ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ( ಮೀ) ಇಂದಿನ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ 519.60 95.47 61683 17221
ತುಂಗಭದ್ರಾ ಜಲಾಶಯ 497.71 35.47 28153 377
ಮಲಪ್ರಭಾ ಜಲಾಶಯ 633.80 13.46 5865 194
ಕೆ ಆರ್‌ ಎಸ್‌ 38.04 29.38 25933 2289
ಲಿಂಗನಮಕ್ಕಿ ಜಲಾಶಯ 554.44 58.37 77911 50.55
ಕಬಿನಿ ಜಲಾಶಯ 696.13 18.47 22840 23333
ಭದ್ರಾ ಜಲಾಶಯ 657.73 30.14 27839 166
ಘಟಪ್ರಭಾ ಜಲಾಶಯ 662.91 27.85 15601 567
ಹೇಮಾವತಿ ಜಲಾಶಯ 890.58 23.84 14027 250
ವರಾಹಿ ಜಲಾಶಯ 594.36 8.70 10581 0
ಹಾರಂಗಿ ಜಲಾಶಯ 871.38 6.55 12827 18750
ಸೂಫಾ ಜಲಾಶಯ 564.00 8.70 10581 0
ನಾರಾಯಣಪುರ 492.25 24.68 22621 205
ವಾಣಿವಿಲಾಸ ಸಾಗರ 652.24 17.99 0 147

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+