ಭುಗಿಲೆದ್ದ ಅಸಮಾಧಾನ: ಕಾಂಗ್ರೆಸ್ ಕೆಲ ನಾಯಕರು ದೆಹಲಿ ಹೈಕಮಾಂಡ್ ಭೇಟಿ? ಡಿಸಿಎಂ ಸ್ಥಾನಕ್ಕೆ ಒತ್ತಡ?
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ತೀವ್ರ ಚರ್ಚೆ ಆಗುತ್ತಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಟೀಕೆಗಳಿಗೂ ಗುರಿಯಾಗಿದೆ. ಈ ವಿಚಾರ ಸೇರಿದಂತೆ ರಾಜ್ಯದ ಹಲವು ವಾಸ್ತವ ಸಂಗತಿಗಳು ದೆಹಲಿ ಹೈಕಮಾಂಡ್ ಮುಟ್ಟಲಿದ್ದು, ಆದಷ್ಟು ಶೀಘ್ರವೇ ರಾಜ್ಯ ನಾಯಕರು ದೆಹಲಿಗೆ ತೆರಳಲಿದ್ದು, ವರಿಷ್ಠರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಶನಿವಾರವಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ ಮನೆಗೆ ಸಿಎಂ ಸಿದ್ದರಾಮಯ್ಯ ದೌಡಾಯಿಸಿ ಡಿಸಿಎಂ ಡಿಕೆ ಶಿವಕುಮಾರ್ ಬಿಟ್ಟು ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನ ಅಲಂಕರಿಸಿ ಆರು ತಿಂಗಳ ಕಳೆದಿಲ್ಲ. ಅದಾಗಲೇ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ತುರ್ತು ಸಭೆ ಸಾಕಷ್ಟು ಮಹತ್ವ ಪಡೆದಿದೆ. ಈ ಸಭೆಯಲ್ಲಿ ಕೆಲವು ಹಿರಿಯ ನಾಯಕರು ಸಿಎಂ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ.

ಸದಾಶಿವನಗರದ ಸಚಿವ ಪರಮೇಶ್ವರರ ಮನೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ಪಕ್ಕದಲ್ಲೇ ಇದ್ದ ಡಿಕೆ ಶಿವಕುಮಾರ್ ಅವರನ್ನು ಸಭೆಗೆ ಆಹ್ವಾನಿಸಲು ಮನಸ್ಸು ಮಾಡಲಿಲ್ಲ. ಸಚಿವರ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಭೆಯಲ್ಲಿ ದಲಿತ ಮುಖಂಡರು ಪಾಲ್ಗೊಂಡಿದ್ದರು. ಇದು ತೀವ್ರ ಕುತೂಹಲ ಸೃಷ್ಟಿಗೆ ಕಾರಣವಾಗಿದೆ.
ಸರ್ಕಾರದಲ್ಲಿ ಮತ್ತೆ ಬಣ ರಾಜಕೀಯ?
ಎರಡೂವರೆಗೆ ವರ್ಷ ಸಿದ್ದರಾಮಯ್ಯ ನಂತರ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಎನ್ನಲಾಗಿತ್ತು. ಇದೀಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ, ಬಣ ರಾಜಕೀಯ ಮುಂದುವರೆಯುವ ಸ್ಪಷ್ಟ ಲಕ್ಷಣಗಳು ಘೋಚರಿಸುತ್ತಿವೆ.
ಸಭೆಯಲ್ಲಿ ಪರಿಷ್ಠ ಜಾತಿ ಮತ್ತು ಪಂಗಡ ಹಾಗೂ ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬೇಡಿಕೆ ಬಗ್ಗೆಯು ಚರ್ಚೆಸಲಾಗಿದೆ. ಲಿಗಾಯತ ಸಮುದಾಯಕ್ಕೆ ಹೆಚ್ಚುವರಿ ಡಿಸಿಎಂ ಸ್ಥಾನ ಬೇಕೆಂಬ ಬೇಡಿಕೆ ಇದ್ದೆ ಇದೆ. ಲೋಕಸಭಾ ಚುನಾವನೆ ತಯಾರಿಯಲ್ಲಿರಬೇಕಿದ್ದ ಪ್ರಮುಖ ಪಕ್ಷಗಳು ಇದೀಗ ತೆರೆ ಮರೆಯಲ್ಲಿ ನಾಯಕರ ಅಸಮಾಧಾನ, ಬೇಗುದಿ ತಣ್ಣಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸ್ಥಾನ ಬದಲಾವಣೆಗೆ ಮಾತು ಮತ್ತೆ ಕೇಳಿ ಬರದಂತೆ ತಂತ್ರ ರೂಪಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಲಾಖೆ ಕೆಲಸದ ನೆಪವೊಡ್ಡಿ ದೆಹಲಿಗೆ?
ಇದೇಲ್ಲ ವಿಚಾರಗಳನ್ನು ದಲಿತ ನಾಯಕರು, ಸಚಿವರು ಇಲಾಖೆ ಕೆಲಸದ ನೆಪವೊಡ್ಡಿ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ವಿವರಿಸಲಿದ್ದಾರೆ. ರಾಜ್ಯದ ವಾಸ್ತವಾಂಶ, ಸರ್ಕಾರದಲ್ಲಿನ ಹಲವರ ಅಸಮಾಧಾನ ಕುರಿತು ತಿಳಿಸುವ ಜೊತೆಗೆ ಡಿಸಿಎಂ ಬೇಡಿಕೆ ಕುರಿತು ಆಗ್ರಹಿಸಲಿದ್ದಾರೆ. ಇವರಿಗೆ ಗೃಹ ಸಚಿವ ಮತ್ತೋರ್ವ ದಲಿತ ನಾಯಕ ಡಾ.ಜಿ.ಪರಮೇಶ್ವರ ಅವರು ಸಾಥ್ ನೀಡಲಿದ್ದಾರೆ. ಲೋಕಸಭೆ ಚುನಾವಣೆ ಮೊದಲೇ ಡಿಸಿಎಂ ಸ್ಥಾನ ಹುದ್ದೆ ಸೃಷ್ಟಿಸಲು ಹೈಕಮಾಂಡ್‌ಗೆ ಒತ್ತಡ ತರುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಪಕ್ಷ, ಸರ್ಕಾರದಲ್ಲಿ ಭಿನ್ನಮತ ಇಲ್ಲ
ದಲಿತ ಮುಖಂಡರ ನೇತೃತ್ವದಲ್ಲಿ ನಡೆದ ಗುಪ್ತ ಚರ್ಚೆಗಳ ವಿರುದ್ಧ ಕೆಲವರು ಧ್ವನಿ ಎತ್ತಿದ್ದಾರೆ. ಇಂತಹ ಸಭೆಗಳು ಸರ್ಕಾರಕ್ಕಾಗಲಿ, ಇಲ್ಲವೇ ಪಕ್ಷಕ್ಕಾಗಲಿ ಒಳ್ಳೆಯದಲ್ಲ. ಸರ್ಕಾರದಲ್ಲಿ ಯಾವುದೇ ಒಳ ಜಗಳ, ಭಿನ್ನಮತ ಇಲ್ಲ. ಎಲ್ಲರು ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications