8 ಜನರಿಗೆ ಮಂತ್ರಿ ಪಟ್ಟ; ಮೂರೇ ಜನ ಸಚಿವರಿಗೆ ಕೊಠಡಿ ಭಾಗ್ಯ: ವಿಧಾನಸೌಧದಲ್ಲಿ ಯಾರಿಗೆ ಯಾವ ಕೊಠಡಿ ತಿಳಿಯಿರಿ
ಬೆಂಗಳೂರು, ಮೇ 22: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಮೇ 20 ರಂದು ಸರ್ಕಾರ ರಚನೆ ಮಾಡಿದ್ದು, ಸಿದ್ದರಾಮಯ್ಯ ಸಿಎಂ ಆಗಿ, ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಹಾಗೂ 8 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈಗಾಗಲೇ ಹಲವು ಜನ ಹಿರಿಯ ಶಾಸಕರು ಸಚಿವ ಸ್ಥಾನವನ್ನ ನೀಡದ ಹಿನ್ನಲೆ ಅಸಮಾಧಾನಗೊಂಡಿದ್ದು, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 8 ಜನ ಸಚಿವರ ಪೈಕಿ 3 ಜನ ಸಚಿವರಿಗೆ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಕುರಿತು ಕೊಠಡಿಗೆ ಹಂಚಿಕೆ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಯಾರಿಗೆ ಯಾವ ಖಾತೆ ಎನ್ನುವುದು ಮಾತ್ರ ಇನ್ನು ಹಂಚಿಕೆಯಾಗಿಲ್ಲ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ವಿಧಾನಸೌಧಕ್ಕೆ ತೆರಳಿರುವ ನೂತನ ಸಚಿವರು, ಖಾತೆ ಹಂಚಿಕೆ ಹಾಗೂ ಕೊಠಡಿ ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಇನ್ನೂ ವಿಧಾನಸೌಧದಲ್ಲಿ ಕೆ ಜೆ ಜಾರ್ಜ್ ಅವರಿಗೆ 317/317 ಎ ಕೊಠಡಿಯನ್ನ ನೀಡಿಲಾಗಿದ್ದು, ಎಂ ಬಿ ಪಾಟೀಲ್ ಅವರಿಗೆ 344/344ಎ ಕೊಠಡಿಯನ್ನ ನೀಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಗೆ ವಿಕಾಸಸೌಧದಲ್ಲಿ 143/146 ಕೊಠಡಿಯನ್ನ ನೀಡಲಾಗಿದೆ.













Click it and Unblock the Notifications