ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು

ಬೆಂಗಳೂರು, ಮೇ 19: ಬಿಎಸ್ ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನಕ್ಕೆ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಗೆಲುವಿನ ನಗೆ ಮೂಡಿದೆ.

ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಈಗಾಗಲೇ ಸರ್ಕಾರ ರಚನೆಗೆ ಅವಕಾಶ ಕೋರಿ, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟ ಪತ್ರ ಸಲ್ಲಿಸಿದೆ.

ಎಚ್ ಡಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯ ದೊಡ್ಡ ಕೆಲಸ ಎದುರಾಗಲಿದೆ.

Karnataka Congress JDS cabinet expansion Probable MLAs lobby list

ಈಗಾಗಲೇ ವಾಟ್ಸಾಪ್ ಗಳಲ್ಲಿ ಸಚಿವ ಸಂಪುಟ ಸೇರಬಲ್ಲ ಪ್ರಮುಖ ಸಚಿವರು ಹಾಗೂ ಅವರ ಖಾತೆ ವಿವರಗಳ ಪಟ್ಟಿ ಹರಿದಾಡುತ್ತಿದೆ.

* ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ -ಎಚ್.ಡಿ.ಕುಮಾರಸ್ವಾಮಿ
* ಆಡಳಿತ ಪಕ್ಷದ ನಾಯಕ -ಸಿದ್ದರಾಮಯ್ಯ
* ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ-ಡಾ.ಜಿ.ಪರಮೇಶ್ವರ್
* ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು - ಎಚ್.ಕೆ.ಪಾಟೀಲ್
* ಲೋಕೋಪಯೋಗಿ-ಎಚ್ಡಿ.ರೇವಣ್ಣ
* ಇಂಧನ ಸಚಿವ-ಡಿ.ಕೆ.ಶಿವಕುಮಾರ್
* ಭಾರಿ ಕೈಗಾರಿಕೆ-ಎ ಟಿ ರಾಮಸ್ವಾಮಿ
* ಸಾರಿಗೆ-ರಾಮಲಿಂಗರೆಡ್ಡಿ
* ಸಣ್ಣನೀರಾವರಿ-ಎಸ್ ಶಿವಲಿಂಗಪ್ಪ
* ಕಂದಾಯ-ಎಸ್ .ಶಿವಶಂಕರಪ್ಪ
* ಆರೋಗ್ಯ-ಯು.ಟಿ.ಖಾದರ್
* ಮಹಿಳಾ ಮತ್ತು ಮಕ್ಕಳ ಕಲ್ಯಾಣ-ಲಕ್ಷ್ಮಿ ಹೆಬ್ಬಾಳ್ಕರ್
* ಕೃಷಿ-ಸಿ.ಎಸ್ ಪುಟ್ಟರಾಜು
* ಶಿಕ್ಷಣ-ಎಚ್ ವಿಶ್ವನಾಥ್
* ನಗರಾಭಿವೃದ್ಧಿ-ಕೆಜೆ ಜಾರ್ಜ್
* ಕ್ರೀಡಾ-ಕೃಷ್ಣಪ್ಪ,ಎಂ
* ವಾರ್ತಾ ಮತ್ತು ಮಾಹಿತಿ -ಕೃಷ್ಣ ಬೈರೇಗೌಡ
* ಸಮಾಜ ಕಲ್ಯಾಣ-ಎನ್ ಮಹೇಶ್
* ಸಹಕಾರ-ಜಿ.ಟಿ ದೇವೇಗೌಡ
* ಪಶುಸಂಗೋಪನೆ-ಆರ್ ನರೇಂದ್ರ, ರಾಜೂಗೌಡ
* ಜವಳಿ ಮತ್ತು ಮುಜುರಾಯಿ-ಬಂಡೆಪ್ಪ ಕಾಶೆಂಪುರ್
* ಕಾರ್ಮಿಕ-ಡಿಸಿ ತಮ್ಮಣ್ಣ
* ಅಬಕಾರಿ-ದಿನೇಶ್ ಗುಂಡುರಾವ್
* ವೈದ್ಯಕೀಯ-ಡಾ.ಕೆ ಸುಧಾಕರ್
* ಉನ್ನತ ಶಿಕ್ಷಣ-ತನ್ವೀರ್ ಸೇಠ್
* ಅರಣ್ಯ -ರೋಷನ್ ಬೇಗ್
* ಆಹಾರ ಮತ್ತು ನಾಗರೀಕ ಹಕ್ಕು -ಎಂ ಬಿ ಪಾಟೀಲ್
* ಕಾನೂನು ಮತ್ತು ಸಂಸದೀಯ-ಆರ್.ವಿ.ದೇಶ್ ಪಾಂಡೆ
* ಸಣ್ಣಕೈಗಾರಿಕೆ ಹಾಗೂ ಸಕ್ಕರೆ -ಸತೀಶ್ ಜಾರಕಿಹೋಳಿ
* ವಿಜ್ಞಾನ ಮತ್ತು ತಂತ್ರಜ್ಞಾನ -ಡಾ.ಅಜಯ್ ಸಿಂಗ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+