Karnataka Dam Water Level: ರಾಜ್ಯದಲ್ಲಿ ಅಬ್ಬರದ ಮಳೆ; ಆಲಮಟ್ಟಿ ಸೇರಿದಂತೆ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು, ಜುಲೈ 16: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಕಳೆದ ಒಂದು ವಾರ ಸುರಿಯಲಿದೆ ಧಾರಾಕಾರ ಮಳೆಯಿಂದಾಗಿ ಕೆಲ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತೀವ್ರ ಮಳೆಯಾಗುತ್ತಿರುವ ಹಿನ್ನಲೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇನ್ನೂ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ವಿಶೇಷವಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲು ಹೆಚ್ಚಳವಾಗಿದೆ. ಕೃಷ್ಣಾ ನದಿ ಉಕ್ಕಿ ಹರಿಯಲು ಆರಂಭಿಸಿದೆ. ಇನ್ನೂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಒಳಹರಿವು, ಹೊರಹರಿವಿನಲ್ಲೂ ಹೆಚ್ಚಳವಾಗಿದೆ.

Karnataka Dams Water level Today KRS Kabini Bhadra dam water level as on July 16th

ಕೃಷ್ಣಾ ನದಿ ನೀರು ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಆಲಮಟ್ಟಿ ಜಲಾಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 16 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ( ಮೀ) ಇಂದಿನ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ 519.60 91.66 25123 9730
ತುಂಗಭದ್ರಾ ಜಲಾಶಯ 497.71 33.07 16041 162
ಮಲಪ್ರಭಾ ಜಲಾಶಯ 633.80 12.97 194 0
ಕೆ ಆರ್‌ ಎಸ್‌ 38.04 27.35 10121 2260
ಲಿಂಗನಮಕ್ಕಿ ಜಲಾಶಯ 554.44 51.64 45115 0
ಕಬಿನಿ ಜಲಾಶಯ 696.13 18.53 14697 20000
ಭದ್ರಾ ಜಲಾಶಯ 657.73 27.75 162 1463
ಘಟಪ್ರಭಾ ಜಲಾಶಯ 662.91 26.53 13142 344
ಹೇಮಾವತಿ ಜಲಾಶಯ 890.58 22.65 13338 250
ವರಾಹಿ ಜಲಾಶಯ 594.36 7.09 3279 0
ಹಾರಂಗಿ ಜಲಾಶಯ 871.38 7.07 3279 0
ಸೂಫಾ ಜಲಾಶಯ 564.00 52.84 40613 73
ನಾರಾಯಣಪುರ ಜಲಾಶಯ 492.23 22.73 10404 201
ವಾಣಿವಿಲಾಸ ಸಾಗರ 652.24 18.00 0 147

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+