ಕರ್ನಾಟಕ ಕಾಮೆಡ್-ಕೆ ಪರೀಕ್ಷಾ ಫಲಿತಾಂಶ ಪ್ರಕಟ
ಬೆಂಗಳೂರು, ಜೂ.4: ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಜೂ.4 ಬುಧವಾರ ಪ್ರಕಟವಾಗಿದೆ.
ಎಂಜಿನಿಯರಿಂಗ್ ವಿಭಾಗ ಶ್ರೇಯಾಂಕ ಪಡೆದವರು
1.ದಿನೇಶ್ ರಾಮ್‌ಕುಮಾರ್
2.ಕೊಡವೆಟಿ ಧರಣ್
3.ಪ್ರಜ್ವಲ್
ಮೆಡಿಕಲ್ ವಿಭಾಗ ಶ್ರೇಯಾಂಕ ಪಡೆದವರು
1.ಗಿರಿಜಾ ಅಗರ್‌ವಾಲ್
2.ಅದಿತ್ಯ ಅಗರ್‌ವಾಲ್
3.ಶಿವಾನಿ

ದಂತ ವೈದ್ಯಕೀಯ ಹಾಗೂ ವೈದ್ಯಕೀಯ ವಿಭಾಗಗಳಿಗೆ ಒಟ್ಟು 47,085 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 23,794 ವಿದ್ಯಾರ್ಥಿಗಳಿಗೆ ಶ್ರೇಯಾಂಕ ನೀಡಲಾಗಿದೆ. ಎಂಜಿನಿಯರಿಂಗ್ ಪ್ರವೇಶಕ್ಕೆ 43,179 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ಕಾಮೆಡ್-ಕೆ ತಿಳಿಸಿದೆ.[ಕಾಮೆಡ್ ಕೆ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿಗಳು]
ಬೆಂಗಳೂರಿನ 97 ಕಾಲೇಜುಗಳು ಸೇರಿದಂತೆ ರಾಜ್ಯದ ಒಟ್ಟು 134 ಕಾಲೇಜುಗಳಲ್ಲಿ ಮೇ.11ರಂದು ಕಾಮೇಡ್ ಕೆ. ಸಿಇಟಿ ಪರೀಕ್ಷೆ ನಡೆದಿತ್ತು.
ಕಾಮೆಡ್ ಕೆ ಸಿಇಟಿಯ ಕೌನ್ಸಿಲಿಂಗ್ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಬಹುದು: www.comedk.org











Click it and Unblock the Notifications