‘ಯಡಿಯೂರಪ್ಪ ಅವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ...’

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ತಿಕ್ಕಾಟ ತಾರಕಕ್ಕೆ ಏರಿದೆ. ಬಿಜೆಪಿ & ಜೆಡಿಎಸ್ ನಡುವೆ ಮೈತ್ರಿ ಒಪ್ಪಂದ ನಡೆದ ಬಳಿಕವಂತೂ, ಕಾಂಗ್ರೆಸ್ ನೇರಾ ನೇರ ಇಬ್ಬರ ಮೇಲೂ ಮುಗಿಬೀಳುತ್ತಿದೆ. ಒಂದ್ಕಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ವಾಗ್ದಾಳಿ ನಡೆಸುವಾಗ, 'ಕೈ' ಪಾಳಯ ಹೊಸ ಬಾಂಬ್ ಪ್ರಯೋಗ ಮಾಡಿದೆ!

ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಪದೇ ಪದೆ ಆರೋಪ ಮಾಡುತ್ತದೆ. ಹಾಗೇ ಕಾಂಗ್ರೆಸ್ ಸರ್ಕಾರದ ವಿರುದ್ಧ, ಭ್ರಷ್ಟಾಚಾರ ಆರೋಪ ಕುರಿತಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆರೋಪ ಮಾಡ್ತಾರೆ. ಇನ್ನೊಂದ್ಕಡೆ ಕಾಂಗ್ರೆಸ್ ಇಬ್ಬರ ಮೇಲೆ ಒಂದೇ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ಹಾಗಾದ್ರೆ ಏನು ಆ ಬ್ರಹ್ಮಾಸ್ತ್ರ? ಕರ್ನಾಟಕ ಕಾಂಗ್ರೆಸ್ ಹೇಳಿದ್ದು ಏನು? ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮೇಲೆ ಈಗ ಕಾಂಗ್ರೆಸ್ ಮಾಡಿರುವ ಆರೋಪ ಎಂತಹ ಪರಿಣಾಮ ಬೀರುತ್ತೆ?

Karnataka Congress Alleged This Against The BJP High Command

'ಯಡಿಯೂರಪ್ಪ ಅವರನ್ನು ಭೇಟಿಯಾಗದೆ ಅವಮಾನಿಸಿ...'

ಕಾಂಗ್ರೆಸ್ ಇದೀಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಒಂದೇ ಅಸ್ತ್ರವನ್ನು ಪ್ರಯೋಗ ಮಾಡಿದ್ದು, 'ಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆ. ನಾಯಕರು ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ! ಕುಮಾರಸ್ವಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸಿಗದಿರುವುದೇಕೆ ?' ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

'ವಿಪಕ್ಷ ನಾಯಕನ ಆಯ್ಕೆ ಮಾಡದೇ...'

ಇದೇ ಟ್ವೀಟ್‌ನಲ್ಲಿ ಕಾಂಗ್ರೆಸ್, ಕರ್ನಾಟಕ ಬಿಜೆಪಿ ವಿರುದ್ಧ ವಿಪಕ್ಷ ನಾಯಕನ ಆಯ್ಕೆ ಮಾಡದೇ ಇರುವ ಅಸ್ತ್ರ ಮತ್ತೆ ಪ್ರಯೋಗಿಸಿದ್ದು, 'ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನ ಹಲವು ತಿಂಗಳುಗಳಿಂದ ಖಾಲಿ ಇರುವುದು ಬಿಜೆಪಿಗೆ ಗಂಭೀರ ವಿಷಯವಲ್ಲವೇ? ಯಡಿಯೂರಪ್ಪನವರು ಹಾಗೂ ಸದಾನಂದಗೌಡರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಇಂತಹವರನ್ನೇ ಅವಮಾನಿಸುತ್ತಿರುವುದರಿಂದ ಬಿಜೆಪಿಗರ ಸ್ವಾಭಿಮಾನಕ್ಕೆ ದಕ್ಕೆಯಾದಂತೆ ಅಲ್ಲವೇ? ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ @BJP4Karnataka?' ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ಕಡೆಯಿಂದಲೂ ವಾಗ್ದಾಳಿ!

ಇಷ್ಟೆಲ್ಲದರ ನಡುವೆ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿ, ವಾಗ್ದಾಳಿ ನಡೆಸಿದೆ. 'ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಬೀಡಾಗಿದ್ದ ಕರ್ನಾಟಕದಲ್ಲಿ ಅರಾಜಕತೆ, ಅಶಾಂತಿ ಹಾಗೂ ಭಯದ ವಾತಾವರಣವನ್ನು ನಿರ್ಮಿಸಿದ್ದು ಹಾಗೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಹಳ್ಳ ಹಿಡಿಸಿದ್ದೇ @INCKarnataka ಸರ್ಕಾರದ ಐದು ತಿಂಗಳ ಸಾಧನೆ!! ಅಧಿಕಾರಕ್ಕೆ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೂ ಜಿಹಾದಿಗಳನ್ನು ಓಲೈಸುವಲ್ಲಿ ಪೈಪೋಟಿಗೆ ಬಿದ್ದಿರುವ ಸಿಎಂ @siddaramaiah ಅವರು ಮತ್ತು ಡಿಸಿಎಂ @DKShivakumar ಅವರ ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ.' ಎಂದು ಬಿಜೆಪಿ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+