ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಚೇತನರು ಪಡೆದಿದ್ದ ಸಾಲ ಮನ್ನಾ

|
Google Oneindia Kannada News

ಬೆಂಗಳೂರು, ಮೇ 24 : ಆಧಾರ ಯೋಜನೆಯಡಿ ವಿಶೇಷ ಚೇತನರು ಪಡೆದಿದ್ದ ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಟ್ಟು 11.52 ಕೋಟಿ ಮೊತ್ತದ ಸಾಲಾ ಮನ್ನಾ ಆಗಲಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು. 'ವಿಶೇಷ ಚೇತನರು ಆಧಾರ ಯೋಜನೆಯಡಿ ಸಾಲ ಪಡೆದಿದ್ದರು. ಇದರಲ್ಲಿ 45.75 ಲಕ್ಷ ಸಾಲ ಮಾತ್ರ ಮರುಪಾವತಿಯಾಗಿತ್ತು. ಬಾಕಿ ಉಳಿದಿದ್ದ ಸಾಲವನ್ನು ಮನ್ನಾ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ' ಎಂದರು. [ಪ.ಜಾ/ಪ.ಪಂಗಡದವರಿಗೆ ಸರ್ಕಾರಿ ಟೆಂಡರ್ ನಲ್ಲಿ ಮೀಸಲಾತಿ]

tb jayachandra

ಇತರ ನಿರ್ಣಯಗಳು [6 ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ, ಟೋಲ್ ಸಂಗ್ರಹ]

* ಬೆಂಗಳೂರಿನ ಕಾಲುವೆಗಳಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳಿಗೆ ಹರಿಸುವ ಯೋಜನೆಗೆ ಚಿಂತಾಮಣಿ ತಾಲೂಕನ್ನು ಸೇರಿಸಲು ಒಪ್ಪಿಗೆ ನೀಡಲಾಗಿದೆ. ಸುಮಾರು 148 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.

* ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯನ್ನು ಸೈನಿಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು 22.51 ಕೋಟಿ ರೂ. ಬಿಡುಗಡೆ
* ಕಲಬುರಗಿ ವಿಮಾನ ನಿಲ್ದಾಣದ ಬಾಕಿ ಇರುವ ಕಾಮಗಾರಿಗಾಗಿ 88 ಕೋಟಿ ರೂ. ನೀಡಲು ಒಪ್ಪಿಗೆ
* ಮಂಗಳೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 11 ಕೋಟಿ ರೂ. ಅನುದಾನ

English summary
Karnataka government in cabinet meeting decided to waive loans and interest of Rs 11.07 crore provided to physically challenged people under the Adhara scheme. The government took the decision as many of the beneficiaries were finding it difficult to repay the loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X