ಕಾಂಗ್ರೆಸ್ ಕೇಳಿದ ಈ ಹತ್ತು ಪ್ರಶ್ನೆಗೆ ಬಿಜೆಪಿ ಬಳಿ ಯಾವ ಪ್ರಶ್ನೆಗೆ ಉತ್ತರವಿದೆ?
ಬೆಂಗಳೂರು, ಮಾ 2: ಕರ್ನಾಟಕ ಅಸೆಂಬ್ಲಿಯ ಬಜೆಟ್ ಅಧಿವೇಶನ ಇಂದಿನಿಂದ (ಮಾ 2) ಆರಂಭವಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿಚಾರದಲ್ಲಿ ಅಸೆಂಬ್ಲಿಯಲ್ಲಿ ಭಾರೀ ಗದ್ದಲವೇ ನಡೆದಿದೆ.
ಉಭಯ ಸದನಗಳಲ್ಲೂ ಮೃತ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಅಂಗೀಕಾರವಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕರು ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪಿಸಿ ಮಾತಿಗೆ ಅವಕಾಶ ಕೋರಿದ್ದರು.
ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ, ನಿರೀಕ್ಷೆಗಳು ನೂರಾರು
ಈ ನಡುವೆ, ಕರ್ನಾಟಕ ಕಾಂಗ್ರೆಸ್ ಘಟಕ, ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ, #ಉತ್ತರಕೊಡಿ_BSY ಎಂದು ಹತ್ತು ಪ್ರಶ್ನೆಯನ್ನು ಕೇಳಿದೆ. ಅದು ಹೀಗಿದೆ:
1. ಸಮಾಜದ ಶಾಂತಿ ಕದಡುವಂತಹ ಪ್ರಚೋದನಕಾರಿ ದ್ವೇಷ ಭಾಷಣ ಮಾಡಿದ @AnantkumarH, @nalinkateel, @blsanthosh, @CTRavi_BJP, @BRPatil_BJP, @drashwathcn, ಸೋಮಶೇಖರ ರೆಡ್ಡಿ ಸೇರಿದಂತೆ ಇತರೆ ಯಾರ ವಿರುದ್ಧವೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ?
ಮಾರ್ಚ್ 2 ರಿಂದ ಅಧಿವೇಶನ ಆರಂಭ, ಗದ್ದಲಕ್ಕೆ ವಿಪಕ್ಷ ಸಜ್ಜು

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ
2. ನಾಡಿನ ಸಾಕ್ಷಿಪ್ರಜ್ಞೆ, ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ, ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವ ಇಚ್ಚಾಶಕ್ತಿ ನಿಮ್ಮ ಸರ್ಕಾರಕ್ಕಿಲ್ಲ ಏಕೆ?
3. ನೆರೆ ಪರಿಹಾರಕ್ಕೆ ಕೇಂದ್ರದಿಂದ ನೀವು ಕೇಳಿದ ಹಣವೆಷ್ಟು ? ಅವರು ಕೊಟ್ಟಿದ್ದೆಷ್ಟು? ಮತ್ತೆ ಏಕೆ ತಾವು ಒತ್ತಡ ಹೇರಿ ಹಣ ತರುತ್ತಿಲ್ಲ. ಈ ವಿಷಯದಲ್ಲಿ ಇಪ್ಪತ್ತೈದು ಸಂಸದರು ನಾಪತ್ತೆ ಏಕೆ ?

ಜನಪರ ಯೋಜನೆ ಇಂದಿರಾ ಕ್ಯಾಂಟೀನ್
4. ಹಿಂದಿನ ಸರ್ಕಾರಗಳ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಪ್ರಯತ್ನ, ಅನ್ನಭಾಗ್ಯ ಅಕ್ಕಿ ಕಡಿತ, ವಸತಿ ಯೋಜನೆಗಳ ನಿರ್ಲಕ್ಷ್ಯ, ರೈತರ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸದಿರುವುದು, ಈ ರೀತಿಯ ಕೀಳು ಮಟ್ಟದ ದ್ವೇಷ ರಾಜಕಾರಣ ಏಕೆ?
5. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಬಾಕಿ, ನರೇಗಾ ಹಣ, ಯೋಜನೆಗಳ ಹಣ ಸೇರಿದಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಸಾವಿರಾರು ಕೋಟಿ ಬಾಕಿ ಹಣವನ್ನು ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಏಕೆ?

ಸಿ.ಎ.ಎ/ಎನ್.ಆರ್.ಸಿ ವಿರೋಧಿಸಿ ಪ್ರತಿಭಟನೆ
6. ಸಿ.ಎ.ಎ/ಎನ್.ಆರ್.ಸಿ ವಿರೋಧಿಸಿ ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಅನಗತ್ಯವಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ (144) ಹೇರಿದ್ದು ಏಕೆ?
7. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರದರ್ಶನ ನಡೆಸಿದರೂ ಯಾವುದೇ ಕ್ರಮವಿಲ್ಲ, ಆದರೆ, ಶಾಸಕ @utkhader , ಶಾಹಿನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ ಮಕ್ಕಳು, ಶಿಕ್ಷಕರು, ಪಾಲಕರ ವಿರುದ್ಧವು ದೇಶದ್ರೊಹ ಪ್ರಕರಣ ದಾಖಲಿಸಿದ್ದು ಏಕೆ?

ಭೀಕರ ನೆರೆ ಹಾವಳಿ
8. ಭೀಕರ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಇದುವರೆಗೂ ನೆರೆ ಪರಿಹಾರ, ಪುನರ್ವಸತಿ, ನಷ್ಟ ಪರಿಹಾರ ಕಾರ್ಯಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಏಕೆ?
9. ರಾಜ್ಯದಾದ್ಯಂತ ಸ್ವಯಂಪ್ರೇರಿತವಾಗಿ ವಿದ್ಯಾರ್ಥಿ - ಯುವಜನರು, ಸಾಮಾಜಿಕ ಹೋರಾಟಗಾರರು, ಕವಿ ಸಾಹಿತಿಗಳು, ಸಾಮಾನ್ಯ ಜನರು ಬೀದಿಗಿಳಿದು ತೀವ್ರ ಪ್ರತಿಭಟನೆಗಳು, ಹೋರಾಟಗಳು ನಡೆದರೂ ಈ ಜನಾಭಿಪ್ರಾಯವನ್ನು ಗೌರವಿಸಿ ರಾಜ್ಯದಲ್ಲಿ ಎನ್.ಆರ್.ಸಿ/ಸಿಎಎ/ಎನ್.ಪಿ.ಆರ್ ಜಾರಿ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿಲ್ಲ ಏಕೆ?

ಮಂಗಳೂರು ಗಲಭೆ
10. ಮಂಗಳೂರು ಗಲಭೆ ಮತ್ತು ಗೋಲಿಬಾರ್, ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಬಾಂಬ್ ಬೆದರಿಕೆ, ಶಾಸಕರ ಹತ್ಯೆ ಯತ್ನ, ಬೆಂಗಳೂರಿನ ಜೋತಿ ನಿವಾಸ್ ಕಾಲೇಜು ಪ್ರಕರಣ, ಪ್ರಮುಖ ವ್ಯಕ್ತಿಗಳಿಗೆ ಜೀವ ಬೆದರಿಕೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ನಿಮ್ಮ ವೈಫಲ್ಯವಲ್ಲವೇ?












Click it and Unblock the Notifications