ಜಾತಿ ಗಣತಿಯಲ್ಲಿ ವ್ಯತ್ಯಾಸ, 175 ಕೋಟಿ ಹೊಳೆಯಲ್ಲಿ ಕಿವುಚಿದ ಹುಣಸೆ!
ಕರ್ನಾಟಕ ಸರಕಾರ ಕೈಗೊಂಡ ಜಾತಿಗಣಯು ಹೊಣೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿದೆಯಾ? ಸರಕಾರಿ ದಾಖಲೆಗಳ ಜೊತೆಗೆ ಹೋಲಿಸಿದರೆ ಮೇಲ್ನೋಟಕ್ಕೆ ಹಾಗನ್ನಿಸುತ್ತಿದೆ.
ಬೆಂಗಳೂರು, ಜನವರಿ 3: ಕರ್ನಾಟಕ ಸರಕಾರ 2015ರಲ್ಲಿ ನಡೆಸಿದ ಸಮಾಜೋ-ಆರ್ಥಿಕ ಜಾತಿ ಗಣತಿಯು ಹೊರಹಾಕಿರುವ ಮಾಹಿತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾತಿ ಪ್ರಮಾಣ ಪತ್ರ ಹಾಗೂ ಗುರುತಿನ ಪತ್ರದ ಸರಕಾರದ ಹಳೆ ದಾಖಲೆ ಜೊತೆಗೆ ಈ ಸಂಖ್ಯೆಯು ತಾಳೆಯಾಗುತ್ತಿಲ್ಲ.
ಆರಂಭದಲ್ಲಿ ಗಣತಿಯ ಉದ್ದೇಶವೇ ಪ್ರಶ್ನಾರ್ಹವಾಗಿತ್ತು. ಇದೀಗ ವಿವಾದಾತ್ಮಕವಾಗಿರುವ ಈ ಸಂಖ್ಯೆಗಳು ಬೋಗಸ್ ಮತ್ತು ರಾಜಕೀಯ ಕಾರಣಗಳಿಗಾಗಿ ತಿರುಚಿರುವಂಥದ್ದು ಅನ್ನುವಂತೆ ಕಾಣುತ್ತಿವೆ. ಒನ್ ಇಂಡಿಯಾಗೆ ಲಭ್ಯವಾದ ದಾಖಲೆಗಳನ್ನು ಇಟ್ಟುಕೊಂಡು ತಹಶೀಲ್ದಾರ್ ಕಚೇರಿ ಹಾಗೂ ಕಂದಾಯ ಇಲಾಖೆಯ ಮಾಹಿತಿ ಜೊತೆ ಹೋಲಿಸಿದರೆ ವ್ಯತ್ಯಾಸ ಕಂಡುಬರುತ್ತಿದೆ.[ಲೋಕಾಯುಕ್ತದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!]
ಈ ಎರಡೂ ಕಡೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಾರೆ. ಒಂದು ಪ್ರದೇಶದ ನಿರ್ದಿಷ್ಟ ಜಾತಿಯ ಜನಸಂಖ್ಯೆಯನ್ನು ಗಣತಿಯಲ್ಲಿ ಉತ್ಪ್ರೇಕ್ಷೆಯಿಂದ ಕೊಡಲಾಗಿದೆ. ಇದಕ್ಕೆ ಉದಾಹರಣೆ ಅಂದರೆ ಚಿತ್ರದುರ್ಗ ಜಿಲ್ಲೆಯ ಮೇದಹಳ್ಳಿ. ತಹಶೀಲ್ದಾರ್ ಕಚೇರಿಯಿಂದ 1395 ಮಂದಿಗೆ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ. ಆದರೆ ಗಣತಿಯಲ್ಲಿ 6357 ಮಂದಿ ಬಳಿ ಜಾತಿ ಪ್ರಮಾಣ ಪತ್ರ ಇದೆ ಎಂದು ದಾಖಲಾಗಿದೆ.

ಇನ್ನು ಗಣತಿಯಲ್ಲಿ ಇರುವ 6357 ಹೆಸರಲ್ಲಿ ಕೇವಲ 360 ಹೆಸರು ಮಾತ್ರ ತಹಶೀಲ್ದಾರ್ ಕಚೇರಿ ದಾಖಲೆಯೊಂದಿಗೆ ತಾಳೆಯಾಗುತ್ತದೆ. ಇದು ಒಂದು ಜಿಲ್ಲೆಯ, ಒಂದು ಹಳ್ಳಿಯ ಸ್ಥಿತಿಯಾಯಿತು. ಇದೀಗ ಹೋರಾಟಗಾರರು ಆಕ್ಷೇಪಿಸುತ್ತಿರುವಂತೆ ಇಡೀ ಗಣತಿಯೇ ಬೋಗಸ್. ಶೇ 80ರಷ್ಟು ಜಾತಿ ಪ್ರಮಾಣ ಪತ್ರಗಳನ್ನು ಮರು ಪರಿಶೀಲಿಸಿಲ್ಲ ಅಥವಾ ಸರಕಾರಿ ದಾಖಲೆಗಳಲ್ಲೂ ಇಲ್ಲ.[ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]
ಆದ್ದರಿಂದ ಸಮೀಕ್ಷೆಯು ಜಾತಿಯ ಸಮೀಕರಣವನ್ನು ತೆರೆದಿಡುವುದರಲ್ಲಿ ಅನರ್ಹವಾಗಿದೆ. ಕಂದಾಯ ಇಲಾಖೆಯ ಸಮೀಕ್ಷೆಯೇ ಹೆಚ್ಚು ನಿಖರವಾದ ಮಾಹಿತಿ ನೀಡುತ್ತದೆ. ಏಕೆಂದರೆ ಜಾತಿ ಪ್ರಮಾಣ ಪತ್ರವನ್ನು ವಿತರಿಸುವ ಇಲಾಖೆ ಅದು. ಸರಕಾರದ್ದೇ ಇಲಾಖೆಯ ಮಾಹಿತಿಯನ್ನು ಸಮಾಜೋ ಆರ್ಥಿಕ ಜಾತಿ ಗಣತಿಗೆ ಪರಿಗಣನೆಗೆ ತೆಗೆದುಕೊಂಡಿಲ್ಲ.
ಈಗ ಸಂಖ್ಯೆಯು ಹೊಂದಾಣಿಕೆ ಅಗದ ಕಾರಣಕ್ಕೆ ಗಣತಿಯ ಒಟ್ಟಾರೆ ಪ್ರಕ್ರಿಯೇ ರಾಜಕೀಯ ಹುನ್ನಾರ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. 2013ರ ಬಜೆಟ್ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸವಲತ್ತುಗಳು ಹಾಗೂ ಮೀಸಲಾತಿಯನ್ನು ಸಮಾಜೋ ಆರ್ಥಿಕ ಗಣತಿಯ ಆಧಾರದಲ್ಲೇ ನಿಗದಿಪಡಿಸಲಾಗುವುದು ಎಂದು ಹೇಳಿದ್ದರು.[ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ]
ಕಳೆದ ಎಂಬತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಜಾತಿ ಆಧಾರದಲ್ಲಿ ಆರ್ಥಿಕ ಸ್ಥಾನಮಾನ, ಜಾತಿ, ಶೈಕ್ಷಣಿಕ ವಿದ್ಯಾಭ್ಯಾಸ, ಆಸ್ತಿ ಮತ್ತಿತರ ವಿವರಗಳನ್ನು ಮನೆ ಬಾಗಿಲಿಗೆ ಹೋಗಿ ಸಂಗ್ರಹಿಸುವ ಈ ಗಣತಿಗಾಗಿ ಸರಕಾರವು ಬಜೆಟ್ ನಲ್ಲಿ 175 ಕೋಟಿ ರೂಪಾಯಿ ಮೀಸಲಿರಿಸಿತ್ತು.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications