ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?

By Mahesh
|
Google Oneindia Kannada News

ಬೆಂಗಳೂರು, ಜೂನ್ 01: ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ. ಜೂನ್ ಮೊದಲ ವಾರದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ ಪರಮೇಶ್ವರ ಅವರ ಜತೆಗೆ ಇನ್ನು 20 ಮಂದಿ ಸಂಪುಟ ಸೇರಲಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್ 12, ಜೆಡಿಎಸ್ 8 ಮಂದಿ ಶಾಸಕರಿಗೆ ಸಚಿವರ ಸ್ಥಾನದ ಭಾಗ್ಯ ಸಿಗಲಿದೆ.ಮಿಕ್ಕ ನಾಲ್ಕು ಖಾತೆಗಳಿಗೆ ನಂತರದ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ.

ಸಂಪುಟ ವಿಸ್ತರಣೆ ಚರ್ಚೆ ಸಭೆಗೆ ಆಹ್ವಾನಿಸಿಲ್ಲ: ಡಿಕೆಶಿ ಹೊಸ ಬಾಂಬ್ ಸಂಪುಟ ವಿಸ್ತರಣೆ ಚರ್ಚೆ ಸಭೆಗೆ ಆಹ್ವಾನಿಸಿಲ್ಲ: ಡಿಕೆಶಿ ಹೊಸ ಬಾಂಬ್

ಸದ್ಯಕ್ಕೆ ಪಕ್ಷವಾರು ಖಾತೆ ಹಂಚಿಕೆ ಹೀಗಿದೆ:
ಜೆಡಿಎಸ್​ : ಇಂಧನ, ಹಣಕಾಸು, ಲೋಕೋಪಯೋಗಿ, ಸಹಕಾರ, ಅಬಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತೋಟಗಾರಿಕೆ, ಸಣ್ಣ ನೀರಾವರಿ

ಕಾಂಗ್ರೆಸ್ : ​ ಗೃಹ, ಕಂದಾಯ, ಪಂಚಾಯತ್​ರಾಜ್, ಆರೋಗ್ಯ, ಜಲಸಂಪನ್ಮೂಲ,ಆಹಾರ ಮತ್ತು ನಾಗರಿ ಪೂರೈಕೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ ಬಿಟಿ, ವಸತಿ, ಗಣಿ, ಸಮಾಜ ಕಲ್ಯಾಣ, ಕೃಷಿ, ಬೆಂಗಳೂರು ಅಭಿವೃದ್ಧಿ,ಅಲ್ಪಸಂಖ್ಯಾತ ಮತ್ತು ವಕ್ಫ್​ ಖಾತೆ ಕಾಂಗ್ರೆಸ್​ ಪಾಲಿಗೆ ಸಿಗುವ ಸಾಧ್ಯತೆ

ಸಚಿವ ಸಂಪುಟ ವಿಸ್ತರಣೆ ಮತ್ತೆ ಕಗ್ಗಂಟು? ಏನೇನೋ ಸುದ್ದಿ! ಸಚಿವ ಸಂಪುಟ ವಿಸ್ತರಣೆ ಮತ್ತೆ ಕಗ್ಗಂಟು? ಏನೇನೋ ಸುದ್ದಿ!

ಕಾಂಗ್ರೆಸ್-ಜೆಡಿಎಸ್‌ ಸಂಭಾವ್ಯ ಖಾತೆ, ಸಚಿವರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದೆ ಇಂದು ಸಂಜೆ ಈ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ. ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆಯಾದ ಬಳಿಕ 20 ಸಚಿವರುಗಳ ಪೈಕಿ. ಯಾರಿಗೆ ಯಾವ ಖಾತೆ ಇಲ್ಲಿದೆ ಪಟ್ಟಿ...

ಎಚ್ ಡಿ ಕುಮಾರಸ್ವಾಮಿ- ಮುಖ್ಯಮಂತ್ರಿ

ಎಚ್ ಡಿ ಕುಮಾರಸ್ವಾಮಿ- ಮುಖ್ಯಮಂತ್ರಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗಳ ಬಳಿ ಗುಪ್ತಚರ ಖಾತೆ ಇರುತ್ತದೆ. ಉಳಿದಂತೆ ಹಣಕಾಸು, ಡಿಎಪಿಆರ್ ಖಾತೆಯನ್ನು ಕುಮಾರಸ್ವಾಮಿ ಅವರ ಬಳಿ ಇಟ್ಟುಕೊಳ್ಳಲಿದ್ದಾರೆ. ಸಂಪುಟ ವಿಸ್ತರಣೆ ತನಕ ಹಂಚಿಕೆಯಾಗದ ನಾಲ್ಕು ಖಾತೆಗಳನ್ನು ಕೂಡಾ ಸಿಎಂ ಹೊಂದಲಿದ್ದಾರೆ.

ಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿ

ಡಾ.ಜಿ.ಪರಮೇಶ್ವರ -ಗೃಹ ಸಚಿವ

ಡಾ.ಜಿ.ಪರಮೇಶ್ವರ -ಗೃಹ ಸಚಿವ

ಗೃಹ ಖಾತೆ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾಗಲಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪರಮೇಶ್ವರ ಅವರು ಕೆಲವು ತಿಂಗಳು ಗೃಹ ಖಾತೆ ಸಚಿವರಾಗಿದ್ದರು. ಹೀಗಾಗಿ, ಜಿ ಪರಮೇಶ್ವರ ಅವರು ಗೃಹ ಸಚಿವರಾಗಲಿದ್ದಾರೆ.

ಲೋಕೋಪಯೋಗಿ- ಎಚ್ ಡಿ ರೇವಣ್ಣ

ಲೋಕೋಪಯೋಗಿ- ಎಚ್ ಡಿ ರೇವಣ್ಣ

ಸರ್ಕಾರದ ಮತ್ತೊಂದು ಮಹತ್ವದ ಖಾತೆ ಲೋಕೋಪಯೋಗಿ. ಈ ಖಾತೆ ಸಹ ಜೆಡಿಎಸ್‌ಗೆ ಒಲಿಯುವ ಸಾಧ್ಯತೆ ಇದೆ. ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಿಂದೆಯೂ ಅವರು ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಇಂಧನ ಸಚಿವ -ಡಿಕೆ ಶಿವಕುಮಾರ್

ಇಂಧನ ಸಚಿವ -ಡಿಕೆ ಶಿವಕುಮಾರ್

ಇಂಧನ ಖಾತೆ ಕಾಂಗ್ರೆಸ್ ಪಾಲಾಗಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿಯೂ ಅವರು ಇಂಧನ ಸಚಿವರಾಗಿದ್ದರು.

ಜಲಸಂಪನ್ಮೂಲ ಖಾತೆ- ಎಂಬಿ ಪಾಟೀಲ್

ಜಲಸಂಪನ್ಮೂಲ ಖಾತೆ- ಎಂಬಿ ಪಾಟೀಲ್

ಜಲಸಂಪನ್ಮೂಲ ಖಾತೆ ಕಾಂಗ್ರೆಸ್‌ಗೆ ಹೋಗಲಿದೆ. ಎಂ.ಬಿ.ಪಾಟೀಲ್ ಅಥವ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಖಾತೆಯ ಜವಾವ್ದಾರಿ ವಹಿಸಿಕೊಳ್ಳಲಿದ್ದಾರೆ. ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆಯ ಜವಾಬ್ದಾರಿ ಹೊತ್ತಿದ್ದರು.

ನಗರಾಭಿವೃದ್ಧಿ ಸಚಿವ -ಕೆಜೆ ಜಾರ್ಜ್

ನಗರಾಭಿವೃದ್ಧಿ ಸಚಿವ -ಕೆಜೆ ಜಾರ್ಜ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಜೆ.ಜಾರ್ಜ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಗೆ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಕೆ.ಜೆ.ಜಾರ್ಜ್ ಮೊದಲು ಗೃಹ ಸಚಿವರಾಗಿದ್ದರು. ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿದ್ದರು.

ಐಟಿ ಬಿಟಿ -ಕೃಷ್ಣ ಬೈರೇಗೌಡ

ಐಟಿ ಬಿಟಿ -ಕೃಷ್ಣ ಬೈರೇಗೌಡ

ಬ್ಯಾಟರಾಯನಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕೃಷಿ ಸಚಿವರಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರಲ್ಲಿ ಕೃಷ್ಣ ಬೈರೇಗೌಡ ಅವರು ಸಹ ಒಬ್ಬರು. ಈ ಬಾರಿ ಇವರಿಗೆ ಐಟಿ ಬಿಟಿ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಸಾರಿಗೆ -ರಾಮಲಿಂಗಾರೆಡ್ಡಿ

ಸಾರಿಗೆ -ರಾಮಲಿಂಗಾರೆಡ್ಡಿ

ಹಿರಿಯ ಕಾಂಗ್ರೆಸ್ ಮುಖಂಡ, ಬಿ.ಟಿ.ಎಂ.ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಗೃಹ, ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಸಾರಿಗೆ ಸಿಗುವ ಸಾಧ್ಯತೆಯಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಕೆ.ಜಿ.ಎಫ್‌.ಕ್ಷೇತ್ರದ ಶಾಸಕಿ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಪುತ್ರಿ ರೂಪ ಶಶಿಧರ್ ಅವರು ಮಹಿಳಾ ಕೋಟಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರಲಿದ್ದಾರೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಿಗಲಿದೆ.

ಆರ್.ವಿ.ದೇಶಪಾಂಡೆ -ಬೃಹತ್ ಕೈಗಾರಿಕೆ

ಆರ್.ವಿ.ದೇಶಪಾಂಡೆ -ಬೃಹತ್ ಕೈಗಾರಿಕೆ

ಆರ್.ವಿ.ದೇಶಪಾಂಡೆ ಅವರಿಗೆ ಬೃಹತ್ ಕೈಗಾರಿಕಾ ಖಾತೆ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಹ ಅವರು ಪ್ರವಾಸೋದ್ಯಮ, ಬೃಹತ್ ಕೈಗಾರಿಕಾ ಖಾತೆ ಹೊಣೆ ನಿರ್ವಹಿಸಿದ್ದರು. ರಾಜ್ಯದಕ್ಕೆ ಬಂಡವಾಳವನ್ನು ಆಕರ್ಷಣೆ ಮಾಡಲು ಹೂಡಿಕೆದಾರರ ಸಮಾವೇಶವನ್ನು ನಡೆಸಿದ್ದರು.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್

ಮಂಡ್ಯದ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾಗುವ ಸಾಧ್ಯತೆ ಇದೆ.

ಆರೋಗ್ಯ ಖಾತೆ- ಯುಟಿ ಖಾದರ್

ಆರೋಗ್ಯ ಖಾತೆ- ಯುಟಿ ಖಾದರ್

ಆರೋಗ್ಯ ಇಲಾಖೆ ಕಾಂಗ್ರೆಸ್ ಪಾಲಾಗಲಿದೆ. ಯು.ಟಿ.ಖಾದರ್ ಅಥವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಆರೋಗ್ಯ ಖಾತೆಯ ಹೊಣೆಯನ್ನು ನಿರ್ವಹಿಸುವ ಸಾಧ್ಯತೆ ಇದೆ. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದರು. ಹೀಗಾಗಿ, ಮತ್ತೊಮ್ಮೆ ಖಾದರ್ ಗೆ ಇದೇ ಖಾತೆ ಸಿಗುವ ಸಾಧ್ಯತೆ ಇದೆ

ಅಬಕಾರಿ ಇಲಾಖೆ- ಸತೀಶ್ ಜಾಕಿಹೊಳಿ

ಅಬಕಾರಿ ಇಲಾಖೆ- ಸತೀಶ್ ಜಾಕಿಹೊಳಿ

ಅಬಕಾರಿ ಇಲಾಖೆ ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವ ಖಾತೆಯಾಗಿದೆ. ಈ ಖಾತೆ ಕಾಂಗ್ರೆಸ್ ವಶವಾಗಲಿದೆ. ಸತೀಶ್ ಜಾಕಿಹೊಳಿ ಅವರು ಅಬಕಾರಿ ಖಾತೆ ಸಚಿವರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರಿಗೆ ಅಬಕಾರಿ ಖಾತೆ ನೀಡಲಾಗಿತ್ತು. ಆದರೆ, ಅವರು ಖಾತೆ ಬೇಡ ಎಂದು ಸಣ್ಣ ಕೈಗಾರಿಕೆ ಖಾತೆ ಪಡೆದಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಜೆಡಿಎಸ್ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ

ಕೃಷಿ ಖಾತೆ- ಬಂಡೆಪ್ಪ ಕಾಶೆಂಪೂರ

ಕೃಷಿ ಖಾತೆ- ಬಂಡೆಪ್ಪ ಕಾಶೆಂಪೂರ

ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾದ ಬಂಡೆಪ್ಪ ಕಾಶೆಂಪೂರ ಅವರು ಕೃಷಿ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ವಸತಿ -ಕೃಷ್ಣಪ್ಪ

ವಸತಿ -ಕೃಷ್ಣಪ್ಪ

ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎ.ಕೃಷ್ಣಪ್ಪ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ವಸತಿ ಸಚಿವರಾಗಿದ್ದರು.

ಕಂದಾಯ ಖಾತೆ-ಎಚ್ ವಿಶ್ವನಾಥ್

ಕಂದಾಯ ಖಾತೆ-ಎಚ್ ವಿಶ್ವನಾಥ್

ಸರ್ಕಾರದಲ್ಲಿ ಕಂದಾಯ ಇಲಾಖೆಗೆ ಹೆಚ್ಚಿನ ಮಹತ್ವವಿದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಖಾತೆ ಇದಾಗಿದೆ. ಕಂದಾಯ ಖಾತೆ ಜೆಡಿಎಸ್‌ಗೆ ಬರಲಿದೆ. ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಕಂದಾಯ ಖಾತೆ ಸಚಿವರಾಗುವ ಸಾಧ್ಯತೆ ಇದೆ.

ಸಹಕಾರ- ಜಿಟಿ ದೇವೇಗೌಡ

ಸಹಕಾರ- ಜಿಟಿ ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರಿಗೆ ಸಹಕಾರ ಖಾತೆ ಒಲಿಯುವ ಸಾಧ್ಯತೆಯಿದೆ.

English summary
Karnataka Cabinet Expansion 2018 : 12 Congress and 8 JD(S) MLA's will join Chief Minister H.D.Kumaraswamy's JDS-Congress coalition government cabinet. Who will get which portfolio here is the probable list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X