‘ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದ ದ್ರೋಹ ಒಂದೆರಡಲ್ಲ..’
ಕನ್ನಡಿಗರಿಗೆ ಪ್ರತಿ ಬಾರಿ ಅನ್ಯಾಯ, ಕೇಂದ್ರದಲ್ಲಿ ಯಾರೇ ಬಂದ್ರು ಕನ್ನಡಿಗರಿಗೆ ಅನ್ಯಾಯ ಆಗೋದು ತಪ್ಪುತ್ತಿಲ್ಲ. ಅದು ಬಿಜೆಪಿ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿ, ಇಲ್ಲ ಕಾಂಗ್ರೆಸ್ ಸರ್ಕಾರ ಬರಲಿ. ಕರ್ನಾಟಕಕ್ಕೆ ಮಾತ್ರ ಮಲತಾಯಿ ನ್ಯಾಯ ಅನ್ನೋ ಆರೋಪ ಪದೇ, ಪದೇ ಕೇಳಿಬರುತ್ತೆ. ಹೀಗಿದ್ದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬೇಕು ಅಂತಲೇ ಬಿಜೆಪಿ ಸರ್ಕಾರ ಅನ್ಯಾಯ ಮಾಡ್ತಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ.
ಹೌದು ಬಿಜೆಪಿ & ಕಾಂಗ್ರೆಸ್ ನಡುವೆ ಹೊತ್ತಿದ ರಾಜಕೀಯ ಬೆಂಕಿ ದೊಡ್ಡದಾಗಿ ಕಾವು ಪಡೆದಿದೆ. ಕರ್ನಾಟಕದ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ 'ಶ್ರೀರಾಮ ದೇಗುಲ' ವಿಚಾರ ಪ್ರಸ್ತಾಪ ಮಾಡಿ ವಾಗ್ದಾಳಿ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟಿದೆ. ಈ ಮೂಲಕ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಹೀಗೆ ಇದೀಗ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಆ ಬಗ್ಗೆ ದೊಡ್ಡ ಪಟ್ಟಿಯನ್ನೇ ನೀಡಿದೆ! ಹಾಗಾದರೆ ಆರೋಪ ಪಟ್ಟಿಯಲ್ಲಿ ಏನೇನೇನಿದೆ? ಮುಂದೆ ಓದಿ.

ಕಾಂಗ್ರೆಸ್ VS ಕೇಂದ್ರ ಸರ್ಕಾರ!
ಇದೀಗ ಕಾಂಗ್ರೆಸ್ ಮಾಡಿರುವ ಆರೋಪದ ಪ್ರಕಾರ, 'ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದ ದ್ರೋಹ ಒಂದೆರಡಲ್ಲ.. ◆ಮುಖ್ಯಮಂತ್ರಿಗಳು ಪ್ರಧಾನಿಯನ್ನು ಖುದ್ದು ಭೇಟಿಯಾಗಿ ಬರ ಪರಿಹಾರ ನೀಡುವಂತೆ ಕೇಳಿದರೂ ನಯಾಪೈಸೆ ಬಿಡುಗಡೆಯಾಗಿಲ್ಲ ◆GST ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ, ◆ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ◆ಈಗ ಗಣರಾಜ್ಯೋತ್ಸವ ಪರೇಡ್‌ಗೆ ರಾಜ್ಯದ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಣೆ. ಇಷ್ಟೆಲ್ಲ ಅನ್ಯಾಯಗಳಾದರೂ ರಾಜ್ಯ ಬಿಜೆಪಿ ನಾಯಕರು ಮಾತ್ರ ಮೌನ.' ಎಂದು ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ.
ಹಾಗೆ ಇದೇ ಟ್ವೀಟ್‌ನಲ್ಲಿ ತನ್ನ ಆರೋಪವನ್ನು ಮುಂದುವರಿಸಿರುವ ಕಾಂಗ್ರೆಸ್, ಬಿಜೆಪಿಯ ನಾಯಕರಿಗೆ ಸವಾಲು ಹಾಕಿದೆ. 'Dear @BJP4Karnataka, ನಿಮಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗದೆ, ಮೋದಿ ಗುಲಾಮಗಿರಿಯೇ ಮುಖ್ಯವಾಗಿರುವುದೇಕೆ?' ಎಂದು ಪ್ರಶ್ನೆ ಮಾಡಿ ಬಿಜೆಪಿ ನಾಯಕರನ್ನು ಕೆಣಕಿದೆ ಕಾಂಗ್ರೆಸ್. ಈ ಮೂಲಕ ಲೋಕಸಭೆ ಚುನಾವಣೆಗೆ ಮುನ್ನ ಹೊಸ ತಿಕ್ಕಾಟ ಕೂಡ ಬಲು ಜೋರಾಗಿದೆ.
ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದ ದ್ರೋಹ ಒಂದೆರಡಲ್ಲ..
— Karnataka Congress (@INCKarnataka) January 11, 2024
◆ಮುಖ್ಯಮಂತ್ರಿಗಳು ಪ್ರಧಾನಿಯನ್ನು ಖುದ್ದು ಭೇಟಿಯಾಗಿ ಬರ ಪರಿಹಾರ ನೀಡುವಂತೆ ಕೇಳಿದರೂ ನಯಾಪೈಸೆ ಬಿಡುಗಡೆಯಾಗಿಲ್ಲ.
◆GST ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ,
◆ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.
◆ಈಗ…
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕರ್ನಾಟಕ ರಾಜಕೀಯ ಅಖಾಡದಲ್ಲಿ ಕಿಚ್ಚು ಹೊತ್ತಿದೆ. ಕಿಚ್ಚು ತಣ್ಣಗಾಗಲು ಲೋಕಸಭೆ ಚುನಾವಣೆ ಮುಗಿಯಬೇಕು. ಅಲ್ಲಿಯ ತನಕ, ಇಬ್ಬರ ನಡುವೆ ಇದೇ ರೀತಿ ಫೈಟಿಂಗ್ ಮುಂದುವರಿದು ಭರ್ಜರಿ ಡೈಲಾಗ್ ಕೇಳಬೇಕಾಗಿ ಬರಬಹುದು ಅಂತಾರೆ ಜನ. ಈ ಮೂಲಕ ಕೆಲ ತಿಂಗಳು ಬಾಕಿ ಇರುವಾಗಲೇ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ತಿಕ್ಕಾಟ ಮತ್ತಷ್ಟು ಜೋರಾಗುವ ಮುನ್ಸೂಚನೆ ಸಿಗುತ್ತಿದೆ. ಅದರಲ್ಲೂ ಕರ್ನಾಟಕ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರೇಸ್ ಶುರುವಾಗಿದೆ.












Click it and Unblock the Notifications