ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣಕ್ಕೆ ಬಂದ್ರು ಸಿಎಂ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆ. 22 : ಊರಿಗೆ ಬಂದಮೇಲೆ ಕೇರಿಗೆ ಬರಲೇಬೇಕು ! ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳಿಗೆ ಇಂದು ಸೇರಿಕೊಂಡರು. ಸಾಗರದಲ್ಲಿ ಇನ್ನೊಂದು ಬಿಂದು ಭರ್ತಿ ಆಯಿತು!

ರಾಜಕಾರಣಿಗಳು, ಸೆಲೆಬ್ರಿಟಿಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಮಾಧ್ಯಮ, ಸರಕಾರಗಳು, ಶ್ರೀಸಾಮಾನ್ಯರು ಮತ್ತೆಲ್ಲರ ಜಗಲಿಕಟ್ಟೆ ಆಗಿರುವ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಯೂಟ್ಯೂಬ್ ಖಾತೆಗಳಲ್ಲಿ ಮುಖ್ಯಮಂತ್ರಿಗಳು ವಿರಾಜಮಾನರಾದರು.

ಸೋಮವಾರ ಸಂಜೆ ವಿಧಾನಸೌಧದಲ್ಲಿ ತಮ್ಮ ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ನನಗೆ ಇವುಗಳ ಬಳಕೆ ಅಷ್ಟು ಗೊತ್ತಿಲ್ಲ. ಆದಷ್ಟು ಬೇಗ ಇವುಗಳನ್ನು ಕಲಿತು ನಾನೇ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.

Chief minister

'ಜನರೊಂದಿಗಿನ ನೇರ ಸಂಪರ್ಕದಿಂದ ಇಷ್ಟು ದಿನ ಅವರ ಸಮಸ್ಯೆಗಳನ್ನು ಸ್ವೀಕರಿಸುತ್ತಿದ್ದೆ. ಆದರೆ, ಜಗತ್ತು ಈಗ ಬದಲಾಗಿದೆ. ಜೊತೆಗೆ ಯುವ ಸಮುದಾಯ ಈಗ ಸಾಮಾಜಿಕ ಜಾಲತಾಣಗಳ ಜೊತೆ ಹೆಚ್ಚು ಸಕ್ರಿಯರಾಗಿದ್ದಾರೆ. ಸರ್ಕಾರದ ಕಾರ್ಯಗಳನ್ನು ಅವರಿಗೆ ತಲುಪಿಸಲು ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಅಗತ್ಯ ಮತ್ತು ಅನಿವಾರ್ಯತೆಯಿದೆ. ಆದ್ದರಿಂದ ನಾನು ಸಾಮಾಜಿಕ ಜಾಲತಾಣ ಪ್ರವೇಶಿಸಿದ್ದೇನೆ' ಎಂದರು.

ನನಗೆ ಮೋದಿ ಪ್ರೇರಣೆಯಲ್ಲ : 'ನಾನು ಸಾಮಾಜಿಕ ಜಾಲತಾಣ ಪ್ರವೇಶಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರೇರಣೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ನಾನು ಮೋದಿ ಪ್ರೇರಣೆಯಿಂದ ಜಾಲ ತಾಣಗಳಿಗೆ ಬಂದಿಲ್ಲ. ನನಗೆ ಇದರ ಯೋಚನೆ ಮೊದಲೇ ಇತ್ತು' ಎಂದು ಸಿದ್ದರಾಮಯ್ಯ ಹೇಳಿದರು.

* ಸಿಎಂ ಸಿದ್ದರಾಮಯ್ಯ ವೆಬ್‌ ಸೈಟ್‌
* ಸಿದ್ದರಾಮಯ್ಯ ಫೇಸ್ ಬುಕ್
* ಸಿಎಂ ಸಿದ್ದರಾಮಯ್ಯ ಟ್ವಿಟರ್

English summary
Karnataka CM Siddaramaiah goes online and arrives on Social Media. Website, Twitter, (https://twitter.com/CMofKarnataka) Facebook and on Youtube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X