Rain Alert: ಮಳೆ ಎಚ್ಚರಿಕೆ.. ಮುಂದಿನ 5 ಗಂಟೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಚ್ಚರ!

ಮಳೆ.. ಮಳೆ.. ಮಳೆ.. ಮತ್ತೆ ಮಳೆ ಅಬ್ಬರ ಬಲು ಜೋರಾಗಿದ್ದು, ಎಲ್ಲೆಲ್ಲೂ ಮಳೆರಾಯ ತನ್ನ ಅಸಲಿ ರೂಪ ತೋರಿಸುತ್ತಿದ್ದಾನೆ. ಮಳೆ ಇನ್ನೇನು ಕಡಿಮೆ ಆಯ್ತು ಅಂತಾ ನೆಮ್ಮದಿ ಪಡುವ ಸಮಯದಲ್ಲೇ ಮತ್ತೆ ಮಳೆ ಆರ್ಭಟ ಜೋರಾಗುತ್ತಿದೆ. ಅದರಲ್ಲೂ ಮಳೆ ಅಬ್ಬರಕ್ಕೆ ಈಗ ಬೆಂಗಳೂರು ಸೇರಿ ಹಲವು ಜಿಲ್ಲೆಗಳ ಜನರು ನಲುಗಿ ಹೋಗಿದ್ದು, ಮುಂದಿನ 5 ಗಂಟೆ ಸಮಯದಲ್ಲಿ ಮುಂಗಾರು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ ಅಂತ ವಾರ್ನಿಂಗ್ ಕೂಡ ಕೊಡಲಾಗಿದೆ.

ಕಳೆದ ಒಂದೂವರೆ ತಿಂಗಳಿಂದ ಕೂಡ ಮಳೆರಾಯ ಬ್ರೇಕ್ ಪಡೆಯದೆ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಸುತ್ತಿದ್ದಾನೆ. ಹೀಗಾಗಿ ಜನರು ಕೂಡ ಮಳೆ ಕಂಡು ಹೆದರುವ ಸ್ಥಿತಿ ಬಂದಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆಗೆ ಹಾನಿ ಆಗಿದೆ. ಹೀಗಾಗಿ ರೈತರು ಕಣ್ಣೀರು ಹಾಕುವ ಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೆ ಸೂಕ್ಷ್ಮ ಸ್ಥಿತಿ ತಲುಪಿದ ಸಮಯದಲ್ಲೇ ಮತ್ತೆ ಮುಂದಿನ 5 ಗಂಟೆ ಭಾರಿ ಮಳೆ ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಭಾರಿ ಮಳೆ ಸುರಿಯುವ, ಕರ್ನಾಟಕದ ಜಿಲ್ಲೆಗಳು ಯಾವುವು? ಮುಂದೆ ಓದಿ.

Karnataka Capital Bengaluru And Nearby Cities Will Witness Heavy Rain In 5 Hours

ಯಾವ ಯಾವ ಜಿಲ್ಲೆಗಳಿಗೆ ಮಳೆ?

ಮಲೆನಾಡು & ಕರಾವಳಿ ಪ್ರದೇಶ ಸೇರಿ ಬೆಂಗಳೂರಲ್ಲೂ ಮಳೆ ಆರ್ಭಟ ಗ್ಯಾರಂಟಿ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆ & ತಾಲೂಕುಗಳಿಗು ಭಾರಿ ಮಳೆ ಬೀಳಲಿದ್ದು, ಸಂಜೆಯ ನಂತರ ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದು ಮಾತ್ರ ಅಲ್ಲ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಳ್ಳಾರಿ, ಕೊಡಗು, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಮತ್ತೆ ಮಳೆ ಅಬ್ಬರಿಸಲಿದೆ. ಹಾಗಾದ್ರೆ ರಾಜಧಾನಿ ಬೆಂಗಳೂರು ಪರಿಸ್ಥಿತಿ ಏನಾಗಲಿದೆ? ಮುಂದೆ ಓದಿ.

ಬೆಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ

ಹವಾಮಾನ ಇಲಾಖೆ ವರದಿ ಪ್ರಕಾರ ಇದೀಗ ಸಂಜೆಯ ತನಕ ಬೆಂಗೂರಿನಲ್ಲಿ ಸಾಮಾನ್ಯವಾದ ವಾತಾವರಣ ಇದ್ದರೂ, ಇಂದು ಸಂಜೆ ನಂತರ ಮಳೆಯ ಆರ್ಭಟ ಬಲು ಜೋರಾಗಲಿದೆ. ಈ ಕಾರಣಕ್ಕೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಮತ್ತೊಂದು ಕಡೆ ಮಳೆ ಅಬ್ಬರ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಅದನ್ನ ನಿಭಾಯಿಸಲು ಅಧಿಕಾರಿಗಳೂ ಸಿದ್ಧತೆ ನಡೆಸಿದ್ದಾರೆ. ಹಾಗೇ, ಜನರಿಗೆ ಕೂಡ ಮಳೆ ಬರುವಾಗ ಎಚ್ಚರಿಕೆಯಿಂದ ಓಡಾಡಲು ಸಲಹೆ ನೀಡಲಾಗಿದೆ.

ಮಳೆ ಜೊತೆಗೆ ಗಾಳಿ ಅಬ್ಬರ!

ಮುಂಗಾರು ಮಳೆಯ ಜೊತೆಗೆ, ಗಾಳಿ ಅಬ್ಬರವೂ ಕರ್ನಾಟಕದ ಜನರಿಗೆ ಇಂದು ಕಾಡಲಿದೆ. ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಮುಂದಿನ 5 ಗಂಟೆಯಲ್ಲಿ ಭಾರಿ ಮಳೆ ಗುಡುಗು & ಮಿಂಚು ಎಂಟ್ರಿ ಆಗಲಿದೆ. ಇದರ ಜೊತೆಗೆ ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುಂದಿನ ಮುನ್ನೆಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+