ಮೂರು ವರ್ಷಗಳಲ್ಲಿ ಸಬ್ ಅರ್ಬನ್ ರೈಲು ಓಡಲಿದೆ!

ಬೆಂಗಳೂರು, ಜನವರಿ 31: ಬೆಂಗಳೂರಿನ ನಾಗರಿಕರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ. ಸಬ್ ಅರ್ಬನ್ ರೈಲು ಯೋಜನೆಯ ಮೊದಲ ಹಂತದ ಯೋಜನೆ ಕಾಮಗಾರಿಯ ಆರಂಭಕ್ಕೆ ಸಚಿವ ಸಂಪುಟಕ್ಕೆ ಅನುಮೋದನೆ ಸಿಕ್ಕಿದೆ.

ಸುಮಾರು 10,949 ಕೋಟಿ ರು ವೆಚ್ಚದ ಯೋಜನೆಯ 1,745 ಕೋಟಿ ರೂ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ-ಹಂತ 1 ಜಾರಿಗೆ ಬರಲಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದರು.

Karnataka Cabinet okays DPR for suburban railway First Phase

ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ. ಸುಮಾರು 58 ರೈಲುಗಳು,116 ಸೇವೆಗಳನ್ನು ಯೋಜನೆ ಒಳಗೊಂಡಿದ್ದು, ಸುಮಾರು 440 ಕಿ.ಮೀ ದೂರ ಕ್ರಮಿಸಲಿದೆ.

ಬೆಂಗಳೂರು-ಮಂಡ್ಯ, ಬೆಂಗಳೂರು-ಯಶವಂತಪುರ, ಯಶವಂತಪುರ-ತುಮಕೂರು, ಯಶವಂತಪುರ-ಯಲಹಂಕ, ಯಲಹಂಕ-ಬೈಯ್ಯಪ್ಪನಹಳ್ಳಿ, ಯಶವಂತಪುರ-ಬೈಯ್ಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ, ಬೈಯಪ್ಪನಹಳ್ಳಿ-ಹೊಸೂರು ಸೋಲದೇವನಹಳ್ಳಿ-ಯಲಹಂಕ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭ.

ಇದಲ್ಲದೆ, ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಪ್ರಸ್ತುತ ರಾಮನಗರ ಹಾಗೂ ವೈಟ್ ಫೀಲ್ಡ್ ಮಾರ್ಗದ ಯೋಜನೆಗೆ ಶೇ 80ರಷ್ಟು ಯೋಜನಾ ವೆಚ್ಚವನ್ನು ಭರಿಸುತ್ತಿದೆ. ರಾಜ್ಯದಲ್ಲಿ ಇನ್ನೂ 13ಕ್ಕೂ ಅಧಿಕ ವಿದ್ಯುತ್ ಚಾಲಿತ ಮೆಮು ರೈಲಿಗಾಗಿ ಮನವಿ ಸಲ್ಲಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+