ವೈದ್ಯರ ಮುಷ್ಕರ ಏಕೆ?, ಖಾರವಾಗಿ ಪ್ರಶ್ನಿಸಿದ ಸಿಎಂ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 16 : 'ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಸದನದಲ್ಲಿ ಇನ್ನೂ ಮಂಡನೆಯೇ ಆಗಿಲ್ಲ. ಹೀಗಿರುವಾಗ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡದೆ ಮುಷ್ಕರ ಮಾಡುವುದು ಸಮಂಜಸವೇ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಖಾಸಗಿ ವೈದ್ಯರ ಮುಷ್ಕರ, ಸರ್ಕಾರಿ ವೈದ್ಯರ ರಜೆ ಕಟ್

ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಮಸೂದೆ ಮಂಡನೆ ಸಂಬಂಧ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ. ನಿಮ್ಮೊಂದಿಗೂ ಸಮಾಲೋಚನೆ ಮಾಡುತ್ತೇನೆ. ಇಂತಹ ಸಂದರ್ಭದಲ್ಲಿ ಒಪಿಡಿ ಬಂದ್ ಮಾಡುವುದು ಸಮಂಜಸವಲ್ಲ' ಎಂದು ಹೇಳಿದರು.

ವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳು

Karnataka CM Siddaramaiah urges doctors to call off strike

'ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಸದನದಲ್ಲಿ ಇನ್ನೂ ಮಂಡನೆಯೇ ಆಗಿಲ್ಲ. ಆ ವಿಚಾರದ ಕುರಿತು ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. ಹೀಗಿರುವಾಗ ವೈದ್ಯರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವೈದ್ಯರ ಮುಷ್ಕರ, ಇಂದು OPDಗಳು ಬಂದ್

ಹೊರಬರು ಈ ಕ್ಷೇತ್ರಕ್ಕೆ ಬರುವುದಿಲ್ಲ : 'ವೈದ್ಯಕೀಯ ವೃತ್ತಿಯಲ್ಲಿ ಇರುವವರನ್ನು ಸರ್ಕಾರ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದನ್ನು ನಾವೆಲ್ಲ ವಿರೋಧಿಸಬೇಕು. ಹೀಗೆ ಮುಂದುವರೆದರೆ ಹೊಸಬರು ಕ್ಷೇತ್ರಕ್ಕೆ ಬರುವುದಿಲ್ಲ' ಎಂದು ಡಾ.ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah appealed doctors to return to duty. Doctor protesting against proposed amendments to the Karnataka Private Medical Establishments Act, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ