Karnataka Dam Water Level: ಭರ್ಜರಿ ಮಳೆ; ಆಗಸ್ಟ್ 30ರ ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು?
ಬೆಂಗಳೂರು, ಆಗಸ್ಟ್ 30: ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಜ್ಯದ ಹಲವೆಡೆ ಎರಡು ಹಂತದ ಮುಂಗಾರು ಉತ್ತಮವಾಗಿ ಆಗುತ್ತಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು,ಮತ್ತೆ ಮಳೆ ಅಲರ್ಟ್ ನೀಡಿದ್ದಾರೆ. ಇತ್ತ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ.

ಭರ್ಜರಿ ಮಳೆಯಿಂದ ಭದ್ರಾ, ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್ 30) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ಪ್ರಮುಖ ಜಲಾಶಯಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 118.05 | 1,53,383 |
| ತುಂಗಭದ್ರಾ ಜಲಾಶಯ | 105.79 | 90.38 | 29,014 |
| ಮಲಪ್ರಭಾ ಜಲಾಶಯ | 37.73 | 36.06 | 18,029 |
| ಕೆ ಆರ್ ಎಸ್ | 49.45 | 48.34 | 7,250 |
| ಲಿಂಗನಮಕ್ಕಿ ಜಲಾಶಯ | 151.75 | 146.25 | 33,286 |
| ಕಬಿನಿ ಜಲಾಶಯ | 19.52 | 18.85 | 4,919 |
| ಭದ್ರಾ ಜಲಾಶಯ | 71.54 | 66.18 | 10,933 |
| ಘಟಪ್ರಭಾ ಜಲಾಶಯ | 51.00 | 50.34 | 24,181 |
| ಹೇಮಾವತಿ ಜಲಾಶಯ | 37.10 | 37.06 | 13,771 |
| ವರಾಹಿ ಜಲಾಶಯ | 31.10 | 23.07 | 2,692 |
| ಹಾರಂಗಿ ಜಲಾಶಯ | 8.50 | 8.30 | 1293 |
| ಸೂಫಾ | 145.33 | 129.41 | 17,740 |
| ನಾರಾಯಣಪುರ ಜಲಾಶಯ | 33.31 | 28.24 | 1,77,407 |
| ವಾಣಿವಿಲಾಸ ಸಾಗರ | 30.42 | 21.03 | 693 |












Click it and Unblock the Notifications