Karnataka Dams Water Level: ನ.27 ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ತಿಳಿಯಿರಿ
ಕರ್ನಾಟಕ, ನವೆಂಬರ್ 27: ಕರ್ನಾಟಕದಲ್ಲಿ ಮುಂಗಾರು ಕಡಿಮೆಯಾಗಿದ್ದು, ಇದೀಗ ಹಿಂಗಾರು ಚುರುಕುಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರೀ ಕರ್ನಾಟಕದಲ್ಲಿ ವಾಡಿಕೆಯಂತೆ ಮಳೆ ಇಲ್ಲದೆ ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಇದೀಗ ರಾಜ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಹಾಗಾದ್ರೆ, ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕ ನೆವಂಬರ್ 27 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ - 124.80 ಮೀಟರ್
ಇಂದಿನ ನೀರಿನ ಮಟ್ಟ- 124.80 ಟಿಎಂಸಿ
ಒಳಹರಿವು - 6659 ಕ್ಯೂಸೆಕ್
ಹೊರಹರಿವು - 6350 ಕ್ಯೂಸೆಕ್
2. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.42 ಮೀಟರ್
ಇಂದಿನ ನೀರಿನ ಮಟ್ಟ -8.00 ಟಿಎಂಸಿ
ಒಳಹರಿವು - 694 ಕ್ಯೂಸೆಕ್
ಹೊರಹರಿವು - 1000 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ -105.22 ಟಿಎಂಸಿ
ಒಳಹರಿವು - 6800 ಕ್ಯೂಸೆಕ್
ಹೊರಹರಿವು - 1590 ಕ್ಯೂಸೆಕ್

4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 100.86 ಟಿಎಂಸಿ
ಒಳಹರಿವು - 23,646 ಕ್ಯೂಸೆಕ್
ಹೊರಹರಿವು - 23,734 ಕ್ಯೂಸೆಕ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಮೀಟರ್
ಇಂದಿನ ನೀರಿನ ಮಟ್ಟ - 34.31 ಟಿಎಂಸಿ
ಒಳಹರಿವು - 267 ಕ್ಯೂಸೆಕ್
ಹೊರಹರಿವು - 749 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಮೀಟರ್
ಇಂದಿನ ನೀರಿನ ಮಟ್ಟ -131.53 ಟಿಎಂಸಿ
ಒಳಹರಿವು -314 ಕ್ಯೂಸೆಕ್
ಹೊರಹರಿವು -4810 ಕ್ಯೂಸೆಕ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 696.13 ಮೀಟರ್
ಇಂದಿನ ನೀರಿನ ಮಟ್ಟ - 19.48 ಟಿಎಂಸಿ
ಒಳಹರಿವು - 2276 ಕ್ಯೂಸೆಕ್
ಹೊರಹರಿವು - 1400 ಕ್ಯೂಸೆಕ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಮೀಟರ್
ಇಂದಿನ ನೀರಿನ ಮಟ್ಟ - 71.46 ಟಿಎಂಸಿ
ಒಳಹರಿವು - 3,903 ಕ್ಯೂಸೆಕ್
ಹೊರಹರಿವು - 2,700 ಕ್ಯೂಸೆಕ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.94 ಮೀಟರ್
ಇಂದಿನ ನೀರಿನ ಮಟ್ಟ - 43.70 ಟಿಎಂಸಿ
ಒಳಹರಿವು - 183 ಕ್ಯೂಸೆಕ್
ಹೊರಹರಿವು - 183 ಕ್ಯೂಸೆಕ್
10. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 890.58 ಮೀಟರ್
ಇಂದಿನ ನೀರಿನ ಮಟ್ಟ - 29.06 ಟಿಎಂಸಿ
ಒಳಹರಿವು -4680 ಕ್ಯೂಸೆಕ್
ಹೊರಹರಿವು - 452 ಕ್ಯೂಸೆಕ್












Click it and Unblock the Notifications