ಬಿಜೆಪಿಯಿಂದ ಸದನಕ್ಕೆ ಅಗೌರವ: ಕಾಂಗ್ರೆಸ್ ಟ್ವೀಟ್‌ ಟೀಕೆ

ಬೆಂಗಳೂರು, ಫೆಬ್ರವರಿ 06: ಬಿಜೆಪಿಯು ಬಜೆಟ್ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಗದ್ದಲ ಎಬ್ಬಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌, ಬಿಜೆಪಿಯು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವ ಮೂಲಕ ಸದಸನಕ್ಕೆ ಹಾಗೂ ರಾಜ್ಯಪಾಲರಿಗೆ ಅಗೌರವ ತೋರಿದೆ ಎಂದು ದೂರಿದೆ.

ಆಪರೇಷನ್​ ಕಮಲ ಮಾಡಲ್ಲ, ಅಧಿವೇಶನಕ್ಕೂ ಅಡ್ಡಿಪಡಿಸೊಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅಧಿವೇಶನ ಆರಂಭದಲ್ಲೇ ಗಲಾಟೆ ಆರಂಭಿಸುವ ಮೂಲಕ ಜನದ್ರೋಹಿಯಾಗಿದ್ದಾರೆ ಎಂದು ಕಠು ಶಬ್ದಗಳಲ್ಲಿ ಕಾಂಗ್ರೆಸ್ ಟೀಕಿಸಿದೆ.

Karnataka Congress tweets against BJPs behavior in todays session

ಬಿಜೆಪಿಯ ಇಂದಿನ ನಡೆಯು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯ ಹತಾಶ ಮನಃಸ್ಥಿತಿಯ ಪ್ರತೀಕವಾಗಿದೆ ಎಂದು ಕಾಂಗ್ರೆಸ್‌ ತನ್ನ ಟ್ವೀಟ್‌ನಲ್ಲಿ ವಿಶ್ಲೇಷಿಸಿದೆ.

ಇಂದು ಬಜೆಟ್ ಅಧಿವೇಶನ ಆರಂಭವಾಗಿ ರಾಜ್ಯಪಾಲರ ಭಾಷಣ ಶುರುವಾಗುತ್ತಿದ್ದಂತೆ ಸದನದ ಬಾವಿಗಿಳಿದ ಬಿಜೆಪಿ ಸದಸ್ಯರು ತೀವ್ರವಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಸದಸ್ಯರ ಗದ್ದಲದಿಂದಾಗಿ ರಾಜ್ಯಪಾಲರು ತಮ್ಮ ಭಾಷಣವನ್ನು ಮೊಟಕುಗೊಳಿಸಬೇಕಾಯಿತು. ಸಂತಾಪ ಸೂಚನೆ ವೇಳೆ ಸಹ ಬಿಜೆಪಿ ಗದ್ದಲ ಮುಂದುವರೆದಿತ್ತು. ಸ್ಪೀಕರ್ ಅವರು ಬಿಜೆಪಿ ಸದಸ್ಯರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಂತಾಪ ಸೂಚನೆ ಸುಸೂತ್ರವಾಗಿ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+