Congress Manifesto 2023: ಪುಣ್ಯಕೋಟಿ-ನಂದಿನಿ ನಮ್ಮದೇ ಎಂದ ಕಾಂಗ್ರೆಸ್; ಹೈನುಗಾರಿಕೆಗೆ ಭರವಸೆಗಳೇನು?

ಬೆಂಗಳೂರು, ಮೇ2: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆ (ಭರವಸೆ ಪತ್ರ) ಬಿಡುಗಡೆ ಮಾಡುತ್ತಿವೆ.

ಈ ಬಾರಿಯ ಚುನಾವಣೆಯಲ್ಲಿ ಅಧಿಕಾರದ ಗದ್ದುಗೇರಲು ಹವಣಿಸುತ್ತಿರುವ ಕಾಂಗ್ರೆಸ್‌ ಪಕ್ಷ ಇಂದು (ಮೇ 1, ಮಂಗಳವಾರ) ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈಗಾಗಲೇ ಪ್ರಣಾಳಿಕೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು.

Benefits And Promises To Dairy Forming Sector

ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ಏನೆಲ್ಲಾ ಭರವಸೆಗಳನ್ನು ನೀಡಿದ್ದಾರೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಪುಣ್ಯಕೋಟಿ-ನಂದಿನಿ ಹೆಸರಿನಲ್ಲಿ ಹೈನುಗಾರಿಕೆಗೆ ಕಾಂಗ್ರೆಸ್ ಭರವಸೆಗಳು

ಹೈನು ಅಭಿವೃದ್ಧಿ, ಪಶುಸಂಗೋಪನೆ

  • ಮಿಷನ್‌ ಕ್ಷೀರ ಕ್ರಾಂತಿ - ಪ್ರತಿ ದಿನ 15 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ.
  • ಪಶು ಭಾಗ್ಯ- ಉತ್ತಮ ತಳಿಯ ಹಸು ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ರೂ. 3 ಲಕ್ಷದವರೆಗೆ ಸಾಲ ಸೌಲಭ್ಯ
  • ಕುರಿಗಾಹಿ ಸಂವರ್ಧನಾ ನಿಧಿ - ಕುರಿ ಸಾಕಾಣಿಕೆಗಾಗಿ 1 ಸಾವಿರ ರೂ. ಕೋಟಿಯ ನಿಧಿ ಸ್ಥಾಪನೆ.
  • ಕ್ಷೀರಧಾರೆ - ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು 5ರಿಂದ 7 ರೂ.ಗೆ ಹೆಚ್ಚಳ.
  • ಕ್ಷೀರ ಕ್ರಾಂತಿ ಕ್ರೆಡಿಟ್ ಕಾರ್ಡ್ - 50 ಸಾವಿರ ರೂ. ಕ್ರೆಡಿಟ್ ಮಿತಿಯೊಂದಿಗೆ ಎಲ್ಲಾ ಕೃಷಿಕರಿಗೆ ಕ್ರೆಡಿಟ್ ಕಾರ್ಡ್.
  • ಋಣಮುಕ್ತ ಕುರಿಗಾಹಿ ಯೋಜನೆ - ಎಲ್ಲಾ ಕುರಿ, ಮೇಕೆ ಸಾಕಾಣಿಕದಾರರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ.
  • ಜಾನುವಾರು ಸಾಕಣಿದಾರರಿಂದ ಪ್ರತಿ ಕೆಜಿಗೆ 3 ರೂಪಾಯಿಯಂತೆ ಸಗಣಿ (ಗೊಬ್ಬರ) ಖರೀದಿ, ಗ್ರಾಮೀಣ ಮಹಿಳೆ/ಯುವಕರನ್ನು ತೊಡಗಿಸಿಕೊಂಡು ಪ್ರತಿ ಪಂಚಾಯತ್‌ನಲ್ಲಿ ಗೊಬ್ಬರ ತಯಾರಿಕಾ ಕೇಂದ್ರಗಳ ಸ್ಥಾಪನೆ.
  • ಮಹಿಳೆಯರಿಗೆ ಯಾವುದೇ ಭದ್ರತೆ ಪಡೆಯದೆ ಗರಿಷ್ಠ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಬಡ್ಡಿರಹಿತ ಸಾಲ.

ಕಾಂಗ್ರೆಸ್‌ ಪಕ್ಷ ಈಗಾಗಲೇ ಮಹಿಳೆಯರಿಗೆ, ಯುವಕರ ಹಾಗೂ ರೈತರ ಸಮುದಾಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಇದೀಗ ಬಿಜೆಪಿಗೆ ಠಕ್ಕರ್ ಕೊಡಲು ಮತದಾರರ ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+