ಟ್ವೀಟ್ ಮೂಲಕ ಬಿಜೆಪಿಯ ತತ್ವ ಸಿದ್ಧಾಂತ ಲೇವಡಿ ಮಾಡಿದ ಕಾಂಗ್ರೆಸ್
Recommended Video
ಬೆಂಗಳೂರು, ಜುಲೈ 09 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಳ್ಳಲು ಕೊನೆ ಕ್ಷಣದ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಕಾಂಗ್ರೆಸ್‌ನ 9 ಮತ್ತು ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಇದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ.
ಮಂಗಳವಾರ ಕರ್ನಾಟಕ ಕಾಂಗ್ರೆಸ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. 'ಆಪರೇಷನ್ ಕಮಲ, ಕುದುರೆ ವ್ಯಾಪಾರ, ಅಧಿಕಾರ ದುರುಪಯೋಗ ಸಿದ್ಧಾಂತಗಳಾಗಿ ಅಧಿಕೃತವಾಗಿಯೇ ಸೇರ್ಪಡೆಯಾಗಿವೆ' ಎಂದು ದೂರಿದೆ.

'@BJP4India ಕ್ಕೆ ಅಧಿಕಾರ ಹಿಡಿಯುವುದೇ ಅಂತಿಮ ಉದ್ದೇಶ' ಎಂದು ಕಾಂಗ್ರೆಸ್ ಟೀಕಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯ ವಿರುದ್ಧ ಹೋರಾಟವನ್ನು ಆರಂಭಿಸಿದೆ.
ಕಾಂಗ್ರೆಸ್ ಟ್ವೀಟ್
ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಧೋರಣೆಯ @BJP4India
ಕ್ಕೆ ಅಧಿಕಾರ ಹಿಡಿಯುವುದೇ ಅಂತಿಮ ಉದ್ದೇಶ ಧರ್ಮ, ಜಾತಿ, ಪ್ರಾಂತ್ಯಗಳ ಹೆಸರಲ್ಲಿ ಕೋಮುಗಲಭೆ ಸೃಷ್ಟಿಸುವುದನ್ನು ಸಿದ್ಧಾಂತ ಮಾಡಿಕೊಂಡಿತ್ತು. ಈಗ; "ಆಪರೇಷನ್ ಕಮಲ, ಕುದುರೆ ವ್ಯಾಪಾರ, ಅಧಿಕಾರ ದುರುಪಯೋಗ" ಸಿದ್ಧಾಂತಗಳಾಗಿ ಅಧಿಕೃತವಾಗಿಯೆ ಸೇರ್ಪಡೆಯಾಗಿವೆ. #OperationKamala












Click it and Unblock the Notifications