ಮಹಿಳೆಯರ ಮನ ಗೆಲ್ಲಲು ಕಾಂಗ್ರೆಸ್ ನಿಂದ ತುಳಸಿ ಗಿಡ ಹಂಚಿಕೆ

ಬೆಂಗಳೂರು, ನವೆಂಬರ್ 5: ಕರ್ನಾಟಕದಲ್ಲಿ ಮಹಿಳೆಯರ ಮನಗೆಲ್ಲಲು ಕಾಂಗ್ರೆಸ್ ವಿಶಿಷ್ಠ ಕಾರ್ಯತಂತ್ರದ ಮೊರೆ ಹೋಗಿದೆ.

ಈ ಕಾರ್ಯತಂತ್ರದ ಪ್ರಕಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ತುಳಸಿ ಗಿಡಗಳನ್ನು ಮನೆಗೆ ಮನೆಗೆ ಭೇಟಿ ನೀಡಿ ಹಂಚಲಿದ್ದಾರೆ. ತುಳಸಿ ಗಿಡಗಳ ಜತೆಗೆ ಅರಶಿಣ ಕುಂಕುಮವನ್ನು ಕಾರ್ಯಕರ್ತರು ವಿತರಿಸಲಿದ್ದಾರೆ. ಹೆಂಗಳೆಯರ ಮತಗಳನ್ನು ಸೆಳೆಯಲು ಈ ವಿಶಿಷ್ಠ ಕಾರ್ಯತಂತ್ರವನ್ನು ನೆಚ್ಚಿಕೊಳ್ಳಲಾಗಿದೆ.

Karnataka Congress to gift tulsi saplings to atrack women voters

ಮಹಿಳಾ ಕಾಂಗ್ರೆಸಿಗರ ಈ ಕಾರ್ಯತಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಒಪ್ಪಿಗೆ ನೀಡಿದ್ದಾರೆ. ಮುಂದಿನ ಒಂದು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

ತುಳಸಿಯ ಬಗ್ಗೆ ಧಾರ್ಮಿಕವಾಗಿ ಪವಿತ್ರ ಭಾವನೆ ಇದೆ. ಈ ಕಾರಣಕ್ಕೆ ತುಳಸಿ ಹಂಚಲು ನಿರ್ಧರಿಸಿದ್ದೇವೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಈಗಾಗಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಶನಿವಾರ ನಡೆದ ವರ್ಕಿಂಗ್ ಕಮಿಟಿ ಸಭೆಯಲ್ಲಿ ಸಾಂಕೇತಿಕವಾಗ ಡಾ.ಜಿ. ಪರಮೇಶ್ವರ್ ಗೆ ತುಳಸಿ ಗಿಡಗಳನ್ನು ಹಂಚಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+