ಕರ್ನಾಟಕ ಬಜೆಟ್ 2026: ಯುವನಿಧಿ ಯೋಜನೆಗೆ ಅನುದಾನ ಇಲ್ಲವೇ, ನಿರುದ್ಯೋಗಿ ಯುವಕರಲ್ಲಿ ಆತಂಕ
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಯುವನಿಧಿ' ಯೋಜನೆಯ ಭವಿಷ್ಯದ ಕುರಿತು ಈಗ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. 2026-27ನೇ ಸಾಲಿನ ಬಜೆಟ್ ಮತ್ತು ಹಣಕಾಸು ಹಂಚಿಕೆಯ ಬಳಿಕ, ಈ ಯೋಜನೆಗೆ ಹೊಸದಾಗಿ ಅನುದಾನ ಮೀಸಲಿಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಯೋಜನೆಯು ಅರ್ಧಕ್ಕೇ ನಿಲ್ಲುತ್ತಿದೆಯೇ ಎಂಬ ಆತಂಕ ಮೂಡಿದೆ.
2023ರಲ್ಲಿ ಆರಂಭವಾದ ಈ ಯೋಜನೆಯಡಿ ಪದವೀದರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೊಮಾ ಯುವಕರಿಗೆ 1500 ನೆರವು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಉದ್ಯೋಗ ಸಿಗುವವರೆಗೆ ಈ ನೆರವು ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಇದರ ಮೂಲಕ ರಾಜ್ಯದ ಸಾವಿರಾರು ಯುವಕರು ಈಗಾಗಲೇ ಪ್ರಯೋಜನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. 2026-27ನೇ ಸಾಲಿನ ಬಜೆಟ್ ಮತ್ತು ಹಣಕಾಸು ಹಂಚಿಕೆಯ ಬಳಿಕೆ ಈ ಯೋಜನೆ ಹೊಸದಾಗಿ ಅನುದಾನ ಮೀಸಲಿಟ್ಟಿಲ್ಲ ಎನ್ನವುದು ಈಗ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ.

ಸರ್ಕಾರದ ಸಮರ್ಥನೆ: ಸರ್ಕಾರಿ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಮೂಲಗಳ ಪ್ರಕಾರ, ಯೋಜನೆಯನ್ನು ನಿಲ್ಲಿಸಲಾಗಿಲ್ಲ. ಈಗಾಗಲೇ ನೋಂದಾಯಿಸಿಕೊಂಡವರಿಗೆ ಹಣ ಪಾವತಿಸುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಹಣಕಾಸು ವ್ಯವಸ್ಥೆಯನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
ಪ್ರಸ್ತುತ ಆಗಿರುವ ಸಮಸ್ಯೆ ಏನು
ಇತ್ತೀಚಿನ ಬಜೆಟ್ ಚರ್ಚೆಗಳ ನಂತರ ಯೋಜನೆಗೆ ಹೊಸ ಅನುದಾನದ ಕೊರತೆ ಎದುರಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೊಸ ಅರ್ಜಿಗಳ ನೋಂದಣಿ ಪ್ರತಿಕ್ರಿಯೆ ನಿಧಾನವಾಗಿರುವುದರಿಂದ ಮತ್ತು ಬಜೆಟ್‌ನಲ್ಲಿ ಹಣ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಯುವಕರಲ್ಲಿ ಆತಂಕ ಮೂಡಿಸಿದೆ.
ರಾಜಕೀಯ ಆರೋಪ-ಪ್ರತ್ಯಾರೋಪ:
ವಿರೋಧ ಪಕ್ಷಗಳ ಟೀಕೆ: ಸರ್ಕಾರ ಚುಣಾವಣಾ ಸಮಯದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದ ಸ್ಥಿತಿಗೆ ತಲುಪಿದೆ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರುತ್ತಿದ್ದಾರೆ.
ಯೋಜನೆಯ ಇತಿಹಾಸ ಮತ್ತು ಉದ್ದೇಶ:
2023ರಲ್ಲಿ ಆರಂಭವಾದ ಈ ಯೋಜನೆ ಪದವಿ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಗುರಿ ಹೊಂದಿತ್ತು.
ತಜ್ಞರ ಅಭಿಪ್ರಾಯ
ದೊಡ್ಡಮಟ್ಟದ ಕಲ್ಯಾಣ ಯೋಜನೆಗಳನ್ನು ನಿರಂತರವಾಗಿ ನಡೆಸಲು ಬೃಹತ್ ಮೊತ್ತದ ಹಣದ ಅಗತ್ಯವಿರುತ್ತದೆ. ರಾಜ್ಯದ ಆದಯ ಸಂಗ್ರಹ ಮತ್ತು ವೆಚ್ಚಗಳ ನಡುವಿನ ಸಮತೋಲನ ಕಾಯ್ದುಕೊಳ್ಳವುದು ಸವಾಲಾಗಿದ್ದು ಈ ಹಿನ್ನಲೆಯಲ್ಲಿ ಕೆಲವು ಯೋಜನೆಗಳಲ್ಲಿ ತಾತ್ಕಾಲಿಕ ಬದಲಾವಣೆಗಳು ಅಥವಾ ವಿಳಂಬಗಳು ಸಂಭವಿಸಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ತೀರ್ಮಾನ:
ಯುವನಿಧಿ ಯೋಜನೆಯ ಭವಿಷ್ಯವು ಸದ್ಯ ಅನಿಶ್ಚಿತವಾಗಿದೆ. ಹೊಸ ಪದವೀಧರರು ಯೋಜನೆಯ ಮುಂದುವರಿಕೆಗಾಗಿ ಸರ್ಕಾರದ ಸ್ಪಷ್ಟ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ಹಣಕಾಸು ಹಂಚಿಕೆಯ ಮೇಲೆ ಈ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications