Karnataka Dam Water Level: ಭರ್ಜರಿ ಮಳೆಗೆ ಮಲಪ್ರಭಾ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ, 14 ಜಲಾಶಯಗಳ ನೀರಿನ ಮಟ್ಟ ಎಷ್ಟು?

ಬೆಂಗಳೂರು, ಆಗಸ್ಟ್‌ 02: ರಾಜ್ಯದಲ್ಲಿ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಾಕ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿ ಮಲಪ್ರಭಾ ಮೈದುಂಬಿ ಹರಿಯುತ್ತಿದೆ. ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಬಾಗಲಕೊಟೆ ಮತ್ತು ಬೆಳಗಾವಿ ಜಿಲ್ಲೆಯ ಕೆಲ ಗ್ರಾಮಗಳು ಮುಳುಗಡೆಯಾಗಿವೆ.

ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಇನ್ನೆರಡು ತಿಂಗಳು ಕೂಡ ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು ಕರ್ನಾಟಕದ ಹವಾಮಾನ ವರದಿ ತಿಳಿಸಿದೆ. ಮಲಪ್ರಭಾ ಜಲಾಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ.

Karnataka Dams Water level Today KRS Kabini Bhadra dam water level as on August 2nd

ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಪ್ರಮುಖ ಜಲಾಶಯಗಳ ಫೈಕಿ ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್‌ 02) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ಜಲಾಶಯಗಳು

ಒಟ್ಟು ಸಾಮರ್ಥ್ಯ

(ಟಿಎಂಸಿ)

ಇಂದಿನ ಮಟ್ಟ

(ಟಿಎಂಸಿ)

ಒಳಹರಿವು

(ಕ್ಯೂಸೆಕ್ಸ್)

ಆಲಮಟ್ಟು ಜಲಾಶಯ 123.08 66.70 3,41,384
​ತುಂಗಭದ್ರಾ ಜಲಾಶಯ 105.79 97.14 1,25,373
​ಮಲಪ್ರಭಾ ಜಲಾಶಯ 37.73 32.67 14,968
​ಕೆ ಆರ್‌ ಎಸ್‌ 49.45 46.06 1,35,723
​ಲಿಂಗನಮಕ್ಕಿ ಜಲಾಶಯ 151.75 135.35 53,061
​ಕಬಿನಿ ಜಲಾಶಯ 19.52 17.99 49,206
​ಭದ್ರಾ ಜಲಾಶಯ 71.54 68.83 56,152
​ಘಟಪ್ರಭಾ ಜಲಾಶಯ 51.00 47.78 33,515
​ಹೇಮಾವತಿ ಜಲಾಶಯ 37.10 34.75 43,106
​ವರಾಹಿ ಜಲಾಶಯ 31.10 18.39 5,984
​ಹಾರಂಗಿ ಜಲಾಶಯ 8.50 6.95 8,446
​ಸೂಫಾ 145.33 107.76 42,569
​ನಾರಾಯಣಪುರ 33.31 23.86 3,36,450
​ವಾಣಿವಿಲಾಸ ಸಾಗರ 30.42 18.51 693
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+